ಬೆಂಗಳೂರು (ನ. 02): ಕೋವಿಡ್ 19 ಎಂಬ ಕಂಡು ಕೇಳರಿಯದ ವೈರಸ್ ಬಂದಿದ್ದೇ ತಡ ಏನೇನೋ ಬದಲಾವಣೆಯನ್ನು ತಂದಿಟ್ಟಿದೆ. ಜೀವನವನ್ನೇ ಬದಲಿಸಿದೆ. ಮಕ್ಕಳ ಭವಿಷ್ಯವನ್ನು ಕಮರಿಸುತ್ತಿದೆ. ಈಗ ಶಾಲೆ ಇಲ್ಲದಿರುವುದರಿಂದ ಮಕ್ಕಳು ಕೂಲಿ ಕೆಲಸ ಮಾಡುತ್ತಿದ್ದಾರೆ. ಪೋಷಕರ ಜೊತೆ ಇವರೂ ಕೆಲಸಕ್ಕೆ ಹೋಗುತ್ತಾರೆ.

ರಾಯಚೂರಿನಲ್ಲಿ ಈ ದೃಶ್ಯ ಕಂಡು ಬಂದಿದೆ. 

ಬಳ್ಳಾರಿಯಲ್ಲಿ ಬಾಲಕಾರ್ಮಿಕರು ಹಾಗೂ ಬಾಲಕಾರ್ಮಿಕರ ವಿವಾಹ ಹೆಚ್ಚಾಗುತ್ತಿದೆ. 'ಶಾಲೆ ಇಲ್ಲ, ನಾವು ಕೆಲಸಕ್ಕೆ ಹೋದ್ರೆ ಮಕ್ಕಳು ಏನು ಮಾಡಬೇಕು'? ಎಂದು ಪೋಷಕರು ಅಳಲನ್ನು ತೋಡಿಕೊಳ್ಳುತ್ತಾರೆ. 

ಇನ್ನು ಉಡುಪಿಯಲ್ಲಿ ಮೀನುಗಾರಿಕಾ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ 17 ಬಾಲಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. 

ಆಟವಾಡುವ ವಯಸ್ಸಲ್ಲಿ ಬಾಲಕಿಯ ಕೊರಳಲ್ಲಿ ಕರಿಮಣಿ, ಪೆನ್ನು, ಬಳಪ ಹಿಡಿಯುವ ಕೈಯಲ್ಲಿ ಕುಡುಗೋಲು.. ಇದು ಕಲಬುರ್ಗಿಯ ಚಿತ್ರಣ. ಶಾಲೆ ಇಲ್ಲದೇ ಇರುವುದರಿಂದ ಮಕ್ಕಳು, ಪೋಷಕರ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಬಾಲ್ಯ ವಿವಾಹವನ್ನೂ ಮಾಡುತ್ತಿದ್ದಾರೆ. 81 ಬಾಲ್ಯವಿವಾಹವನ್ನು ತಡೆಯಲಾಗಿದೆ.