ಬೆಂಗಳೂರು, (ಏ.22): ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್​ಡೌನ್​ನಲ್ಲಿ ಕೊಂಚ ಸಡಿಲಿಕೆ ತರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇಂದು (ಬುಧವಾರ) ಮಧ್ಯರಾತ್ರಿಯಿಂದಲೇ ಕೆಲ ವಲಯಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.

ವಿನಾಯಿ ನೀಡಿದ್ರು ಮಾಸ್ಕ್, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.ಆದ್ರೆ ಕಂಟೈನ್ಮೆಂಟ್ ಏರಿಯಾಗಳಲ್ಲಿ ಈಗ ಇರುವಂತ ಲಾಕ್ ಡೌನ್ ಹಾಗೆಯೇ ಮುಂದುವರೆಯಲಿದೆ.

ಕೆಲ‌ ಮಂತ್ರಿಗಳಿಗೆ ಕಂಟಕ‌: ಕರ್ನಾಟಕದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ...!

ಹಾಗಾದ್ರೆ ಯಾವ ವಲಯಗಳಲ್ಲಿ ಲಾಕ್​ಡೌನ್​ ಕೊಂಚ ಸಡಿಲಿಕೆ ಮಾಡಿದೆ, ಯಾವ ನಿರ್ಬಂಧಗಳನ್ನು ಹಾಗೇ ಉಳಿಸಿಕೊಂಡಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

"

ಏನಿರುತ್ತೆ
*
ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ವಲಯಕ್ಕೆ ವಿನಾಯಿತಿ
* ರಸ್ತೆ, ನೀರಾವರಿ ಕಾಮಗಾರಿ ಮಾಡಲು ಅವಕಾಶ
* ಬೈಕ್, ಕಾರು ಗ್ಯಾರೇಜ್‌ ಓಪನ್‌ಗೆ ಅಸ್ತು
* ಹೋಟೆಲ್ ಗಳಲ್ಲಿ ಪಾರ್ಸೆಲ್ ಗಳಿಗೆ ಅವಕಾಶ 
* ಖಾಸಗಿ ಕಾರುಗಳಲ್ಲಿ ಇಬ್ಬರು ಜಿಲ್ಲೆಯೊಳಗೆ ಮಾತ್ರ ಪ್ರಯಾಣ 
* ಹಾಲು-ಹಾಲು ಉತ್ಪನ್ನ ಸಾಗಟ ಮಾಡಬಹುದು
* ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಕ್ಲಿನಿಕ್​ಗಳಲ್ಲಿ ಎಂದಿನಂತೆ ಸೇವೆ
* ಮೆಡಿಕಲ್​ ಶಾಪ್​ಗಳು, ಲ್ಯಾಬೋರೇಟರಿಗಳೂ ಓಪನ್
* ವೆಟರ್ನರಿ ಆಸ್ಪತ್ರೆಗಳು, ಡಿಸ್ಪೆನ್ಸರೀಸ್, ಪೆಥಾಲಜಿ ಸೇವೆಗಳು ಲಭ್ಯ
* ರೈತರ ಕೃಷಿ ಚಟುವಟಿಕೆಗಳಿಗೆ ಅವಕಾಶ
* ಕೃಷಿಗೆ ಸಂಬಂಧಿಸಿದ ಉಪಕರಣಗಳ ಮಾರಾಟಕ್ಕೆ ಅನುಮತಿ
* ಎಪಿಎಂಸಿ ಮಾರ್ಕೆಟ್​ಗಳಲ್ಲಿ ತರಕಾರಿ ಮಾರಾಟಕ್ಕೆ ಗ್ರೀನ್ ಸಿಗ್ನಲ್
* ಕಡಲ ನಗರಿಗಳಲ್ಲಿ ಮೀನುಗಾರಿಕೆಗೆ ಅನುಮತಿ
* ಬ್ಯಾಂಕ್​ಗಳು, ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ
* ಕಿರಾಣಿ ಅಂಗಡಿ, ಮಾಂಸದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ
* ಕೋರಿಯರ್, ಅಂಚೆ ಸೇವೆಗೆ ಅನುಮತಿ ನೀಡಿದ ಸರ್ಕಾರ
* ಅಮೆಜಾನ್, ಫ್ಲಿಪ್​ಕಾರ್ಟ್​ಗಳ ಆನ್​ಲೈನ್​ ಖರೀದಿ ಸೇವೆ ಲಭ್ಯ
* ವಿಮಾನ ನಿಲ್ದಾಣ, ರೇಲ್ವೆ ಸ್ಟೇಷನ್, ಕಂಟೇನರ್ ಡಿಪೋಗಳಲ್ಲಿ ಸಂಸ್ಕರಣಾ ಘಟಕ ಸೇವೆ
* ಲಾಕ್​ಡೌನ್​ನಿಂದ ಸಿಲುಕಿಕೊಂಡಿರುವ ಪ್ರವಾಸಿಗರಿಗೆ ವಸತಿ ಕಲ್ಪಿಸಿರುವ ಹೋಟೆಲ್, ಹೋಮ್​​ಸ್ಟೇ, ಲಾಡ್ಜ್​ಗಳಿಗೆ ಅನುಮತಿ
* ರಸ್ತೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ
* ಸಣ್ಣ, ಅತೀ ಸಣ್ಣ ಕೈಗಾರಿಕೆ ಸೇರಿ ಎಲ್ಲಾ ರೀತಿಯ ಕೈಗಾರಿಕಾ ಉತ್ಪಾದನಾ ವಲಯಗಳಿಗೆ ಅನುಮತಿ
* ಮೆಟ್ರೋ ರೈಲು ಯೋಜನೆ ಕಾಮಗಾರಿಗೆ ಅನುಮತಿ

