Asianet Suvarna News Asianet Suvarna News

CBSE ಶಾಲೆ ಕುರಿತು ಸುಳ್ಳು ಆರೋಪ: ನನ್ನ ಬಂಧನವಾಗಿಲ್ಲ ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಸ್ಪಷ್ಟನೆ

ರಾಜ್ಯ ಸರ್ಕಾರದ ನಿರಕ್ಷೇಪಣಾ ಪ್ರಮಾಣಪತ್ರ ನಕಲಿ ಎಂದು ಆರೋಪ
ಸಿಬಿಎಸ್‌ಇಗೆ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿ ವಂಚನೆ
ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಿದ ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ

Creating a fake document and starting a CBSE school Rupsa president Lokesh Talikatte arrested sat
Author
First Published Feb 1, 2023, 1:40 PM IST

ಬೆಂಗಳೂರು (ಫೆ.01): ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ (ಸಿಬಿಎಸ್‌ಇ) ಪಠ್ಯಕ್ರಮದ ಶಾಲೆಯನ್ನು ಆರಂಭಿಸಲು ರಾಜ್ಯ ಸರ್ಕಾರದಿಂದ ಯಾವುದೇ ನಿರಾಕ್ಷೇಪಣಾ ಪತ್ರವನ್ನು ಪಡೆಯದಿದ್ದರೂ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ (ರುಪ್ಸಾ) ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಅನಧಿಕೃತವಾಗಿ ಶಾಲೆಯನ್ನು ನಡೆಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಆರೋಪಿಸಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ಬಂಧನಕ್ಕೂ ಮೊದಲೇ ನಿರೀಕ್ಷಣಾ ಜಾಮೀನು ಪಡೆದಿರುವ ಲೋಕೇಶ್‌ ತಾಳಿಕಟ್ಟೆ ಅವರು ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಕೆ ಮಾಡಿದ್ದಾರೆ.

 ರಾಜ್ಯದಲ್ಲಿ ಯಾವುದೇ ಖಾಸಗಿ ಶಾಲೆಯನ್ನು ತೆರೆಯಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಮತ್ತೊಂದೆಡೆ ಇಂಟರ್‌ ನ್ಯಾಷನಲ್‌ ಮಾದರಿಯ ಸಿಬಿಎಸ್‌ಇ (CBSC) ಪಠ್ಯಕ್ರಮದ ಶಾಲೆಯನ್ನು ಆರಂಭಿಸಲು ಕೇಂದ್ರ ಸರ್ಕಾರದ ಸಿಬಿಎಸ್‌ಇ ಬೋರ್ಡ್‌ನಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಆದರೆ, ಇದಕ್ಕಿಂತಲೂ ಮುಂಚೆ ರಾಜ್ಯ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (No objection certificate -NOC) ವನ್ನು ಪಡೆದುಕೊಳ್ಳಬೇಕು. ಆದರೆ, ರಾಜ್ಯದ ನಿರಾಕ್ಷೇಪಣಾ ಪತ್ರವನ್ನು ನಕಲಿಯಾಗಿ ಸೃಷ್ಟಿಸಲಾಗಿದೆ ಎಂದು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಮಹಂತಯ್ಯ ಹೊಸಮಠ್  (Mahantayya Hosamutt) ಅವರಿಂದ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಶಿಕ್ಷಣ ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಭ್ರಷ್ಟಾಚಾರ: ಅಧಿಕಾರಿಗಳ ಬಣ್ಣ ಬಯಲು ಮಾಡಿದ ರುಪ್ಸಾ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆಯಲ್ಲಿರುವ ಲೋಕೇಶ್‌ ತಾಳಿಕಟ್ಟೆ ಅವರ ಮಾಲೀಕತ್ವದ ಸಾಂದೀಪಿನಿ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್‌ ಶಾಲೆಯನ್ನು (Sandeepini International Residencial School) ಅನಧಿಕೃತವಾಗಿ ನಡೆಸಲಾಗುತ್ತಿತ್ತು. ಇದಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಎನ್‌ಒಸಿ ಪಡೆಯದೇ, ನಕಲಿ ದಾಖಲೆಯನ್ನು ಸೃಷ್ಟಿಸಿ ತಾವು ರಾಜ್ಯದಿಂದ ಎನ್‌ಒಸಿ ಪಡೆದಿರುವುದಾಗಿ ಕೇಂದ್ರದ ಸಿಬಿಎಸ್‌ಇ ಬೋರ್ಡ್‌ಗೆ ಸಲ್ಲಿಕೆ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರವು ನಕಲಿ ಎನ್‌ಒಸಿ ಪ್ರಮಾಣಪತ್ರವನ್ನು ಆಧರಿಸಿಯೇ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಯನ್ನು ಆರಂಭಿಸಲು ಅನುಮತಿ ನೀಡಿದೆ. ಆದರೆ, ರಾಜ್ಯ ಸರ್ಕಾರದಿಂದ ಅನುಮತಿ ಪಡೆಯದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. 

ವಿಚಾರಣೆ ನಡೆಸಿದ ಪೊಲೀಸರು: ನಿರೀಕ್ಷಣಾ ಜಾಮೀನು ಪಡೆದ ಲೋಕೇಶ್‌: ಇನ್ನು ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟಿ (Lokesh Talikatte) ಅವರನ್ನು ನಾಗದೇವನಹಳ್ಳಿಯ ಲೋಕೇಶ್ ನಿವಾಸದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಲೋಕೇಶ್ ತಾಳಿಕಟ್ಟೆ ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ. ಜೊತೆಗೆ, ಸರ್ಕಾರದಲ್ಲಿ ನಡೆಯುತ್ತಿರುವ ಹಗರಣಗಳು ಹಾಗೂ ಭ್ರಷ್ಟಾಚಾರದ ಕುರಿತು ಬಯಲಿಗೆಳೆದ ಹಿನ್ನೆಲೆಯಲ್ಲಿ ತನ್ನ ಮೇಲೆ ವೃಥಾ ಆರೋಪ ಮಾಡಲಾಗಿದೆ ಎಂದು ಲೋಕೇಶ್‌ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಬಯಲು ಮಾಡಿದ ರುಪ್ಸಾ

ನನ್ನ ಬಂಧನವಾಗಿಲ್ಲ, ಸೂಕ್ತ ದಾಖಲೆ ಸಲ್ಲಿಸಿದ್ದೇನೆ: 

ಶಿಕ್ಷಣ ಇಲಾಖೆಯ ಭ್ರಷ್ಟಾಚಾರವನ್ನ ದಾಖಲೆ ಸಹಿತ ಬಯಲಿಗೆ ಎಳೆದಿದ್ದೆನು. ಇದಕ್ಕೆ ಪ್ರತೀಕಾರವಾಗಿ ‌ನನ್ನ ಶಾಲೆಯ ‌ಮೇಲೆ ಸುಳ್ಳು ‌ದೂರು ದಾಖಲು ‌ಮಾಡಲಾಗಿತ್ತು. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೂ‌ ಮಾಹಿತಿ ನೀಡಿದ್ದೇನೆ. ಅದಾಗಿಯೂ ಇಂದು ಕೆಲ ಮಾಧ್ಯಮಗಳಲ್ಲಿ ‌ನನ್ನ ಬಂಧನ ಅಂತ ಸುದ್ದಿ ಹರಡಿದೆ. ಪೊಲೀಸರು ಬಂಧನ ಮಾಡಿಲ್ಲ. ಪೊಲೀಸ್ ಠಾಣೆಗೆ ದೂರು ಸಂಬಂಧಿಸಿದ ದಾಖಲೆಗಳನ್ನು  ಕೊಡಲಿಕ್ಕೆ ಠಾಣೆಗೆ ಹೋಗಿದ್ದೆನು. ನಾನು ಈಗಾಗಲೇ ಜಾಮೀನು ತೆಗೆದುಕೊಂಡಿದ್ದೇನೆ

- ಲೋಕೇಶ್ ತಾಳಿಕಟ್ಟೆ, ರುಪ್ಸಾ ಅಧ್ಯಕ್ಷ

Follow Us:
Download App:
  • android
  • ios