ಬೆಂಗಳೂರು (ನ.04):  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣ ಇಳಿಮುಖ ಮುಂದುವರೆದಿದ್ದು, ಮಂಗಳವಾರ 2,756 ಹೊಸ ಪ್ರಕರಣಗಳು ಪತ್ತೆಯಾಗಿವೆ. 7,140 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, 26 ಮಂದಿ ಮೃತಪಟ್ಟಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ದೊಡ್ಡ ಮಟ್ಟದ ಇಳಿಕೆಯಾಗುತ್ತಿದೆ. ಸದ್ಯ ರಾಜ್ಯದಲ್ಲಿ 40,395 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 932 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಟೋಬರ್‌ ತಿಂಗಳ ಮೊದಲ ಹತ್ತು ದಿನಗಳಲ್ಲಿ ಹೊಸ ಸೋಂಕಿತರ ಪತ್ತೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದ ರಾಜ್ಯ ಇದೀಗ ಐದನೇ ಸ್ಥಾನದಲ್ಲಿದೆ.

ದೇಶದ ಪ್ರತಿ ಪ್ರಜೆಗೂ ಕೊರೊನಾ ಲಸಿಕೆ: ಪ್ರಧಾನಿ ಮೋದಿ ವಾಗ್ದಾನ ...

ರಾಜ್ಯದಲ್ಲಿ ಈವರೆಗೆ 8.32 ಲಕ್ಷ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ಇವರಲ್ಲಿ 7.80 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 11,247 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮಂಗಳವಾರ ಒಟ್ಟು 94,539 ಜನರಲ್ಲಿ ಕೊರೋನಾ ಪರೀಕ್ಷೆ ನಡೆಸಿದ್ದು, ಈವರೆಗೆ ಒಟ್ಟು 81.85 ಲಕ್ಷ ಜನರಿಗೆ ಪರೀಕ್ಷೆ ಮಾಡಲಾಗಿದೆ. 3,566 ಮಂದಿ ಆಪ್ತ ಸಮಾಲೋಚನೆ ಸೇವೆ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ 13 ಮಂದಿ ಕೊರೋನಾದಿಂದ ಮೃತರಾಗಿದ್ದಾರೆ. ಉಳಿದಂತೆ ಬಳ್ಳಾರಿ, ಹಾಸನ, ಧಾರವಾಡ 2, ಬೆಳಗಾವಿ, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಕೊಪ್ಪಳ, ಮಂಡ್ಯ ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಅಸುನೀಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1,479 ಮಂದಿಯಲ್ಲಿ ಸೋಂಕು ದೃಢವಾಗಿದೆ.

ಉಳಿದಂತೆ ಬಾಗಲಕೋಟೆ 22, ಬಳ್ಳಾರಿ 43, ಬೆಳಗಾವಿ 26, ಬೆಂಗಳೂರು ಗ್ರಾಮಾಂತರ 35, ಬೀದರ್‌ 6, ಚಾಮರಾಜ ನಗರ 25, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 55, ಚಿತ್ರದುರ್ಗ 34, ದಕ್ಷಿಣ ಕನ್ನಡ 123, ದಾವಣಗೆರೆ 39, ಧಾರವಾಡ 24, ಗದಗ 5, ಹಾಸನ 115, ಹಾವೇರಿ ಮತ್ತು ಕೊಡಗು ತಲಾ 9, ಕಲಬುರಗಿ 22, ಕೋಲಾರ 85, ಕೊಪ್ಪಳ 15, ಮಂಡ್ಯ 89, ಮೈಸೂರು 125, ರಾಯಚೂರು 14, ರಾಮನಗರ 19, ಶಿವಮೊಗ್ಗ 94, ತುಮಕೂರು 108, ಉಡುಪಿ 20, ಉತ್ತರ ಕನ್ನಡ 46, ವಿಜಯಪುರ 50 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 7 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ.