Asianet Suvarna News Asianet Suvarna News

ಕರ್ನಾಟಕದಲ್ಲಿ 826 ಕೇಸ್‌: ಸತತ 2ನೇ ದಿನವೂ ಕೊರೋನಾ ಇಳಿಕೆ

*  ಪಾಸಿಟಿವಿಟಿ ದರ ಕೂಡ ಶೇ.3 ಆಸುಪಾಸಿಗೆ ತಗ್ಗಿದೆ
*  ಭಾನುವಾರ 826 ಕೊರೋನಾ ಹೊಸ ಪ್ರಕರಣಗಳು, 600 ಮಂದಿ ಗುಣಮುಖ
*  ನಾಲ್ಕು ತಿಂಗಳ ಬಳಿಕ ಗುರುವಾರ ಮತ್ತು ಶುಕ್ರವಾರ ಹೊಸ ಪ್ರಕರಣಗಳು ಒಂದು ಸಾವಿರ ಗಡಿದಾಟಿದ್ದವು

Covid Cases Decreased for the 2nd Consecutive Day in Karnataka grg
Author
Bengaluru, First Published Jul 4, 2022, 4:15 AM IST

ಬೆಂಗಳೂರು(ಜು.04):  ರಾಜ್ಯದಲ್ಲಿ ಸತತ ಎರಡನೇ ದಿನ ಕೊರೋನಾ ಸೋಂಕು ಪ್ರಕರಣಗಳು ಇಳಿಕೆಯಾಗಿದ್ದು, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಕೂಡ ಶೇ.3 ಆಸುಪಾಸಿಗೆ ತಗ್ಗಿದೆ. ಭಾನುವಾರ 826 ಕೊರೋನಾ ಹೊಸ ಪ್ರಕರಣಗಳು ವರದಿಯಾಗಿದ್ದು, 600 ಮಂದಿ ಗುಣಮುಖರಾಗಿದ್ದಾರೆ. 

ಸೋಂಕಿತರ ಸಾವಾಗಿಲ್ಲ. ಸದ್ಯ 6,666 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ/ಆರೈಕೆಯಲ್ಲಿದ್ದಾರೆ. 25 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.3.2 ರಷ್ಟುದಾಖಲಾಗಿದೆ. ಶನಿವಾರದಷ್ಟೇ ಸೋಂಕು ಪರೀಕ್ಷೆಗಳು ನಡೆದಿದ್ದು, ಹೊಸ ಪ್ರಕರಣಗಳು ಮಾತ್ರ 149 ಇಳಿಕೆಯಾಗಿವೆ. (ಶನಿವಾರ 975, ಸಾವು ಒಂದು)

ಕರ್ನಾಟಕದಲ್ಲಿ 3 ದಿನದ ಬಳಿಕ 1000ಕ್ಕಿಂತ ಕೆಳಗಿಳಿದ ಕೊರೋನಾ ಸೋಂಕು

ನಾಲ್ಕು ತಿಂಗಳ ಬಳಿಕ ಗುರುವಾರ ಮತ್ತು ಶುಕ್ರವಾರ ಹೊಸ ಪ್ರಕರಣಗಳು ಒಂದು ಸಾವಿರ ಗಡಿದಾಟಿದ್ದವು. ಆದರೆ, ಕಳೆದ ಎರಡು ದಿನಗಳಿಂದ ಇಳಿಮುಖವಾಗಿ ವರದಿಯಾಗುತ್ತಿವೆ. ಜತೆಗೆ ಶೇ.4ಕ್ಕಿಂತ ಅಧಿಕವಿದ್ದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರವು ಶೇ.3ಕ್ಕೆ ತಗ್ಗಿದೆ. ಸಕ್ರಿಯ ಸೋಂಕಿತರ ಪೈಕಿ 66 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, 6600 ಮಂದಿ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ.

ಎಲೆಲ್ಲಿ ಸೋಂಕು:

ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 871 ಪತ್ತೆಯಾಗಿವೆ. ಉಳಿದಂತೆ ಮೈಸೂರು 22, ದಕ್ಷಿಣ ಕನ್ನಡ 14, ಕೋಲಾರ 9, ಶಿವಮೊಗ್ಗ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ತಲಾ 6, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ತಲಾ 5, ರಾಮನಗರ 4, ಬೆಳಗಾವಿ ಮತ್ತು ಕಲಬುರಗಿ ತಲಾ 3, ಬಾಗಲಕೋಟೆ, ಬೀದರ್‌, ಚಿಕ್ಕಬಳ್ಳಾಪುರ, ಹಾಸನ, ರಾಯಚೂರು ತಲಾ ಇಬ್ಬರಿಗೆ, ಬಳ್ಳಾರಿ, ಮಂಡ್ಯ ತಲಾ ಒಬ್ಬರಿಗೆ ಸೋಂಕು ತಗುಲಿದೆ. 11 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ರಾಜ್ಯದಲ್ಲಿ ಈವರೆಗೆ 39.7 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿದ್ದು, 39.2 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 40,077 ಮಂದಿ ಸಾವಿಗೀಡಾಗಿದ್ದಾರೆ.
 

Follow Us:
Download App:
  • android
  • ios