ಬೆಂಗಳೂರು(ಮಾ .19)  ಕೊರೋನಾ ವೈರಸ್ ಇಡೀ ಪ್ರಪಂಚವನ್ನೇ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದರೆ ಇತ್ತ  ಒಂದಾದ ಮೇಲೊಂದರಂತೆ ಸರ್ಕಾರ ಸುರಕ್ಷಾ ಕ್ರಮ ತೆಗೆದುಕೊಳ್ಳುತ್ತಿದೆ. ಇವೆಲ್ಲದರ ನಡುವೆ ಉತ್ತರ ಕರ್ನಾಟಕಕ್ಕೆ ಇಲ್ಲಿಯೂ ಅನ್ಯಾಯ ಆಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಈ ಮಾತಿಗೆ ಒಂದಿಷ್ಟು ಆಧಾರಗಳು ಇವೆ.

ವಿಧಾನಸಭೆ ಕಾರ್ಯ ಕಲಾಪಗಳು ನಡೆಯುತ್ತಿದ್ದು ರಾಜ್ಯ ಸರ್ಕಾರ ಬೆಂಗಳೂರು ಮೆಡಿಕಲ್ ಕಾಲೇಜು ಇಸ್ಟಿಟ್ಯೂಟ್, ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ವೈರಾಲಜಿ ಫೀಲ್ಡ್ ಯುನಿಟ್ ಬೆಂಗಳೂರು, ಮೈಸೂರು ಮೆಡಿಕಲ್ ಕಾಲೇಜು, ಮೈಸೂರು, ಹಾಸನ ಇಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಹಾಸನ ಮತ್ತು ಶಿವಮೊಗ್ಗ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಶಿವಮೊಗ್ಗದಲ್ಲಿ ಕೊಓನಾ ವೈರಸ್ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಅಧಿಕೃತವಾಗಿ ತಿಳಿಸಿರುವುದುದೇ ಈ ಕೂಗಿಗೆ ಮೂಲ ಕಾರಣ.

ಕರ್ನಾಟಕದಲ್ಲಿ ಕೊರೋನಾ ಕಾರಣಕ್ಕೆ ಅತಿ ಹೆಚ್ಚು ತಾಪತ್ರಯ ಪಟ್ಟಿರುವುದು ಕಲಬುರಗಿ. ಕಲಬುರಗಿಯಲ್ಲಿ ಕೇಂದ್ರ ಸ್ಥಾಪನೆ ಮಾಡುತ್ತೇವೆ ಎಂದು ಸಂಸದ ಉಮೇಶ್ ಜಾಧವ್ ಹೇಳಿದ್ದರೂ ಇಲ್ಲಿಯವೆರೆಗೂ ಅನುಷ್ಠಾನ ಆಗಿಲ್ಲ. ಇದೆಲ್ಲದರ ನಡುವೆ ಉತ್ತರ ಕರ್ನಾಟಕಕ್ಕೆ ಸೇರಿದ 14-15 ಜಿಲ್ಲೆಗಳಲ್ಲಿ ಒಂದು ಕೇಂದ್ರ ಸ್ಥಾಪನೆ ಇಲ್ಲ.

ಬೆಂಗಳೂರಿಗರು ಪಿಜಿ ಖಾಲಿ ಮಾಡಬೇಕಾ? ಕಮಿಷನರ್ ಆದೇಶದಲ್ಲಿ ಏನಿದೆ?

ಕರಾವಳಿ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗವನ್ನು ಸರ್ಕಾರ ಮರೆತಿತೆ? ಈ ಭಾಗದ ಜನರ ಆತಂಕ ದೂರ ಮಾಡುವವರು ಯಾರು? ಎಂಬಿತ್ಯಾದಿ ಪ್ರಶ್ನೆಗಳನ್ನು ಜನರು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇದ್ದಾರೆ.  ಆ ಭಾಗದ ನಾಯಕರು ಮತ್ತು ಅಧಿಕಾರದಲ್ಲಿ ಇರುವವರು ಮಾತ್ರ ಉತ್ತರಿಸಲು ಸಾಧ್ಯ. ಸದ್ಯಕ್ಕೆ ಮಹಾಮಾರಿ ವಿರುದ್ಧ ಹೋರಾಟ ಮಾಡುವುದು ಮಾತ್ರ ನಮ್ಮೆಲ್ಲರ ಗುರಿಯಾಗಿರಬೇಕು.

ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ವಿಪರೀತವಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೇ ಮೊದಲ ಸಾವು ದಾಖಲಾಗಿದ್ದು ಕಲಬುರಗಿಯಲ್ಲಿಯೇ. ಮಾ. 18ನೇ ತಾರೀಕಿನಿಂದಲೇ ಕಲಬುರಗಿಯಲ್ಲಿ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಜಾಧವ್ ತಿಳಿಸಿದ್ದರು.

ಹಿಂದೆ ನೆರೆ ಹಾವಳಿ ಸಂದರ್ಭದಲ್ಲಿಯೂ ಇಂಥದ್ದೆ ಪಾಡನ್ನು ಜನ ಅನುಭವಿಸಿದ್ದರು. ಇದೀಗ ಕೊರೋನಾ ಬಂದು ವಕ್ಕರಿಸಿದೆ. ಒಂದಾದರೂ ಕೇಂದ್ರ ಶೀಘ್ರವಾಗಿ ಸ್ಥಾಪನೆಯಾಗಲಿ ಬಿಡಿ

 

'ಉತ್ತರ ಕರ್ನಾಟಕ ಏನ್ ಪಾಪ ಮಾಡಿದಿಯೋ ಯಾರಿಗೆ ಗೊತ್ತು..!' #Coronavirus #NorthKarnataka #BJP #KarnatakaGovt https://kannada.asianetnews.com/state/coronavirus-covid-19-testing-lab-karnataka-govt-neglects-north-karnataka-q7fsht @BSYBJP @sriramulubjp @BJP4Karnataka