ಬೊಮ್ಮನಹಳ್ಳಿ(ಜ.10): ಬೊಮ್ಮನಹಳ್ಳಿ ವಲಯದಲ್ಲಿ ಜನವರಿ 16ರಿಂದ ಕೊರೋನಾ ವ್ಯಾಕ್ಸಿನೇಷನ್‌ ನೀಡಲು ಪ್ರಾರಂಭಿಸಲಾಗುವುದು ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್‌ರೆಡ್ಡಿ ಮಾಹಿತಿ ನೀಡಿದರು.

ಎಚ್‌ಎಸ್‌ಆರ್‌ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ರೋಟರಿ ಕ್ಲಬ್‌ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ರೋಟರಿ ಕ್ಲಬ್‌ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ನೋಡ ನೋಡ್ತಿದ್ದಂತೆ ಬಾಯಿ ತೆರೆದ ಭೂಮಿ, ನೂರಾರು ಕಾರುಗಳನ್ನು ನುಂಗೇಬಿಡ್ತು..!

ಇವರ ಸೇವೆ ನಿಜಕ್ಕೂ ಶ್ಲಾಘನೀಯ. ಕೊರೋನಾ ಸಂದರ್ಭದಲ್ಲಿ ರೋಟರಿ ಕ್ಲಬ್‌ ನೀಡಿದ ನೆರವು ಮರೆಯಲು ಅಸಾಧ್ಯ. ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇವರ ಕಾರ್ಯ ಅಭಿನಂದನಾರ್ಹ ಎಂದರು.

ಈಗಾಗಲೇ ವ್ಯಾಕ್ಸಿನೇಷನ್‌ ಡ್ರೈರನ್‌ ಆರಂಭವಾಗಿದೆ. ಜನವರಿ 13ರಿಂದ ಮಾದರಿ ವ್ಯಾಕ್ಸಿನೇಷನ್‌ ಆರಂಭವಾಗಲಿದ್ದು, ಜನವರಿ 16ರಿಂದ ಸಂಪೂರ್ಣವಾಗಿ ವ್ಯಾಕ್ಸಿನೇಷನ್‌ ಒದಗಿಸಲಾಗುವುದು. ಮೊದಲು ಕೊರೋನಾ ವಾರಿಯರ್ಸ್‌ಗಳಾದ ವೈದ್ಯರು, ಪೊಲೀಸರು, ಬಿಬಿಎಂಪಿ ಸಿಬ್ಬಂದಿಗೆ ನೀಡಲಾಗುತ್ತದೆ. ನಂತರ ಸಾರ್ವಜನಿಕರಿಗೆ ಮುಕ್ತವಾಗಿ ಸಿಗಲಿದೆ ಎಂದು ಹೇಳಿದರು.