ಬೆಂಗಳೂರು (ಸೆ.15):  ಸೋಮವಾರ ರಾಜ್ಯದಲ್ಲಿ 8,244 ಕೊರೋನಾ ಸೋಂಕಿನ ಪ್ರಕರಣಗಳು ದೃಢವಾಗಿವೆ. ಭಾನುವಾರ ಕಡಿಮೆ ಸಂಖ್ಯೆಯ ಕೊರೋನಾ ಪರೀಕ್ಷೆ ನಡೆದಿರುವ ಹಿನ್ನೆಲೆಯಲ್ಲಿ ಸತತ ಐದು ದಿನದ ಬಳಿಕ 9,000 ಕ್ಕಿಂತ ಕಡಿಮೆ ದಾಖಲಾಗಿವೆ. ಇದೇ ವೇಳೆ ಸೋಮವಾರ 119 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಇದೀಗ 98,463 ಕೊರೋನಾದ ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಎರಡನೇ ರಾಜ್ಯವಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 4.67 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಸೋಮವಾರ ಕೇವಲ 45,961 ಕೊರೋನಾ ಪರೀಕ್ಷೆಗಳನ್ನು ಮಾತ್ರ ನಡೆಸಲಾಗಿತ್ತು.

ಸೋಮವಾರ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು ... 

ರಾಜ್ಯದಲ್ಲಿ ಸೋಮವಾರ ಹೊಸ ಸೋಂಕಿಗಿಂತಲೂ ಕೊರೋನಾದಿಂದ ಮುಕ್ತರಾದವರ ಸಂಖ್ಯೆ ಹೆಚ್ಚಿದೆ. 8,865 ಮಂದಿ ಕೊರೋನಾದಿಂದ ಗುಣಮುಖರಾಗಿದ್ದು ರಾಜ್ಯದಲ್ಲಿ ಕೊರೋನಾ ಜಯಿಸಿದವರ ಸಂಖ್ಯೆ 3.61 ಲಕ್ಷಕ್ಕೆ ಏರಿದೆ. 119 ಮಂದಿ ಕೊರೋನಾ ಪೀಡಿತರು ಮರಣ ಹೊಂದುವುದರೊಂದಿಗೆ ರಾಜ್ಯದಲ್ಲಿ ಕೊರೋನಾ ಬಲಿ ತೆಗೆದುಕೊಂಡವರ ಒಟ್ಟು ಸಂಖ್ಯೆ 7,384ನ್ನು ಮುಟ್ಟಿದೆ. 800 ಮಂದಿ ಕೊರೋನಾ ಸೋಂಕಿತರು ವಿವಿಧ ಕೋವಿಡ್‌ ಅಸ್ಪತ್ರೆಗಳ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವು, ಸೋಂಕು ಬೆಂಗಳೂರಲ್ಲೇ ಅಧಿಕ:  ಬೆಂಗಳೂರು ನಗರದಲ್ಲಿ 37, ಮೈಸೂರು 12, ಧಾರವಾಡ 9, ಬಳ್ಳಾರಿ 7, ತುಮಕೂರು 6, ದಕ್ಷಿಣ ಕನ್ನಡ, ಶಿವಮೊಗ್ಗ ತಲಾ 5, ಬೆಳಗಾವಿ 4, ಬಾಗಲಕೋಟೆ, ಚಿಕ್ಕಮಗಳೂರು, ಕಲಬುರಗಿ, ಕೊಪ್ಪಳ, ರಾಯಚೂರು ತಲಾ 3, ವಿಜಯಪುರ, ಉತ್ತರ ಕನ್ನಡ, ಹಾವೇರಿ, ಗದಗ, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ ತಲಾ 2, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ, ರಾಮ ನಗರದಲ್ಲಿ ತಲಾ 1 ಸಾವು ಕೋವಿಡ್‌ ಕಾರಣದಿಂದ ಸಂಭವಿಸಿದೆ.

ಬೆಂಗಳೂರು ನಗರದಲ್ಲಿ 2,966, ಮೈಸೂರು 677, ದಕ್ಷಿಣ ಕನ್ನಡ 413, ದಾವಣಗೆರೆ 325, ಹಾಸನ 295, ಬೆಂಗಳೂರು ಗ್ರಾಮಾಂತರ 275, ಬಳ್ಳಾರಿ 264, ಶಿವಮೊಗ್ಗ 220, ಹಾವೇರಿ 208, ಚಿಕ್ಕಮಗಳೂರು 200, ಚಿತ್ರದುರ್ಗ 198, ತುಮಕೂರು 192, ಕಲಬುರಗಿ 185, ಉತ್ತರ ಕನ್ನಡ 191, ವಿಜಯಪುರ 176, ಬಾಗಲಕೋಟೆ 166, ಕೊಪ್ಪಳ 162, ಚಿಕ್ಕಬಳ್ಳಾಪುರ 140, ಧಾರವಾಡ 117, ರಾಮ ನಗರ 113, ಮಂಡ್ಯ 109, ಯಾದಗಿರಿ 104, ಗದಗ 96, ಕೋಲಾರ 57, ಚಾಮರಾಜ ನಗರ 54, ಬೀದರ್‌ ಮತ್ತು ರಾಯಚೂರು 51, ಉಡುಪಿ 40 ಮತ್ತು ಕೊಡಗಿನಲ್ಲಿ 32 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ.