ಬೆಂಗಳೂರು, (ಆ.17) : ವೃತ್ತಿ ಶಿಕ್ಷಣ ಕೋರ್ಸ್ ಗಳಿಗಾಗಿ ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆದ ಸಿಇಟಿ-2020ರ ಫಲಿತಾಂಶ ಆಗಸ್ಟ್ 20ರಂದು ಪ್ರಕಟಗೊಳ್ಳಲಿದೆ ಎಂದು  ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿಯಾಗಿರುವ ಡಾ.ಸಿ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. 

ಇಂದು (ಸೋಮವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಆಗಸ್ಟ್ 20ರಂದು ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ. ಇನ್ನು ಇಂಜಿನಿಯರಿಂಗ್ ಸೀಟ್ ನ ಶುಲ್ಕ ಹೆಚ್ಚಳ ಆಗುತ್ತಾ ಅಂತ ಅನೇಕ ಪೋಷಕರು, ವಿದ್ಯಾರ್ಥಿಗಳು ಕೇಳಿದ್ದಾರೆ. ಆದ್ರೆ ಕೊರೋನಾ ಸಂದರ್ಭದಲ್ಲಿ ಇಂಜಿನಿಯರಿಂಗ್ ಶುಲ್ಕ ಹೆಚ್ಚಳದ ಮಾತೇ ಇಲ್ಲ. ಜೊತೆಗೆ ಸೀಟುಗಳ ಹೆಚ್ಚಳವಾಗಲಿ, ಕಡಿಮೆ ಆಗಲಿ ಯಾವುದೇ ಬದಲಾವಣೆ ಕೂಡ ಇಲ್ಲ ಎಂದು ಹೇಳಿದರು.

ನೀಟ್, ಜೆಇಇ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ: ಪರೀಕ್ಷೆಗಳು ನಡೆಯಲಿವೆ ಯಥಾ ಪ್ರಕಾರ

ಭಾಷಾ ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಹಂಚಿಕೆ ಅನುಪಾತ ಸಿಇಟಿ - 40%, ಕೆಆರ್‌ಸಿಎಂ - 30%, ಎನ್ನಾರೈ (NRI) ಮತ್ತು ಮ್ಯಾನೇಜ್ಮೆಂಟ್ -30%