Covid in Karnataka : ರಾಜ್ಯದಲ್ಲಿ 30 ಲಕ್ಷ ದಾಟಿದ ಸೋಂಕಿತರು

 

  •  ರಾಜ್ಯದಲ್ಲಿ 30 ಲಕ್ಷ ದಾಟಿದ ಸೋಂಕಿತರು
  •  ಇಷ್ಟು ಸೋಂಕು ದಾಖಲಾದ ದೇಶದ 3ನೇ ರಾಜ್ಯ ಕರ್ನಾಟಕ-98% ಜನ ಚೇತರಿಕೆ
  •  13: ಮೊದಲ ಕೇಸು ಪತ್ತೆಯಾದ 13 ತಿಂಗಳ ಬಳಿಕ 10 ಲಕ್ಷ ಕೇಸು
  • 41: 10ರಿಂದ 20 ಲಕ್ಷ ಕೇಸು ತಲುಪಲು ತಗುಲಿದ ಅವಧಿ 41 ದಿನ
  • 07: 20ರಿಂದ 30 ಲಕ್ಷಕ್ಕೆ ತಲುಪಲು ಪಡೆದ ಅವಧಿ 7 ತಿಂಗಳು
  • 30 ಲಕ್ಷ ಒಟ್ಟು ಸೋಂಕಿತರು 38257 ಕೋವಿಡ್‌ಗೆ ಸಾವು
COVID 19 cases breach 30 lakh mark in Karnataka snr

  ಬೆಂಗಳೂರು(ಡಿ.12):  ರಾಜ್ಯದಲ್ಲಿ (Karnataka) ಶನಿವಾರ ಹೊಸದಾಗಿ 320 ಮಂದಿ ಕರೋನಾ ಸೋಂಕಿಗೆ (Covid 19 ) ಒಳಗಾಗುವುದರೊಂದಿಗೆ ಈ ಮಹಾಮಾರಿಯ ಹಾವಳಿ ಆರಂಭವಾದಾಗಿನಿಂದ ಇದುವರೆಗೂ ಕರ್ನಾಟಕದಲ್ಲಿ (Karnataka)  ಸೋಂಕು ದೃಢ ಪಟ್ಟವರ ಸಂಖ್ಯೆ 30 ಲಕ್ಷ ದಾಟಿದೆ. ಶನಿವಾರ ಸೋಂಕಿಗೆ ಒಳಗಾದವರೂ ಸೇರಿ ರಾಜ್ಯದಲ್ಲಿ (Karnataka) ಒಟ್ಟು ಸಂಖ್ಯೆ 30,00,105 ಆಗಿದೆ. ಈ ಪೈಕಿ ಈ ಪೈಕಿ ಶೇ.98 ಮಂದಿ ಅಂದರೆ 29.54 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಶನಿವಾರ ಇಬ್ಬರು ಮೃತ ಪಟ್ಟಿದ್ದಾರೆ. ಮೃತಪಟ್ಟಇಬ್ಬರೂ ಬೆಂಗಳೂರು ನಗರಕ್ಕೆ (Bengaluru City) ಸೇರಿದವರು. ರಾಜ್ಯದಲ್ಲಿ ಈವರೆಗೆ ಒಟ್ಟು 38,257 ಮಂದಿ ಕೋವಿಡ್‌ (Covid) ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ 190, ಕೊಡಗು (Kodagu) 21, ಹಾಸನ Hassan) 17, ಮೈಸೂರು (Mysuru) 14 ಮತ್ತು ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ 10 ಪ್ರಕರಣ ದಾಖಲಾಗಿದೆ. ಬಾಗಲಕೋಟೆ (Bagalakote), ಬೀದರ್‌ (Bidar), ಚಿಕ್ಕಬಳ್ಳಾಪುರ (Chikkaballapura), ಚಿತ್ರದುರ್ಗ (Chitradurga), ಗದಗ (Gdag), ಹಾವೇರಿ (Hauvety), ಕೋಲಾರ (Kolar), ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಉಳಿದ ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ 317 ಮಂದಿ ಕೋವಿಡ್‌ನಿಂದ ಗುಣಹೊಂದಿದ್ದು, ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 7,306ಕ್ಕೆ ಏರಿದೆ.

ಮೊದಲ ಕೇಸು: 2020ರ ಮಾ.8ರಂದು ಅಮೆರಿಕದಿಂದ (America) ಬೆಂಗಳೂರಿಗೆ (Bengaluru) ಬಂದಿದ್ದ ವ್ಯಕ್ತಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕೋವಿಡ್‌ (Covid) ಪತ್ತೆಯಾಗಿತ್ತು. ಮೇ ತಿಂಗಳ 19ರ ಬಳಿಕ ದೈನಂದಿನ ಪ್ರಕರಣ ನೂರು ದಾಟಿತ್ತು. ಜುಲೈ ಹೊತ್ತಿಗೆ ದೈನಂದಿನ ಪ್ರಕರಣ ಸಾವಿರ ಮೀರಿ ಬೆಳೆದು ದಿನಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾದವು. ಡಿಸೆಂಬರ್‌(December)  ಅಂತ್ಯಕ್ಕೆ 9.19 ಲಕ್ಷ ಪ್ರಕರಣಗಳು ದಾಖಲಾಗಿ 12,090 ಮಂದಿ ಮರಣ ವನ್ನಪ್ಪಿದ್ದರು.

2ನೇ ಅಲೆ ಭೀಕರತೆ: ಆದರೆ 2021ರ ಮಾರ್ಚ್ ಬಳಿಕ ಸೃಷ್ಟಿಯಾದ ಎರಡನೇ ಅಲೆ (Second wave) ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಏಪ್ರಿಲ್‌, ಮೇ ತಿಂಗಳಲ್ಲಿ ದಿನಕ್ಕೆ 40-50 ಸಾವಿರ ಪ್ರಕರಣ ವರದಿಯಾಗುವುದರ ಜೊತೆಗೆ ಪ್ರತಿದಿನ 400-500 ಮಂದಿ ಮರಣವನ್ನಪ್ಪುತ್ತಿದ್ದರು. ಜುಲೈ ಬಳಿಕ ದೈನಂದಿನ ಸೋಂಕಿನ ಪ್ರಮಾಣದಲ್ಲಿ ಇಳಿಕೆ ದಾಖಲಾಗಿದೆ. ಸದ್ಯ ಪ್ರತಿದಿನ 300ರ ಅಸುಪಾಸಿನಲ್ಲಿ ಪ್ರಕರಣ ವರದಿಯಾಗುತ್ತಿದೆ.

3ನೇ ರಾಜ್ಯ:  ಕರ್ನಾಟಕ (Karnataka)  ಹೊರತು ಪಡಿಸಿದರೆ ಮಹಾರಾಷ್ಟ್ರ ( Maharashtra) ಮತ್ತು ಕೇರಳ (Kerala) ರಾಜ್ಯದಲ್ಲಿ ಮಾತ್ರ ಒಟ್ಟು ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ.

  •  ರಾಜ್ಯದಲ್ಲಿ 30 ಲಕ್ಷ ದಾಟಿದ ಸೋಂಕಿತರು
  •  ಇಷ್ಟು ಸೋಂಕು ದಾಖಲಾದ ದೇಶದ 3ನೇ ರಾಜ್ಯ ಕರ್ನಾಟಕ-98% ಜನ ಚೇತರಿಕೆ
  •  13: ಮೊದಲ ಕೇಸು ಪತ್ತೆಯಾದ 13 ತಿಂಗಳ ಬಳಿಕ 10 ಲಕ್ಷ ಕೇಸು
  • 41: 10ರಿಂದ 20 ಲಕ್ಷ ಕೇಸು ತಲುಪಲು ತಗುಲಿದ ಅವಧಿ 41 ದಿನ
  • 07: 20ರಿಂದ 30 ಲಕ್ಷಕ್ಕೆ ತಲುಪಲು ಪಡೆದ ಅವಧಿ 7 ತಿಂಗಳು
  • 30 ಲಕ್ಷ ಒಟ್ಟು ಸೋಂಕಿತರು 38257 ಕೋವಿಡ್‌ಗೆ ಸಾವು
  • ರಾಜ್ಯದಲ್ಲಿ ಶನಿವಾರ ಇಬ್ಬರು ಮೃತ ಪಟ್ಟಿದ್ದಾರೆ. ಮೃತಪಟ್ಟಇಬ್ಬರೂ ಬೆಂಗಳೂರು ನಗರಕ್ಕೆ (Bengaluru City) ಸೇರಿದವರು
  • ಜುಲೈ ಬಳಿಕ ದೈನಂದಿನ ಸೋಂಕಿನ ಪ್ರಮಾಣದಲ್ಲಿ ಇಳಿಕೆ ದಾಖಲಾಗಿದೆ

 

Latest Videos
Follow Us:
Download App:
  • android
  • ios