ಬೆಂಗಳೂರು (ಆ.19): ಕೋವಿಡ್‌ನಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಬೀದಿ ಬದಿಯ ವ್ಯಾಪಾರಿಗಳ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರವು ರಾಷ್ಟ್ರೀಯ ನಗರ ಜೀವನೋಪಾಯ ಇಲಾಖೆಯ ವತಿಯಿಂದ ಆರ್ಥಿಕ ಕೊಡಿಸಲು ಮುಂದಾಗಿದೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಂಗಳವಾರ ವಿಧಾನಸೌಧದಲ್ಲಿ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್‌ ಸಿಂಗ್‌ ಪುರಿ ಅವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ರಾಜ್ಯವು ಈವರೆಗೆ 1,13,403 ಬೀದಿ ವ್ಯಾಪಾರಿಗಳನ್ನು ಗುರುತಿಸಿದೆ. ಈ ಪೈಕಿ ಸಾಲಕ್ಕಾಗಿ ಸಲ್ಲಿಸಿದ 68,325 ಅರ್ಜಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇವುಗಳಲ್ಲಿ ಬ್ಯಾಂಕ್‌ಗಳು 10,920 ಸಾಲದ ಅರ್ಜಿಗಳನ್ನು ಮಾತ್ರ ಸ್ವೀಕರಿಸಿದೆ. ಈವರೆಗೆ ಕೇವಲ 571 ಮಂದಿಗೆ ಮಾತ್ರ ಸಾಲ ನೀಡಿವೆ. ಇನ್ನೂ 9,736 ಅರ್ಜಿಗಳು ಬಾಕಿ ಇವೆ ಎಂಬ ಅಂಶವನ್ನು ಉಪಮುಖ್ಯಮಂತ್ರಿಗಳು ಕೇಂದ್ರ ಸಚಿವರ ಗಮನಕ್ಕೆ ತಂದರು.

ಆ.20ಕ್ಕೆ ಸಿಇಟಿ ರಿಸಲ್ಟ್, ಇಂಜಿನಿಯರಿಂಗ್ ಶುಲ್ಕ ಹೆಚ್ಚಳವಿಲ್ಲ ಎಂದ ಡಿಸಿಎಂ.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಸಾಲವನ್ನು ತಕ್ಷಣ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಈ ಸಂಬಂಧ ಬ್ಯಾಂಕರುಗಳ ಸಭೆ ನಡೆಸಿ ಅರ್ಜಿಗಳ ವಿಲೇವಾರಿಗೆ ಸೂಚಿಸಲಾಗಿದೆ. ಆ ನಂತರವೂ ಬ್ಯಾಂಕ್‌ಗಳ ಸಾಲ ನೀಡದಿದ್ದಲ್ಲಿ ಕ್ರಮ ವಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಕೊರೋನಾ ವಿರುದ್ಧ ಹೊರಾಟ: ಟಾಸ್ಕ್ ಫೋರ್ಸ್ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳು..

ತಲಾ 10 ಸಾವಿರ ರು. ಸಾಲಕ್ಕೆ ಮನವಿ:

ಕೋವಿಡ್‌ ಬಂದ ಬಳಿಕ ಲಾಕ್‌ಡೌನ್‌ ಕಾರಣದಿಂದ ಬೀದಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಜೀವನೋಪಾಯಕ್ಕೆ ಕಷ್ಟವಾಗಿ ತುಂಬಾ ಸಂಕಷ್ಟಕ್ಕೊಳಗಾಗಿದ್ದರು. ಆದರೂ ರಾಜ್ಯ ಸರ್ಕಾರವು ಅವರಿಗೆ ಸ್ವಲ್ಪಮಟ್ಟಿಗಿನ ನೆರವು ನೀಡಿದೆ. ಈಗ ಅವರು ಹೊಸದಾಗಿ ಜೀವನೋಪಾಯ ಕಂಡುಕೊಳ್ಳಲು ಬ್ಯಾಂಕ್‌ಗಳಿಂದ ವಾರ್ಷಿಕ ಶೇ.7ರಷ್ಟುಬಡ್ಡಿದರದಲ್ಲಿ ತಲಾ 10 ಸಾವಿರ ರು. ಸಾಲ ಕೊಡಿಸಬೇಕು ಎಂದು ಅಶ್ವತ್ಥನಾರಾಯಣ ಮನವಿ ಮಾಡಿದರು.