Asianet Suvarna News Asianet Suvarna News

ಸೋಂಕಿತೆಗೆ ದೆವ್ವ ಬಿಡಿಸಲು ಪೂಜೆ: ಮೌಢ್ಯಕ್ಕೆ ಮಹಿಳೆ ಬಲಿ!

ಸೋಂಕಿತೆಗೆ ದೆವ್ವ ಬಿಡಿಸಲು ಪೂಜೆ!| ಉಸಿರಾಟ ತೊಂದರೆಗೆ ಚಿಕಿತ್ಸೆ ನೀಡುವ ಬದಲು ದೇವಾಲಯ, ಪೂಜಾರಿ ಬಳಿಗೆ| ಮೌಢ್ಯಕ್ಕೆ ನೆಲಮಂಗಲ ಮಹಿಳೆ ಬಲಿ| ಪೂಜಾರಿ ಸೇರಿ 28 ಮಂದಿ ಕ್ವಾರಂಟೈನ್‌

Coronavirus Infected Woman From Nelamangala dies of superstition belief
Author
Bangalore, First Published May 26, 2020, 7:30 AM IST

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಮೇ.26): ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 55 ವರ್ಷದ ಕೊರೋನಾ ಸೋಂಕಿತ ಮಹಿಳೆಗೆ ದೆವ್ವ, ದುಷ್ಟಶಕ್ತಿಯ ಕಾಟವಿದೆ ಎಂದು ಭಾವಿಸಿದ ಸಂಬಂಧಿಕರು ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸದೆ ದೆವ್ವ ಬಿಡಿಸಲು ದೇವಾಲಯ ಹಾಗೂ ಪೂಜಾರಿಗಳ ಬಳಿಗೆ ಕರೆದೊಯ್ದಿದ್ದು ಬೆಳಕಿಗೆ ಬಂದಿದೆ.

ಸಂಬಂಧಿಕರ ಈ ಮೌಢ್ಯದ ಫಲವಾಗಿ ಪೂಜಾರಿಯೊಬ್ಬರು ಸೇರಿದಂತೆ ಆಕೆಯ ದೆವ್ವ ಬಿಡಿಸಲು ನಡೆಸಿದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡವರನ್ನು ಕ್ವಾರಂಟೈನ್‌ ಮಾಡಲಾಗಿದ್ದರೆ, ಮಹಿಳೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮೇ 24ರ ಭಾನುವಾರ ಮೃತಪಟ್ಟಿದ್ದಾರೆ.

ರಾಜ್ಯದಲ್ಲೀಗ ಬೆತ್ತಲೆ ಸೇವೆ ಸಂಪೂರ್ಣ ಬಂದ್: ಸಿದ್ದು ತಂದ ಕಾಯ್ದೆ ಜಾರಿಗೆ!

ದೆವ್ವ ಓಡಿಸಲು ದೇವಾಲಯದಲ್ಲಿ ಪೂಜೆ ಕಾರ್ಯ ನಡೆಸಿದ್ದ ಪೂಜಾರಿ ಸೇರಿ 28 ಮಂದಿ ಇದೀಗ ಕ್ವಾರಂಟೈನ್‌ನಲ್ಲಿದ್ದಾರೆ. ಈ ಪೈಕಿ 13 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ತುಮಕೂರಿನ ಸಿದ್ದಾರ್ಥ ಆಸ್ಪತ್ರೆಯಲ್ಲಿ ಐಸೋಲೇಷನ್‌ ಮಾಡಿದ್ದು, ಉಳಿದ 15 ಮಂದಿ ದ್ವಿತೀಯ ಹಂತದ ಸಂಪರ್ಕಿತರನ್ನು 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಮೌಢ್ಯ ತಂದ ಆಪತ್ತು:

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಶಿವಗಂಗೆ ಬಳಿಯ ವೀರಸಾಗರದ 55 ವರ್ಷದ ಮಹಿಳೆಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಆದರೆ, ಸಂಬಂಧಿಕರು ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸದೆ ದೇವಾಲಯದ ಮೊರೆ ಹೋಗಿದ್ದಾರೆ. ಅದರಂತೆ ವೀರಸಾಗರದ ಲಕ್ಷ್ಮೇ ದೇವಾಲಯದಲ್ಲಿ ದುಷ್ಟಶಕ್ತಿ ಪರಿಹಾರಕ್ಕಾಗಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅವರ ಸಹೋದರ ಊರ್ಡಿಗೆರೆ ಬಳಿಯ ಬೈಚಿಗಾನಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ಆದರೂ, ಉಸಿರಾಟ ತೊಂದರೆ ತೀವ್ರವಾದಾಗ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಸ್ವಾಸ್ಥ್ಯ ಉಲ್ಪಣಿಸಿದ್ದರಿಂದ ಮೇ 19ಕ್ಕೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.

'ರೇವಣ್ಣ ವಾಮಾಚಾರಕ್ಕೆ ಗೌಡ, ಎಚ್‌ಡಿಕೆ ಬಲಿ'

ಆಗಿದ್ದೇನು?

- ಬೆಂಗಳೂರು ಗ್ರಾಮಾಂತರ ಜಿಲ್ಲೆಯ 55 ವರ್ಷದ ಮಹಿಳೆಗೆ ಉಸಿರಾಟದ ತೊಂದರೆ

- ದೆವ್ವದ ಕಾಟ ಎಂದು ಭಾವಿಸಿ ದೇವಾಲಯ, ಪೂಜಾರಿ ಬಳಿಗೆ ಒಯ್ದ ಸಂಬಂಧಿಕರು

- ಆದರೂ, ತೊಂದರೆ ಉಲ್ಬಣಿಸಿದಾಗ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ

- ಮೇ 19ಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲು, ಪರೀಕ್ಷೆ ಬಳಿಕ ಕೊರೋನಾ ಸೋಂಕು ದೃಢ

- ಚಿಕಿತ್ಸೆ ಫಲಕಾರಿಯಾಗದೆ ಮೇ 24ಕ್ಕೆ ಸಾವು

Follow Us:
Download App:
  • android
  • ios