ಕರ್ನಾಟಕದಲ್ಲಿ 3 ದಿನದ ಬಳಿಕ 1000ಕ್ಕಿಂತ ಕೆಳಗಿಳಿದ ಕೊರೋನಾ ಸೋಂಕು
* ರಾಜ್ಯದಲ್ಲಿ ಶನಿವಾರ 975 ಜನರಲ್ಲಿ ಕೊರೋನಾ ಸೋಂಕು
* ಶಿವಮೊಗ್ಗದಲ್ಲಿ ಒಬ್ಬ ವ್ಯಕ್ತಿ ಬಲಿ
* ಪಾಸಿಟಿವಿಟಿ ದರ ಶೇ. 3.74ಕ್ಕೆ ಇಳಿಕೆ
ಬೆಂಗಳೂರು(ಜು.03): ರಾಜ್ಯದಲ್ಲಿ ಶನಿವಾರ 975 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಶಿವಮೊಗ್ಗದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. 668 ಮಂದಿ ಗುಣಮುಖರಾಗಿದ್ದಾರೆ.
ಕಳೆದ ಮೂರು ದಿನಗಳ ಬಳಿಕ ದೈನಂದಿನ ಸೋಂಕಿತರ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಆಗಿದೆ. ಹಾಗೆಯೇ ಶೇ. 4 ಮೀರಿದ್ದ ಪಾಸಿಟಿವಿಟಿ ದರ ಶೇ. 3.74ಕ್ಕೆ ಇಳಿಕೆಯಾಗಿದೆ. ಸದ್ಯ 6,440 ಸಕ್ರಿಯ ಪ್ರಕರಣಗಳಿವೆ.
Corona Crisis: ಕೋವಿಡ್ ಸೋಂಕು ಪತ್ತೆಯಾದರೆ ಸೀಲ್‌ಡೌನ್ ಇಲ್ಲ
ಬೆಂಗಳೂರು ನಗರದಲ್ಲಿ 871, ಮೈಸೂರು 22, ದಕ್ಷಿಣ ಕನ್ನಡ 14, ಕೋಲಾರ ಮತ್ತು ಧಾರವಾಡ ತಲಾ 9, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ತಲಾ 6 ಹೊಸ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ 39.71 ಲಕ್ಷ ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, 39.24 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,077 ಮಂದಿ ಮರಣವನ್ನಪ್ಪಿದ್ದಾರೆ.
ಲಸಿಕೆ ಅಭಿಯಾನ:
ಶನಿವಾರ 41,887 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. 4,506 ಮಂದಿ ಮೊದಲ ಡೋಸ್, 16,090 ಮಂದಿ ಎರಡನೇ ಡೋಸ್ ಮತ್ತು 30,445 ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ. ಈವರೆಗೆ ಒಟ್ಟು 11.22 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.