Asianet Suvarna News Asianet Suvarna News

ಔಷಧ, ಆಮ್ಲಜನಕಕ್ಕೆ ರಾಜ್ಯದಲ್ಲಿ ವಾರ್‌ ರೂಂ!

ಔಷಧ, ಆಮ್ಲಜನಕಕ್ಕೆ ರಾಜ್ಯದಲ್ಲಿ ವಾರ್‌ ರೂಂ| ಆಕ್ಸಿಜನ್‌, ರೆಮ್‌ಡೆಸಿವಿರ್‌ 24*7 ಪೂರೈಕೆಗೆ ಕ್ರಮ

Coronavirus Karnataka govt sets up war room to monitor supply of oxygen Remdesivir pod
Author
Bangalore, First Published Apr 22, 2021, 7:27 AM IST

ಬೆಂಗಳೂರು(ಏ.22): ರಾಜ್ಯದಲ್ಲಿ ಕೋವಿಡ್‌-19 ರೋಗಿಗಳಿಗೆ ಸಕಾಲದಲ್ಲಿ ಸಾಕಷ್ಟುಆಮ್ಲಜನಕ ಮತ್ತು ರೆಮ್‌ಡೆಸಿವಿರ್‌ ಚುಚ್ಚುಮದ್ದು ಪೂರೈಕೆ ಆಗುವಂತೆ ನೋಡಿಕೊಳ್ಳಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ‘ವಾರ್‌ ರೂಮ್‌’ ಅನ್ನು ರಾಜ್ಯ ಸರ್ಕಾರ ಬುಧವಾರದಿಂದ ಪ್ರಾರಂಭಿಸಿದೆ. ಈ ವಾರ್‌ ರೂಮ್‌ನಲ್ಲಿ ಒಟ್ಟು 26 ಸಿಬ್ಬಂದಿ ಪ್ರತಿ ದಿನ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

"

ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆಗಳು ಹಾಗೂ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 89517 55722 ಕರೆ ಮಾಡಿ ಆಮ್ಲಜನಕ ಮತ್ತು ರೆಮ್‌ಡೆಸಿವರ್‌ ಪೂರೈಕೆ ಬಗ್ಗೆ ದೂರು ಅಥವಾ ಮಾಹಿತಿ ಪಡೆಯಬಹುದು.

ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಇರುವ ಮೊದಲ ಪಾಳಿಯಲ್ಲಿ ಮೇಲ್ವಿಚಾರಕರಾಗಿ ಸಹಾಯಕ ಔಷಧ ನಿಯಂತ್ರಕರಾದ ಯಶೋದಾ ಎಸ್‌.ವಿ. (94491 96029), ಔಷಧ ಪರಿವೀಕ್ಷಕರಾದ ಚಂದ್ರಪ್ರಭಾ ಕೆ. (96119 76682), ಕಿರಿಯ ವೈಜ್ಞಾನಿಕ ಅಧಿಕಾರಿಗಳಾದ ತೇಜಸ್ವಿನಿ ಸಿ. (82175 07288), ಲತಾ ಕೆ.ಬಿ. (99644 87492), ಸಿಬ್ಬಂದಿಗಳಾಗಿ ಕಿರಿಯ ವೈಜ್ಞಾನಿಕ ಅಧಿಕಾರಿಗಳಾದ ಹೇಮಾವತಿ ಜೆ. (99160 59429), ವಾಣಿ ಎಸ್‌. (98451 30048), ಚೂಡಾಮಣಿ (94807 74708) ಅಧೀಕ್ಷಕರಾದ ಪದ್ಮಾ ಜೆ.ಟಿ. (99869 99362), ಆರ್‌. ಸುನೀತ ಕುಮಾರಿ (95350 36811), ಪ್ರಥಮ ದರ್ಜೆ ಸಹಾಯಕರಾದ ನಿರ್ಮಲಾದೇವಿ ಎಸ್‌. (94483 86453), ಶ್ವೇತಾ ಎಸ್‌. (90368 26616), ಸುವರ್ಣ ಜೆ. (94494 89871), ವಿಜಯಾ ಕೆ. (99458 28585), ದಿವ್ಯಜ್ಯೋತಿ (95359 10979) ಕಾರ್ಯನಿರ್ವಹಿಸಲಿದ್ದಾರೆ.

ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆಯವರೆಗಿನ ಎರಡನೇ ಪಾಳಿಯಲ್ಲಿ ಮೇಲ್ವಿಚಾರಕರಾಗಿ ಸಹಾಯಕ ಔಷಧ ನಿಯಂತ್ರಕರಾದ ಡಾ

ವಿನೋದ್‌ ಎಸ್‌. ಕಾಂಬ್ಲೆ (88842 52200), ರೇಣುಕಾಸ್ವಾಮಿ ಎಚ್‌.ಎಮ್‌. (94490 48659), ಸಿಬ್ಬಂದಿಯಾಗಿ ಪ್ರಥಮ ದರ್ಜೆ ಸಹಾಯಕರಾದ ಕೃಷ್ಣೋಜಿರಾವ್‌ ಟಿ. (99861 97671), ದ್ವಿತೀಯ ದರ್ಜೆ ಸಹಾಯಕರಾದ ನರೇಶ್‌ ಎ. (90609 96880), ಅರುಣ್‌ ಕುಮಾರ್‌ ಆರ್‌. (94493 75968), ಮುನಿರಾಜು ವಿ.(99002 62599), ವೆಂಕಟೇಶಪ್ಪ (99458 31452), ಅಭಿಷೇಕ ಮಜ್ಜಗಿ (9886 46251), ಜಯಂತ್‌ ಪಾಟೀಲ್‌ (78923 38306), ಪ್ರಯೋಗ ಶಾಲಾ ಪರಿಚಾರಕರಾದ ಹರ್ಷವರ್ಧನ (95385 38118), ಎಚ್‌. ಮಂಜುನಾಥ್‌ (99452 11810) ಕರ್ತವ್ಯ ನಿರ್ವಹಿಸಲಿದ್ದಾರೆ.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗಿನ ರಾತ್ರಿ ಪಾಳಿಯಲ್ಲಿ ಸಹಾಯಕ ಔಷಧ ನಿಯಂತ್ರಕರಾದ ಸಿ. ಲಿಂಗರಾಜು (98800 37351), ಔಷಧ ಪರಿವೀಕ್ಷಕರಾದ ಪ್ರಸನ್ನಕುಮಾರ್‌ (94800 92899), ಸಿಬ್ಬಂದಿಗಳಾದ ಯಶವಂತ ಕುಮಾರ್‌ (94482 17697), ಮಂಜುನಾಥ (94809 17985), ಕೆ. ಶಿವಲಿಂಗಯ್ಯ (98446 42938), ಲಕ್ಷ್ಮೇನರಸಿಂಹಮೂರ್ತಿ (94485 11903), ಕಿರಣ್‌ ಎಸ್‌. (99160 86183), ವಿಜಯ (91640 25718), ಅಶೋಕ್‌ ಕೆ.ಆರ್‌ (93459 43872) ಕಾರ್ಯನಿರ್ವಹಿಸಲಿದ್ದಾರೆ.

89517 55722 ಹೆಲ್ಪ್‌ಲೈನ್‌ ಆರಂಭ

ಯಾವುದೇ ಖಾಸಗಿ ಆಸ್ಪತ್ರೆಗಳು ಹಾಗೂ ಸಾರ್ವಜನಿಕರು ಈ ಸಹಾಯವಾಣಿಗೆ ಕರೆ ಮಾಡಿ ಆಮ್ಲಜನಕ ಮತ್ತು ರೆಮ್‌ಡೆಸಿವರ್‌ ಪೂರೈಕೆ ಬಗ್ಗೆ ದೂರು ಅಥವಾ ಮಾಹಿತಿ ಪಡೆಯಬಹುದು.

Follow Us:
Download App:
  • android
  • ios