* LKG ಹಾಗೂ UKG ಆರಂಭಕ್ಕೆ ಗ್ರೀನ್ ಸಿಗ್ನಲ್  ನೀಡಿದ್ದ ಸರ್ಕಾರ* ನೈಟ್ ಕರ್ಪ್ಯೂ ಹಿಂದಕ್ಕೆ  ಪಡೆದ ರಾಜ್ಯ ಸರ್ಕಾರ*  ಕುದುರೆ ರೇಸ್ ಗಳಿಗೆ ಅನುಮತಿ * ರೇಸ್ ನಲ್ಲಿ ಭಾಗವಹಿಸುವ ವ್ಯಕ್ತಿಗಳು ಲಸಿಕೆ ಪಡೆದಿದ್ದರೆ ಮಾತ್ರ ಅವಕಾಶ

ಬೆಂಗಳೂರು (ನ. 05) ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿ ಇರುವುದರಿಂದ ಕೊನೆಯದಾಗಿ ಬಾಕಿ ಉಳಿಸಿಕೊಂಡಿದ್ದ ನೈಟ್ ಕರ್ಪ್ಯೂ ವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಈ ಮೂಲಕ ಈಜುಕೋಳ ಒಂದನ್ನು ಹೊರತುಪಡಿಸಿ ಎಲ್ಲ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಂತೆ ಆಗಿದೆ.

"

ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ಇದ್ದ ನೈಟ್ ಕರ್ಪ್ಯೂ ಹಿಂದಕ್ಕೆ ಪಡೆದಿರುವುದರಿಂದ ವಾಣಿಜ್ಯ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ಕೊರೋನಾ ಕಾಡುತ್ತಿದ್ದ ಕಾರಣರಾತ್ರಿ ವೇಳೆ ನಿಷೇಧಾಜ್ಞೆ ಮುಂದುವರಿಸಿಕೊಂಡು ಬರಲಾಗಿತ್ತು. ಗಡಿ ಭಾಗದಲ್ಲಿ ತಪಾಸಣೆ ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬರಲಾಗಿತ್ತು.

ಮಕ್ಕಳ ವ್ಯಾಕ್ಸಿನ್ ಗೂ ತ್ವರಿತ ಅನುಮತಿ

ಕುದುರೆ ರೇಸ್​ಗೆ ಅನುಮತಿ ; ಕುದುರೆ ರೇಸ್​ಗೆ ಅನುಮತಿ ನೀಡಲಾಗಿದ್ದು ಕೆಲ ಷರತ್ತು ವಿಧಿಸಲಾಗಿದೆ. ಕೊರೋನಾ ನಿಯಮಗಳ ಪಾಲನೆ ಮಾಡಬೇಕು. ರೇಸ್ ಕೋರ್ಸ್​​ಗೆ ಪ್ರವೇಶಿಸುವವರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಸ್ಥಳಾವಕಾಶದ ಸಾಮರ್ಥ್ಯ ಆಧರಿಸಿ ಜನ ಭಾಗವಹಿಸಬೇಕು ಎಂದು ತಿಳಿಸಲಾಗಿದೆ.

ಪ್ರಾಥಮಿಕ ಶಾಲೆಗಳನ್ನು ಹಂತಹಂತವಾಗಿ ಓಪನ್ ಮಾಡಿದ್ದ ಸರ್ಕಾರ ನವೆಂಬರ್ 8 ರಿಂದ ರಾಜ್ಯದಲ್ಲಿ ಎಲ್ ಕೆ ಜಿ ಹಾಗೂ ಯುಕೆಜಿ ಆರಂಭಕ್ಕೂ ಗ್ರೀನ್ ಸಿಗ್ನಲ್ ನೀಡಿದೆ. ಅರ್ಧ ದಿನ ಮಾತ್ರ ತರಗತಿಗಳನ್ನ ಪ್ರಾರಂಭ ಮಾಡಬೇಕು ಶೇ. 2 ಒಳಗೆ ಕೊರೊನಾ ಕೇಸ್ ಇರೋ ತಾಲೂಕುಗಳಲ್ಲಿ ಮಾತ್ರ LKG-UKG ಪ್ರಾರಂಭ ಮಾಡಬೇಕು. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು. ನಿತ್ಯ ಶಾಲಾ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಬೇಕು ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು‌. 50 ವರ್ಷ ಮೇಲ್ಪಟ್ಟವರು ಫೇಸ್ ಶೀಲ್ಡ್ ಧರಿಸಬೇಕು ಎಂದು ತಿಳಿಸಿದೆ.

ಕೊರೋನಾ ನಿಯಂಯತ್ರಣ ; ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಹುತೇಕ ತಾಲೂಕುಗಳಲ್ಲಿ ಸೋಂಕಿನ ಪ್ರಮಾಣ ಶೇ. 2ಕ್ಕಿಂತ ಕಡಿಮೆ ಇದೆ. ಭಾಋತದ ಅತಿದೊಡ್ಡ ಲಸಿಕಾ ಅಭಿಯಾನ ಯಶಸ್ವಿಯಾಗಿದ್ದೂ ನೂರು ಕೋಟಿ ಜನರಿಗೆ ನೀಡಿದ್ದ ದಿನ ಪ್ರಧಾನಿ ಮೋದಿ ಎಲ್ಲರನ್ನು ಅಭಿನಂದಿಸಿದ್ದರು.

ಜಿಮ್ ಮತ್ತು ಸಿನಿಮಾ ಮಂದಿರಗಳಿಗೂ ಒಂದು ತಿಂಗಳ ಹಿಂದೆ ಅವಕಾಶ ನೀಡಲಾಗಿತ್ತು. ಹಂತ ಹಂತವಾಗಿ ಎಲ್ಲವನ್ನು ಓಪನ್ ಮಾಡಿಕೊಂಡು ಬರಲಾಗಿದ್ದು ಸುಮಾರು ಎರಡು ವರ್ಷಗಳ ನಂತರ ಕೊರೋನಾ ಮುಕ್ತ ವಾತಾವರಣ ಕಂಡುಬರುತ್ತಿದೆ.