Asianet Suvarna News Asianet Suvarna News

ಇನ್ನು ಸೋಂಕಿತನ ಮನೆಯಷ್ಟೇ ಕಂಟೈನ್ಮೆಂಟ್‌

ಇನ್ಮುಂದೆ ಕೋವಿಡ್ ಸೋಂಕಿನ ವಿಚಾರದಲ್ಲಿಕಂಟೈನ್ಮೆಂಟ್ ಝೋನ್ ಘೋಷಣೆವಿಚಾರದಲ್ಲಿ ಕೆಲ ನಿಯಮಗಳನ್ನು ಬದಲು ಮಾಡಲಾಗಿದೆ.

COVID 19  Containment Rules Change
Author
Bengaluru, First Published Aug 21, 2020, 7:01 AM IST

ಬೆಂಗಳೂರು (ಆ.21): ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿ ನಿರ್ವಹಣೆ ಕಷ್ಟಕರವಾಗುತ್ತಿರುವ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್‌ ಝೋನ್‌ ಮತ್ತು ಬಫರ್‌ ವಲಯಗಳ ವ್ಯಾಪ್ತಿ ಹಾಗೂ ನಿಯಮಗಳನ್ನು ಸಡಿಲಗೊಳಿಸಿ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಪ್ರಮುಖವಾಗಿ ಇನ್ನು ಮುಂದೆ ಸೋಂಕಿತ ವ್ಯಕ್ತಿಯ ಮನೆಯ ಸುತ್ತಲಿನ 100 ಮೀಟರ್‌ ಪ್ರದೇಶದ ಬದಲು ಮನೆಯ ಸುತ್ತಲಿನ ನಿರ್ದಿಷ್ಟಪ್ರದೇಶ ಮಾತ್ರ ಕಂಟೈನ್ಮೆಂಟ್‌ ವಲಯವಾಗಿರುತ್ತದೆ.

ಅದೇ ರೀತಿ ಕಂಟೈನ್ಮೆಂಟ್‌ ವಲಯದ ಸುತ್ತಲಿನ 500 ಮೀಟರ್‌ ಪ್ರದೇಶ ಬಫರ್‌ ಝೋನ್‌ ಇದ್ದದ್ದನ್ನು 200 ಮೀಟರ್‌ ಪ್ರದೇಶಕ್ಕೆ ಇಳಿಸಲಾಗಿದೆ. ಕಂಟೈನ್ಮೆಂಟ್‌ ಝೋನ್‌ನಲ್ಲಿ 14 ದಿನಗಳ ನಂತರ ಯಾವುದೇ ಹೊಸ ಪ್ರಕರಣ ದೃಢಪಡದಿದ್ದರೆ ಸಾಮಾನ್ಯ ಸ್ಥಿತಿಗೆ ಮರಳಿಸಬೇಕು. ಸೋಂಕು ವರದಿಯಾದ ಪ್ರತಿ ಮನೆಯ ಮೇಲೆ ನೋಟಿಸ್‌ ಅಂಟಿಸಿ ಆ ಪ್ರದೇಶಕ್ಕೆ ಯಾರೂ ಹೋಗದಂತೆ ಕ್ರಮ ವಹಿಸಬೇಕು ಎಂದು ಸೂಚಿ​ಸ​ಲಾ​ಗಿದೆ.

ಕೊರೊನಾ ವಿಚಾರದಲ್ಲಿ ಗುಡ್‌ನ್ಯೂಸ್: ಕಂಟೈನ್ಮೆಂಟ್, ಬಫರ್‌ ಝೋನ್‌ಗಳ ನಿಯಮ ಸಡಿಲಿಕೆ...

ಕಂಟೈನ್ಮೆಂಟ್‌ ಝೋನ್‌ ಎಂದರೆ ವಸತಿ ಸಮುಚ್ಚಯಗಳಲ್ಲಿ ಸೋಂಕಿತ ವ್ಯಕ್ತಿಯ ಮನೆ ಇರುವ ಮಹಡಿ, ಸ್ವತಂತ್ರ ಮನೆಯಾದರೆ ಆ ಮನೆ, ಕೊಳಗೇರಿ ಪ್ರದೇಶವಾದರೆ ಸೋಂಕಿತ ವ್ಯಕ್ತಿಯ ಮನೆ ಇರುವ ಬೀದಿ, ಗ್ರಾಮೀಣ ಭಾಗದಲ್ಲಾದರೆ ಸೋಂಕಿತನ ಪೂರ್ಣ ಮನೆ ಅಥವಾ ಆ ಮನೆಗೆ ಹೊಂದಿಕೊಂಡಿರುವ ಪ್ರದೇಶವೆಂದು ಪರಿಗಣಿಸಬಹುದು

ಒಂದು ಪ್ರದೇಶದಲ್ಲಿ ಹೆಚ್ಚು ಸೋಂಕು ಪ್ರಕರಣಗಳು ವರದಿಯಾದಲ್ಲಿ ಮಾತ್ರ ಕಾರ್ಯಾಚರಣೆ ಉದ್ದೇಶದಿಂದ ಕಂಟೈನ್ಮೆಂಟ್‌ ವಲಯವನ್ನು ಸಾಕಷ್ಟುವಿಸ್ತಾರಗೊಳಿಸಬೇಕು. ಇದು ಅಕ್ಕಪಕ್ಕದ ಅಥವಾ ಹತ್ತಿರದ ಪ್ರಕರಣಗಳ ಗುಂಪನ್ನು ಒಳಗೊಂಡಿರಬೇಕು. ಪ್ರಕರಣಗಳು ಮತ್ತು ಸಂಪರ್ಕಿತರನ್ನು ಮ್ಯಾಪ್‌ ಮಾಡಿ ಕಂಟೈನ್ಮೆಂಟ್‌ ಝೋನ್‌ ಗಡಿ ಗುರುತಿಸುವಂತೆ ತಿಳಿಸಲಾಗಿದೆ.

Follow Us:
Download App:
  • android
  • ios