ಯಾವುದು ಇರಲ್ಲ..?
* ಬೈಕ್ ಸಂಚಾರಕ್ಕೆ ಅನುಮತಿ ಇಲ್ಲ
* ಸಭೆ-ಸಮಾರಂಭ ಮಾಡುವಂತಿಲ್ಲ.
* ಮದ್ಯ ಮಾರಾಟ ಮಾಡಲು ಅವಕಾಶವಿಲ್ಲ
* ಸಾರ್ವಜನಿಕ ವಲಯಗಳಲ್ಲಿ ಕಾಫಿ, ಟೀ ಮಾರುವಂತಿಲ್ಲ
* ರೈಲು, ಬಸ್ಸು, ಮೆಟ್ರೋ ಸೇವೆಗಳು ಇರುವುದಿಲ್ಲ
* ವೈದ್ಯಕೀಯ ತುರ್ತು ಹೊರತುಪಡಿಸಿ ಅಂತಾರಾಜ್ಯ ಹಾಗೂ ಅಂತರ್​ಜಿಲ್ಲೆ ಓಡಾಟಕ್ಕೆ ಅವಕಾಶ ಇಲ್ಲ
* ಆಟೋ, ಟ್ಯಾಕ್ಸಿ, ಕ್ಯಾಬ್​ ಸೇವೆ ಇರುವುದಿಲ್ಲ
* ಚಿತ್ರಮಂದಿರ, ಬಾರ್, ಪಾರ್ಕ್, ಸ್ವಿಮ್ಮಿಂಗ್​ ಪೂಲ್​, ಶಾಪಿಂಗ್​ ಮಾಲ್​ಗಳು ಎಂದಿನಂತೆ ಕ್ಲೋಸ್​
* ಸಭೆ ಸಮಾರಂಭಗಳಿಗಿಲ್ಲ ಅವಕಾಶ
* ಹಾಟ್​​​ಸ್ಪಾಟ್​​ ಪ್ರದೇಶಗಳಲ್ಲಿ ಸಡಿಲಿಕೆ ಅನ್ವಯಿಸುವುದಿಲ್ಲ
* ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು 20 ಜನರಿಗಷ್ಟೇ ಅವಕಾಶ
* ಕಂಟೈನ್​ಮೆಂಟ್ ಜೋನ್​ಗಳಿಗಿಲ್ಲ ವಿನಾಯಿತಿ
* ಕೊರೋನಾ ಹಾಟ್​ಸ್ಪಾಟ್​ ಏರಿಯಾಗಳಲ್ಲಿ ಕೇಂದ್ರದ ಗೈಡ್​ಲೈನ್ಸ್​ ಎಂದಿನಂತೆ ಇರಲಿದೆ
* ಐಟಿ-ಬಿಟಿ ವಲಯಕ್ಕೆ ಮೇ.3ರ ವರೆಗೆ ವಿನಾಯಿತಿ ಇಲ್ಲ