Asianet Suvarna News Asianet Suvarna News

ಮೊದಲೆರಡು ಅಲೆಗಿಂತ ಕೋವಿಡ್‌ ಈಗ ಹೈಸ್ಪೀಡ್‌: ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ವೈರಸ್‌..!

*   ಸೋಂಕಿತರ ಸಂಖ್ಯೆ 300ರಿಂದ 1000ಕ್ಕೇರಲು ಮೊದಲ ಅಲೆ ವೇಳೆ 8 ದಿನ, 2ನೇ ಅಲೆಯಲ್ಲಿ 16 ದಿನ
*   ಈಗ ಕೇವಲ ನಾಲ್ಕೇ ದಿನ
*   ರಾಜ್ಯದಲ್ಲಿ ಸದ್ಯ 66 ಮಂದಿಯಲ್ಲಿ ಒಮಿಕ್ರೋನ್‌ ಪತ್ತೆ
 

Covid is Now Higher Speed Than The First Two Waves grg
Author
Bengaluru, First Published Jan 3, 2022, 6:27 AM IST

ಬೆಂಗಳೂರು(ಡಿ.03): ಒಮಿಕ್ರೋನ್‌(Omicron) ಸೋಂಕು ಆಫ್ರಿಕಾ(Afirca), ಅಮೆರಿಕ(America), ಯುರೋಪ್‌(Europe) ದೇಶದಲ್ಲಿ ತೀವ್ರ ವೇಗದಲ್ಲಿ ಹಬ್ಬಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಹೊತ್ತಿನಲ್ಲೇ ರಾಜ್ಯದಲ್ಲೂ(Karnataka) ಕೊರೋನಾ ಸೋಂಕು ಅತಿ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮುನ್ನೂರರ ಆಸುಪಾಸಿನಲ್ಲಿದ್ದ ದೈನಂದಿನ ಸೋಂಕಿತರ ಸಂಖ್ಯೆ ಕೇವಲ ನಾಲ್ಕೇ ದಿನದಲ್ಲಿ ಈಗ ಸಾವಿರದ ಗಡಿ ದಾಟಿದೆ. ಪ್ರತಿದಿನ 200ರ ಅಸುಪಾಸಿಗೆ ಕುಸಿದಿದ್ದ ಕೊರೋನಾ(Coronavirus) ಸೋಂಕಿತರ ಸಂಖ್ಯೆ ದಿಢೀರ್‌ ಏರಿಕೆ ಕಂಡಿದ್ದು ಮೊದಲೆರಡು ಅಲೆಗಳಿಗೆ ಹೋಲಿಸಿದರೆ ಕೊರೋನಾ ಸೋಂಕು ಅತ್ಯಂತ ವೇಗದಲ್ಲಿ ವ್ಯಾಪಿಸುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ.

ಮೊದಲ ಅಲೆಗೆ ಕಾರಣವಾಗಿದ್ದ ಆಲ್ಫಾ, ಬೀಟಾ ಮತ್ತು ಎರಡನೇ ಅಲೆಯನ್ನು ಸೃಷ್ಟಿಸಿದ್ದ ಡೆಲ್ಟಾಕ್ಕಿಂತ(Delta) ಮೂರನೇ ಅಲೆಗೆ ಕಾರಣವಾಗಬಹುದಾದ ಒಮಿಕ್ರೋನ್‌ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಈಗಾಗಲೇ ಸಾಂಕ್ರಾಮಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Covid 19 Spike: 27,553 ಕೇಸ್‌: 2 ತಿಂಗಳ ಗರಿಷ್ಠ

ರಾಜ್ಯದಲ್ಲಿ ಸದ್ಯ 66 ಮಂದಿಯಲ್ಲಿ ಒಮಿಕ್ರೋನ್‌ ಪತ್ತೆಯಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಒಮಿಕ್ರೋನ್‌ ಪತ್ತೆ ಆಗಿದ್ದರೂ ಪ್ರಯಾಣದ ಹಿನ್ನೆಲೆಯೇ ಇಲ್ಲದವರಲ್ಲಿಯೂ ಒಮಿಕ್ರೋನ್‌ ಕಂಡು ಬಂದಿದೆ. ಆದರೆ ಸೋಂಕು ಹರಡುತ್ತಿರುವ ವೇಗ ಗಮನಿಸಿದರೆ ಒಮಿಕ್ರೋನ್‌ ರಾಜ್ಯದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಹರಡಿರುವ ಲಕ್ಷಣಗಳು ಗೋಚರಿಸುತ್ತಿದೆ.
ರಾಜ್ಯದಲ್ಲಿ 2020ರ ಜೂನ್‌ ತಿಂಗಳಲ್ಲಿ ಮೊದಲ ಅಲೆ ಆರಂಭಗೊಂಡಿತ್ತು. ಜೂನ್‌ 23 ರಂದು 322 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆ ಬಳಿಕ ದೈನಂದಿನ ಸೋಂಕಿತರ ಸಂಖ್ಯೆ ಎಂಟನೇ ದಿನ (ಜುಲೈ 1)ಕ್ಕೆ ಸಾವಿರದ ಗಡಿ ದಾಟಿತ್ತು.

2021ರಲ್ಲಿ ರಾಜ್ಯದಲ್ಲಿ ಎರಡನೇ ಅಲೆಯ ವೇಳೆ ಮಾರ್ಚ್‌ 1 ರಂದು 349 ಪ್ರಕರಣ ವರದಿಯಾಗಿತ್ತು. ಇದಾದ ಮಾರ್ಚ್‌ 16ಕ್ಕೆ 1135 ಪ್ರಕರಣಗಳು ದಾಖಲಾಗಿತ್ತು. ಎರಡನೇ ಅಲೆಯಲ್ಲಿ ಸೋಂಕು ಹರಡುವ ವೇಗ ಆರಂಭದಲ್ಲಿ ನಿಧಾನವಾಗಿದ್ದರೂ ಆ ಬಳಿಕ ಸೋಂಕು ವ್ಯಾಪಕವಾಗಿ ಹರಡಿ ದಿನಕ್ಕೆ 50 ಸಾವಿರದ ತನಕ ಪ್ರಕರಣಗಳು ವರದಿಯಾಗಿದ್ದವು.

ಆದರೆ ಈ ಎರಡು ಅಲೆಗಳಿಗಿಂತಲೂ ಸದ್ಯ ಸೋಂಕಿನ ಹರಡುವಿಕೆ ವೇಗವಾಗಿದೆ. ಡಿಸೆಂಬರ್‌ 28 ರಂದು 356 ಪ್ರಕರಣ ವರದಿಯಾಗಿದ್ದರೆ ನಾಲ್ಕೇ ದಿನದಲ್ಲಿ ಸೋಂಕಿತರ ಸಂಖ್ಯೆ ಸಾವಿರ (ಜನವರಿ 1ಕ್ಕೆ 1033) ಮೀರಿದೆ. ಈ ಪ್ರವೃತ್ತಿ ಮುಂದುವರಿದರೆ ಮುಂದಿನ ಕೆಲವೇ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆಯಾಗುವ ಸಾಧ್ಯತೆಗಳಿವೆ.

Karnataka Lockdown: 'ಐಸಿಯು ಶೇ.40 ಭರ್ತಿಯಾದರೆ ಲಾಕ್‌ಡೌನ್‌ ಮಾಡಿ'

ಬೆಂಗ್ಳೂರಲ್ಲಿ 6 ತಿಂಗಳ ಬಳಿಕ ಕೊರೋನಾ ಸ್ಫೋಟ..!

ಬೆಂಗಳೂರು ನಗರದಲ್ಲಿ ಕೊರೋನಾ(Coronavirus) ಪ್ರಕರಣಗಳ ಸಂಖ್ಯೆ ಭಾನುವಾರ ಸಹ ಏರುಗತಿಯಲ್ಲಿ ಸಾಗಿದ್ದು, 190 ದಿನಗಳ ನಂತರ ಸೋಂಕಿನ ಪ್ರಕರಣಗಳ ಸಂಖ್ಯೆ 923 ತಲುಪಿದೆ. ಮೂವರು ಮೃತಪಟ್ಟಿದ್ದಾರೆ(Death).
ಕಳೆದ ಜೂ.26ರಂದು ಒಂದೇ ದಿನ 955 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಸೋಂಕಿನ ಪ್ರಕರಣ ಕಡಿಮೆಯಾಗುತ್ತಾ ಬಂದಿತ್ತು. ಈಗ ಕಳೆದ ಕೆಲವು ದಿನಗಳಿಂದ ಪುನಃ ಸೋಂಕು ಪ್ರಕರಣ ಹೆಚ್ಚಾಗತೊಡಗಿದೆ.

ಹೊಸದಾಗಿ 488 ಪುರುಷರು ಮತ್ತು 435 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 12,65,351ಕ್ಕೆ ಏರಿಕೆ ಆಗಿದೆ. 125 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರ ಸಂಖ್ಯೆ 12,40,274 ತಲುಪಿದೆ. ಮೂವರ ಸಾವಿನಿಂದ ಈವರೆಗೆ 16,406 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸೋಂಕಿಗೆ ಒಳಗಾಗಿರುವ ಒಟ್ಟು 8,671 ಜನರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ(Department of Health) ಮಾಹಿತಿ ನೀಡಿದೆ.
 

Follow Us:
Download App:
  • android
  • ios