ಬೆಂಗಳೂರು (ಮೇ.13): ರಾಜ್ಯದಲ್ಲಿ ಬುಧವಾರ 517 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, 39,998 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ರಾಜ್ಯದಲ್ಲಿ ಮೂರನೇ ಬಾರಿಗೆ ಒಂದೇ ದಿನದಲ್ಲಿ 500ಕ್ಕಿಂತ ಹೆಚ್ಚು ಸಾವು ವರದಿಯಾಗಿದೆ. ಈ ಹಿಂದೆ ಮೇ 7ರಂದು 592, ಮೇ 10ರಂದು 596 ಮಂದಿ ಸಾವನ್ನಪ್ಪಿದ್ದರು. ಈ ಮಧ್ಯೆ ಶೇ. 1.29ರ ಮರಣ ದರ ದಾಖಲಾಗಿದ್ದು ಸತತ ಆರನೇ ದಿನ ಶೇ.1 ಮೀರಿದ ಮರಣ ದರ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 275 ಮಂದಿ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 20,368 ಮಂದಿ ಅಸುನೀಗಿದ್ದಾರೆ.

ಒಂದು ಸಾವಿರ ‘ಆಶಾ’ಗಳಿಗೆ ಸೋಂಕು, ಐವರ ಸಾವು: ಸಂಕಷ್ಟದಲ್ಲಿ ಕೊರೋನಾ ವಾರಿಯರ್ಸ್‌ ...

ಐದು ದಿನಗಳ ಬಳಿಕ ಪಾಸಿಟಿವಿಟಿ ದರ ಶೇ.30ಕ್ಕಿಂತ ಕೆಳಗಿಳಿದಿದೆ. ಬುಧವಾರ ಶೇ.29.67 ಪಾಸಿಟಿವಿಟಿ ದರ ಇದೆ. 1.34 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಕಳೆದೆರಡು ದಿನಗಳಿಗಿಂತ ಪರೀಕ್ಷೆ ಪ್ರಮಾಣದಲ್ಲಿ ತುಸು ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5.92 ಲಕ್ಷಕ್ಕೆ ಏರಿದೆ. 34,752 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಗಿದ್ದು, ಈವರೆಗೆ ಒಟ್ಟು 14.40 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

'ಬೆಂಗಳೂರಲ್ಲಿ ಸೋಂಕು 2-3 ವಾರದಲ್ಲಿ ಇಳಿಕೆ, ಇತರೆಡೆ ತೀವ್ರ ಏರಿಕೆ' ..

ಸಾವಿನ ವಿವರ :  ಶಿವಮೊಗ್ಗದಲ್ಲಿ 26, ಕಲಬುರಗಿ 23, ಹಾಸನ 19, ಬಳ್ಳಾರಿ 17, ತುಮಕೂರು 14, ಬೆಂಗಳೂರು ಗ್ರಾಮಾಂತರ, ಕೊಪ್ಪಳ ತಲಾ 12, ಮಂಡ್ಯ, ಕೊಡಗು ತಲಾ 10, ಮೈಸೂರು 9, ಚಾಮರಾಜನಗರ, ಧಾರವಾಡ, ಉತ್ತರ ಕನ್ನಡ, ವಿಜಯಪುರ ತಲಾ 8, ಚಿಕ್ಕಬಳ್ಳಾಪುರ, ಉಡುಪಿ ತಲಾ 6, ರಾಮನಗರ 5, ಗದಗ 4, ರಾಯಚೂರು 3, ಕೋಲಾರ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಬೆಳಗಾವಿ, ಬಾಗಲಕೋಟೆ ತಲಾ 2 ಮತ್ತು ದಾವಣಗೆರೆಯಲ್ಲಿ ಒಬ್ಬರು ಮೃತರಾಗಿದ್ದಾರೆ.

ತುಮಕೂರು 2,360, ಬಳ್ಳಾರಿ 1,823, ಮೈಸೂರು 1,773, ಹಾಸನ 1,572, ಮಂಡ್ಯ 1,223, ಬೆಂಗಳೂರು ಗ್ರಾಮಾಂತರ 1,138, ಶಿವಮೊಗ್ಗ 1,125, ದಕ್ಷಿಣ ಕನ್ನಡ 1,077 ಜಿಲ್ಲೆಗಳಲ್ಲಿ ಸಾವಿರ ಮೀರಿ ಪ್ರಕರಣ ದಾಖಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona