ಮತ್ತೆ ಏರಿದ ಕೊರೋನಾ-ಸಾವು ಹೆಚ್ಚಳ: ಪಾಸಿಟಿವಿಟಿ 10 ದಿನದ ಗರಿಷ್ಠ

  •  ರಾಜ್ಯದಲ್ಲಿ ಸೋಮವಾರ 1,606 ಮಂದಿಯಲ್ಲಿ ಕೋವಿಡ್‌ ಪ್ರಕರಣ ಧೃಢಪಟ್ಟಿದೆ. 
  • 31 ಮಂದಿ ಮೃತರಾಗಿದ್ದಾರೆ. 1937 ಮಂದಿ ಗುಣಮುಖರಾಗಿದ್ದಾರೆ. 
Covid Cases Raise in Karnataka snr

ಬೆಂಗಳೂರು (ಜು.27): ರಾಜ್ಯದಲ್ಲಿ ಸೋಮವಾರ 1,606 ಮಂದಿಯಲ್ಲಿ ಕೋವಿಡ್‌ ಪ್ರಕರಣ ಧೃಢಪಟ್ಟಿದೆ. 31 ಮಂದಿ ಮೃತರಾಗಿದ್ದಾರೆ. 1937 ಮಂದಿ ಗುಣಮುಖರಾಗಿದ್ದಾರೆ. 1.14 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು, ಹತ್ತು ದಿನದ ಗರಿಷ್ಠ ಪಾಸಿಟಿವಿಟಿ ದರ ಶೇ.1.40 ದಾಖಲಾಗಿದೆ. ಬೆಂಗಳೂರು ನಗರದಲ್ಲಿ 467 ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ 200ರ ಅಸುಪಾಸಿನಲ್ಲಿ ವರದಿಯಾಗುತ್ತಿದ್ದ ದೈನಂದಿನ ಸೋಂಕಿತರ ಸಂಖ್ಯೆ ಸೋಮವಾರ 357ಕ್ಕೆ ಏರಿಕೆ ಆಗಿದೆ.

ಮೈಸೂರಿನಲ್ಲಿ 162 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಾಗಲಕೋಟೆ, ಬಳ್ಳಾರಿ, ಬೀದರ್‌, ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ ಕೋವಿಡ್‌ ಮೊದಲ ಅಲೆ ಮತ್ತು ಎರಡನೇ ಅಲೆಯಲ್ಲಿ ಮೊದಲ ಬಾರಿಗೆ ಇಷ್ಟೊಂದು ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಏಳು ಜಿಲ್ಲೆಯಲ್ಲಿ ಒಂದಂಕಿ ಪ್ರಕರಣ ಬಂದಿದೆ. ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೀದರ್‌, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೊಡಗು, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್‌ ಸಾವು ವರದಿಯಾಗಿಲ್ಲ.

ಕೊಪ್ಪಳ: ತಗ್ಗಿದ ಕೊರೋನಾ, ಅಂಜನಾದ್ರಿ ಬೆಟ್ಟಕ್ಕೆ ಭಕ್ತರ ಲಗ್ಗೆ..!

ಹೊಸ ಸೋಂಕಿತರಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಏರುತ್ತಿರುವ ಪ್ರವೃತ್ತಿ ಮುಂದುವರಿದಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 23,057ಕ್ಕೆ ಕುಸಿದಿದೆ. ಈವರೆಗೆ 28.96 ಲಕ್ಷ ಮಂದಿಗೆ ಕೋವಿಡ್‌ ಬಂದಿದ್ದು ಖಚಿತವಾಗಿದ್ದು ಈ ಪೈಕಿ 28.36 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 36,405 ಮಂದಿ ಮರಣವನ್ನಪ್ಪಿದ್ದಾರೆ. 3.09 ಕೋಟಿ ಆರ್‌ಟಿಪಿಸಿಆರ್‌, 69.90 ಲಕ್ಷ ಅಂಟಿಜೆನ್‌ ಪರೀಕ್ಷೆ ಸೇರಿ ಈವರೆಗೆ ಒಟ್ಟು 3.79 ಕೋಟಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

ಸೋಮವಾರ 1.79 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

Latest Videos
Follow Us:
Download App:
  • android
  • ios