ಬೆಂಗಳೂರಿನಲ್ಲಿ ಆಸಿಸ್-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ; ಕ್ರೀಡಾಂಗಣದ ಸುತ್ತಲೂ ಪೊಲೀಸ್ ಸರ್ಪಗಾವಲು
ಬೆಂಗಳೂರಿನಲ್ಲಿ ಇಂದು ಆಸಿಸ್ ಮತ್ತು ಪಾಕ್ ನಡುವೆ ಹೈವೋಲ್ಟೇಜ್ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಹಿನ್ನೆಲೆ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತಾ ಭಾರೀ ಪೊಲೀಸ್ ಬಂದೋಬಸ್ತ್.
ಬೆಂಗಳೂರು (ಅ.20): ಬೆಂಗಳೂರಿನಲ್ಲಿ ಇಂದು ಆಸಿಸ್ ಮತ್ತು ಪಾಕ್ ನಡುವೆ ಹೈವೋಲ್ಟೇಜ್ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಹಿನ್ನೆಲೆ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತಾ ಭಾರೀ ಪೊಲೀಸ್ ಬಂದೋಬಸ್ತ್. ಕ್ರೀಡಾಂಗಣದ ಒಳಗೂ ಹೊರಗೂ ಪೊಲೀಸ್ ಬಿಗಿ ಭದ್ರತೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ಭದ್ರತೆ. ಪ್ರತೀ ಗೇಟ್ ಬಳಿ ಪೊಲೀಸ್ ಸಿಬ್ಬಂದಿ ನೇಮಕ. ಇಂದಿನ ಮ್ಯಾಚ್ ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಹಿನ್ನೆಲೆ ಕ್ವೀನ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಹೀಗಾಗಿ ಈ ರಸ್ತೆಯಲ್ಲಿಂದು ಸಂಚಾರ ದಟ್ಟಣೆ ಇರಲಿದ್ದು, ವಾಹನ ಸವಾರರಿಗೆ ತೊಂದರೆಯಾಗದಂತೆ ಸಂಚಾರಿ ಪೊಲೀಸರಿಂದ ನಿಗಾವಹಿಸಲಾಗಿದೆ.
26 ಸಾವಿರ ರನ್ ಎಲೈಟ್ ಕ್ಲಬ್ ಸೇರಿದ ವಿರಾಟ್ ಕೊಹ್ಲಿ..!
ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿ:
ಇಂದು ಬೆಂಗಳೂರು ನಗರದಲ್ಲಿ ವರ್ಲ್ಡ್ ಕಪ್ ಮೊದಲ ಪಂದ್ಯ ನಡೆಯುತ್ತಿದೆ. ಆಸಿಸ್-ಪಾಕ್ ನಡುವೆ ನಡೀತಿರೋ ಈ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿರುವ ಹಿನ್ನೆಲೆ ಎರಡು ಅಥವಾ ಮೂರು ಲೇಯರ್‌ನಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದರು.
ICC World Cup 2023: ಬೆಂಗ್ಳೂರಲ್ಲಿಂದು ಪಾಕ್ vs ಆಸೀಸ್ ಬಿಗ್ ಫೈಟ್!
ಕ್ರೀಡಾಂಗಣ ಒಳ, ಒರ, ಸುತ್ತಾಮುತ್ತಾ ಬಂದೋಬಸ್ತ್ ವಹಿಸಲಾಗಿದೆ. ಓಲಾ, ಊಬರ್ ಗಳಿಗೆ ಪಿಕಪ್ ಮತ್ತು ಡ್ರಾಪ್ ಗೆ ಸ್ಥಳ ನಿಗದಿ ಮಾಡಲಾಗಿದೆ.ಇನ್ನು ಬಿಎಂಟಿಸಿ ಬಸ್ ನಿಲ್ದಾಣಕ್ಕೂ ಸೂಚನೆ ನೀಡಲಾಗಿದೆ. ಪಂದ್ಯವಾಡಲು ಬಂದಿರುವ ಎರಡು ತಂಡಕ್ಕೂ ಸೂಕ್ತ ರಕ್ಷಣೆ ನೀಡಲಾಗುತ್ತಿದೆ. ಈಗಾಗಲೇ ನಿನ್ನೆಯೇ ಇಡೀ ಮೈದಾನ, ಪ್ರೇಕ್ಷಕರ ಗ್ಯಾಲರಿ ಎಲ್ಲವೂ ಪರಿಶೀಲನೆ ನಡೆಸಲಾಗಿದೆ.ಅಲ್ಲದೆ ಮೈದಾನದ ಒಳಗೂ ಸಾಕಷ್ಟು ನಿಯಮ ಜಾರಿ ಮಾಡಲಾಗಿದೆ. ಯಾವುದೇ ಪೋಸ್ಟರ್ ಗಳಿಗೆ ಅವಕಾಶ ಇಲ್ಲ. ಅಪ್ರೂವ್ಡ್ ಪೋಸ್ಟ್ ಗಳನ್ನ ಮಾತ್ರ ತೋರಿಸಬಹುದು. ಡ್ರೋನ್ ಗಳಿಂದ ಕ್ರೀಡಾಂಗಣದಲ್ಲಿ ಮೇಲೆ ನಿಗಾ ಇಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದರು.