ನೆರೆ ರಾಷ್ಟ್ರ ಚೀನಾದಿಂದ ಕೊರೋನಾ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಆರಂಭದ ದಿನಗಳಿಂದಲೂ ಕರ್ನಾಟಕ ಮೂರನೇ ಸ್ಥಾನದಲ್ಲಿತ್ತು. ಆದರೆ ಇಲ್ಲಿ ತೆಗೆದುಕೊಂಡ ಕಟ್ಟು ನಿಟ್ಟಿನ ಕ್ರಮಗಳು ಹಾಗೂ ಇದನ್ನು ಪಾಲಿಸಿದ ರೀತಿಯಿಂದ ರಾಜ್ಯ ಟಾಪ್ ಮೂರರಿಂದ 13ನೇ ಸ್ಥಾನಕ್ಕೆ ಜಿಗಿಯಲು ಯಶಸ್ವಿಯಾಯಿತು. ಆದರೆ ಈ ಸಾಧನೆಗೆ ಬೆಂಗಳೂರಿನಲ್ಲಿ ತೆಗೆದುಕೊಂಡ ಕ್ರಮ ಕೂಡಾ ಬಹುದೊಡ್ಡ ಕೊಡುಗೆಯಾಗಿದೆ.

ಕರೋನಾ ಕಂಟ್ರೋಲ್ ಮಾಡುವಲ್ಲಿ ಬೆಂಗಳೂರು ನಂ 1

ಹೌದು ರಾಜ್ಯ ಸರ್ಕಾರ ವಿಧಿಸಿದ್ದ ನಿಯಮಗಳೊಂದಿಗೆ, ಬೆಂಗಳೂರಿನಲ್ಲಿ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಶೀಘ್ರ ಕಾರ್ಯಚಾರಣೆಯಿಂದ ಕರೋನಾ‌ ಸೋಂಕು ಕಂಟ್ರೋಲ್ ಮಾಡುವಲ್ಲಿ ಸಾಧ್ಯವಾಗಿದೆ. ಸರ್ಕಾರ ಹೇರಿದ್ದ ಲಾಕ್ ಡೌನ್ ಬಗ್ಗೆ ಬೆಂಗಳೂರಿನ ಮುಕ್ಕಾಲು ಪಾಲು ಜನರಲ್ಲಿ ಅರಿವು ಮೂಡಿಸಿದ್ದು, ಪೋಲಿಸ್ ಇಲಾಖೆಯ ಕ್ಷೀಪ್ರ ಕಾರ್ಯಾಚಾರಣೆಯಿಂದ ಇದಕ್ಕೆ ಮತ್ತಷ್ಟು ಬಲ ಸಿಕ್ಕಿತು. ಮಾಧ್ಯಮಗಳ ಕರೋನಾ ಸಂಬಂಧ ಸತತವಾಗಿ ಮೂಡಿಸಿದ್ದ ಜಾಗೃತಿ ಕಾರ್ಯಕ್ರಮಗಳೂ ಈ ನಿಟ್ಟಿನಲ್ಲಿ ಸಹಕಾರಿಯಾದವು. 

ಕೊರೋನಾ ವೈರಸ್‌ಗೆ ಮೊದಲ ಬೆಂಗಳೂರಿನ ನಿವಾಸಿ ಬಲಿ!

ಕಳೆದ 21 ದಿನಗಳ ಕಾಲ ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಎಲಲ್ಲಾ ಜಿಲ್ಲೆಗಳು ಸಂಪೂರ್ಣ ಸ್ತಬ್ಧಗೊಂಡಿದ್ದು, ಉಳಿದ ರಾಜ್ಯಗಳಿಗೆ ಹೊರತು ಪಡಿಸಿದ್ರೆ ರಾಜ್ಯದಲ್ಲಿ ಕರೋನಾವನ್ನು ತಹಬದಿಗೆ ತರುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ. 

ಇನ್ನು ಸಿಲಿಕಾನ್ ಸಿಟಿ‌‌ ಅಂದ್ರೆ ಅತೀ ಹೆಚ್ಚು ವಿದೇಶಿ ಪ್ರಯಾಣಿಕರು ಬರ್ತಾರೆ, ಅಲ್ಲದೇ ಅತೀ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶವಿದು. ಹೀಗಿದ್ದರೂ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ಕರೋನಾ ಸೋಂಕಿನ ಪ್ರಮಾಣ ತ್ವರಿತ ಗುಣಮುಖವಾಗಿದೆ.

ಅಲ್ಲದೇ ಇತರ ರಾಜದಯದ ಮಹಾನಗರಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ಅತೀ ಹೆಚ್ಚು ಕರೋನಾ ಸೋಂಕಿತರ ಸಂಖ್ಯೆ ಹೆಚ್ಚು ಇತ್ತು. ಹೀಗಿದ್ದರೂ ಇತರ ಮಹಾನಗರಗಳಿಗಿಂತ ಗುಣಮುಖ ಹೊಂದಿದವರ ಸಂಖ್ಯೆಯಲ್ಲೂ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

ಲಾಕ್‌ಡೌನ್: ಒಂದು ಕಡೆಯಿಂದ ಮತ್ತೊಂದೆಡೆಗೆ ಸಂಚರಿಸಬಹುದು, ಕಂಡಿಷನ್ ಅಪ್ಲೈ

ಸೋಂಕಿತರ ಮಟ್ಟ

* ಮಹಾನಗರ ದೆಹಲಿಯಲ್ಲಿ  1103 ಸೋಂಕಿತರು ಇದ್ರೆ 19 ಸಾವು ಸಂಭವಿಸಿದೆ

* ಮಹಾನಗರ ಮುಂಬೈಯಲ್ಲಿ 1298 ಸೋಂಕಿತರು ಇದ್ರೆ 92 ಸಾವು ದಾಖಲಾಗಿದೆ

* ಹೈದರಾಬಾದ್ ನಲ್ಲಿ ಸೋಂಕಿತರ ಪ್ರಮಾಣ 213 ಹಾಗೂ ಸಾವು 4 ಸಂಭವಿಸಿದೆ

* ಪುಣೆಯಲ್ಲಿ 185 ಸೋಂಕಿತರು ಪತ್ತೆಯಾಗಿದ್ದು 9 ಸಾವು ಸಂಭವಿಸಿದೆ

* ಚೈನೈನಲ್ಲೂ 199 ಸೋಂಕಿತರ ಪ್ರಮಾಣ ಇದ್ದು 5 ಸಾವು ಸಂಭವಿಸಿದೆ

* ಅಲಹಾಬಾದ್ ನಲ್ಲಿ 282 ಸೋಂಕಿತರ ಪ್ರಮಾಣವಿದ್ದು 11 ಸಾವು ಸಂಭವಿಸಿದೆ.

* ಇತ್ತ ಮಹಾನಗರ ಬೆಂಗಳೂರಿನಲ್ಲಿ 77 ಸೋಂಕಿತರ ಪ್ರಮಾಣ ಇದ್ದು 2 ಸಾವು ಸಂಭವಿಸಿದೆ.

ಒಟ್ಟಾರೆಯಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಡಳಿ ವಲಯ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯ ನಿರ್ವಹಿಸಿದೆ ಎಂದರೆ ತಪ್ಪಾಗಲ್ಲ.!