Asianet Suvarna News Asianet Suvarna News

ಕರ್ಫ್ಯೂ ನಡುವೆ 10 ನಗರ ಸಂಸ್ಥೆಗಳ ಮತ ಎಣಿಕೆ ಆರಂಭ

ಬಳ್ಳಾರಿ ಪಾಲಿಕೆ ಸೇರಿದಂತೆ ವಿವಿಧ ನಗರಸಭೆ, ಪುರಸಭೆ ಚುನಾವಣೆ ರಿಸಲ್ಟ್‌| ಆಯಾ ನಗರ ಸ್ಥಳೀಯ ಸಂಸ್ಥೆಯ ಕೇಂದ್ರ ಸ್ಥಾನದಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ| ಸಕಲ ಸಿದ್ಧತೆ ಮಾಡಿಕೊಂಡ ರಾಜ್ಯ ಚುನಾವಣಾ ಆಯೋಗ| ಕೋವಿಡ್‌ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲನೆ ಮಾಡಲು ಆಯೋಗ ನಿರ್ದೇಶನ| 

Counting Begin in 10 Local Body Election in Karnataka During Janata Curfew grg
Author
Bengaluru, First Published Apr 30, 2021, 8:19 AM IST

ಬೆಂಗಳೂರು(ಏ.30): ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ 10 ನಗರ ಸ್ಥಳೀಯ ಸಂಸ್ಥೆಯ ಸಾರ್ವತ್ರಿಕ ಚುನಾವಣೆ ಮತ್ತು ಎರಡು ನಗರ ಸ್ಥಳೀಯ ಸಂಸ್ಥೆಯ ಉಪಚುನಾವಣೆಯ ಮತ ಎಣಿಕೆಯು ಕರ್ಫ್ಯೂ ನಡುವೆಯೇ ಇಂದು(ಶುಕ್ರವಾರ) ಆರಂಭವಾಗಿದೆ.

ಮತ ಎಣಿಕೆಯು ಆಯಾ ನಗರ ಸ್ಥಳೀಯ ಸಂಸ್ಥೆಯ ಕೇಂದ್ರ ಸ್ಥಾನದಲ್ಲಿ ಇಂದು(ಶುಕ್ರವಾರ) ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಕೋವಿಡ್‌ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಆಯೋಗವು ನಿರ್ದೇಶನ ನೀಡಿದೆ.

ಕೊರೋನಾತಂಕ ನಡುವೆಯೇ ಮತ್ತೊಂದು ಚುನಾವಣೆಗೆ ಸಿದ್ಧತೆ..!

ಮತ ಎಣಿಕೆಯ ಸಿಬ್ಬಂದಿಯು ಎಲ್ಲಾ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ಮಾಸ್ಕ್‌, ಸಾಮಾಜಿಕ ಅಂತರ, ಗ್ಲೌಸ್‌ಗಳನ್ನು ಹಾಕಿಕೊಂಡು ಮತ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮತ ಎಣಿಗೆ ಸಿಬ್ಬಂದಿ ಅನಾರೋಗ್ಯದ ಲಕ್ಷಣಗಳಿದ್ದರೆ ಅವರನ್ನು ಹೊರತುಪಡಿಸಿ ಇನ್ನುಳಿದ ಸಿಬ್ಬಂದಿ ಮಾತ್ರ ಮತ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮತ ಎಣಿಕೆ ಕೇಂದ್ರದ ಬಳಿಕ ಫಲಿತಾಂಶದ ಬಳಿಕ ಯಾರು ಸಹ ವಿಜಯೋತ್ಸವವನ್ನು ಆಚರಣೆ ಮಾಡುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳ ಮತ ಎಣಿಕೆ ನಡೆಯಲಿದೆ. ಇನ್ನುಳಿದಂತೆ ವಿಜಯಪುರ ಪುರಸಭೆ, ರಾಮನಗರ ನಗರಸಭೆ, ಚನ್ನಪಟ್ಟಣ ನಗರಸಭೆ, ಗುಡಿಬಂಡೆ ಪಟ್ಟಣ ಪಂಚಾಯತ್‌, ಭದ್ರಾವತಿ ನಗರಸಭೆ, ತೀರ್ಥಹಳ್ಳಿ ಪಟ್ಟಣ ಪಂಚಾಯತ್‌, ಬೇಲೂರು ಪುರಸಭೆ, ಬೀದರ್‌ ನಗರಸಭೆ, ಮಡಿಕೇರಿ ನಗರಸಭೆಗೆ ಸಾರ್ವತ್ರಿಕ ಚುನಾವಣೆ ನಡೆದಿದ್ದು, ಮತ ಎಣಿಕೆ ನಡೆಯಲಿದೆ. ಹಳ್ಳಿಖೇಡ ಬಿ ಪುರಸಭೆ ಮತ್ತು ಹಿರೇಕೆರೂರು ಪಟ್ಟಣ ಪಂಚಾಯತ್‌ಗೆ ಉಪಚುನಾವಣೆ ನಡೆದಿದ್ದು, ಮತ ಎಣಿಕೆ ಜರುಗಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios