Asianet Suvarna News Asianet Suvarna News

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಭಾರೀ ಏರಿಕೆ : ಶತಕ ದಾಟಿದ ಸಾವು

ರಾಜ್ಯದಲ್ಲಿ ಮಹಾಮಾರಿ ಭಾರಿ ಏರಿಕೆಯಾಗುತ್ತಿದೆ. ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.  ಇದೀಗ ರಾಜ್ಯದಲ್ಲಿ ಕೊರೋನಾ ತನ್ನ ಅಟ್ಟಹಾಸ ಮೆರೆಯಲು ಆರಂಭಿಸಿದೆ. 

Corona Positive Cases And Death toll  Raises in Karnataka snr
Author
Bengaluru, First Published Apr 21, 2021, 7:53 AM IST

ಬೆಂಗಳೂರು (ಏ.21):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿನ ಪ್ರಕರಣಗಳು ತಲ್ಲಣ ಹುಟ್ಟಿಸುವ ರೀತಿಯಲ್ಲಿ ಮೊದಲ ಬಾರಿಗೆ 20 ಸಾವಿರದ ಗಡಿ ದಾಟಿವೆ. ಮಂಗಳವಾರ ಸಾರ್ವಕಾಲಿಕ ಗರಿಷ್ಠ 21,794 ಪ್ರಕರಣ ವರದಿಯಾಗಿವೆ. 149 ಮಂದಿ ಮರಣವನ್ನಪ್ಪಿದ್ದು, ದಿನವೊಂದರಲ್ಲಿ ದಾಖಲಾದ ಎರಡನೇ ಗರಿಷ್ಠ ಪ್ರಮಾಣದ ಸಾವು ಇದಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1.59 ಲಕ್ಷಕ್ಕೆ ಏರಿಕೆ ಆಗಿದೆ.

ಏ.18ರಂದು 19,067 ಮಂದಿಯಲ್ಲಿ ಸೋಂಕು ದೃಢಪಟ್ಟು ನಿರ್ಮಾಣವಾಗಿದ್ದ ದಾಖಲೆ ಎರಡೇ ದಿನದಲ್ಲಿ ಧೂಳಿಪಟವಾಗಿದೆ. ಬೆಂಗಳೂರು ನಗರವೊಂದರಲ್ಲೇ 13,782 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ತುಮಕೂರು ಜಿಲ್ಲೆಯಲ್ಲಿ 1,055 ಪ್ರಕರಣ ದಾಖಲಾಗಿದೆ.

2020ರ ಸೆಪ್ಟೆಂಬರ್‌ 18 ರಂದು 179 ಮಂದಿ ಅಸುನೀಗಿದ್ದ ಬಳಿಕದ ಗರಿಷ್ಠ ಸಾವು ಮಂಗಳವಾರ ದಾಖಲಾಗಿದೆ. ಕಳೆದ ಎರಡು ದಿನದಲ್ಲೇ ರಾಜ್ಯದಲ್ಲಿ 295 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಹೊಸ ರೂಲ್ಸ್ ಜಾರಿ; ಏನಿರುತ್ತೆ? ಏನಿರಲ್ಲ? ಸಂಪೂರ್ಣ ವಿವರ ಇಲ್ಲಿದೆ ...

ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿರುವವರ ಸಂಖ್ಯೆ 751ಕ್ಕೆ ಏರಿಕೆ ಕಂಡಿದೆ. ಇದೇ ವೇಳೆ ದಾಖಲೆಯ 1.47 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ.14.77ರ ಪಾಸಿಟಿವಿಟಿ ದರ ದಾಖಲಾಗಿದೆ. 4,571 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲಿ 92 ಮಂದಿ ಮರಣವನ್ನಪ್ಪಿದ್ದಾರೆ. ಸೋಮವಾರ 97 ಮಂದಿ ಮೃತರಾಗಿದ್ದರು. ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಕಡಿಮೆ ಆದರೂ ರಾಜ್ಯದ ಒಟ್ಟು ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 13, ಕಲಬುರಗಿ ಮತ್ತು ಬೀದರ್‌ ತಲಾ 7, ಬಳ್ಳಾರಿ 5, ಮೈಸೂರು, ತುಮಕೂರು, ಧಾರವಾಡ ತಲಾ 4, ಶಿವಮೊಗ್ಗ, ಮಂಡ್ಯ ತಲಾ 2, ಯಾದಗಿರಿ, ಉಡುಪಿ, ರಾಯಚೂರು, ರಾಮನಗರ, ಕೊಡಗು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಸೋಂಕಿನಿಂದ ಮರಣವನ್ನಪ್ಪಿದ್ದಾರೆ.

ಹೆಚ್ಚಾದ ಪ್ರಕರಣ:  ಕಲಬುರಗಿ 818, ಮೈಸೂರು 699, ಬೆಂಗಳೂರು ಗ್ರಾಮಾಂತರ 513, ದಕ್ಷಿಣ ಕನ್ನಡ 482, ಮಂಡ್ಯ 413, ಹಾಸನ 410, ಬಳ್ಳಾರಿ 406, ಬೀದರ್‌ 151, ಬಾಗಲಕೋಟೆ 125, ಬೆಳಗಾವಿ 186, ಚಿಕ್ಕಬಳ್ಳಾಪುರ 217, ಚಿಕ್ಕಮಗಳೂರು 115, ಚಿತ್ರದುರ್ಗ 121,ದಾವಣಗೆರೆ 136, ಧಾರವಾಡ 288, ಕೋಲಾರ 284, ಕೊಪ್ಪಳ 103, ರಾಯಚೂರು 243, ಶಿವಮೊಗ್ಗ 212, ರಾಮನಗರ 114, ಉಡುಪಿ 109, ಉತ್ತರ ಕನ್ನಡ 106, ವಿಜಯಪುರ 358 ಪ್ರಕರಣ ವರದಿಯಾಗಿದೆ. ರಾಜ್ಯದ ಚಾಮರಾಜನಗರ, ಗದಗ, ಹಾವೇರಿ, ಕೊಡಗು ಮತ್ತು ಯಾದಗಿರಿಯಲ್ಲಿ ನೂರಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿವೆ.

ಲಸಿಕೆ ಅಭಿಯಾನ:  ಮಂಗಳವಾರ 4,411 ಲಸಿಕಾ ಕೇಂದ್ರದಲ್ಲಿ 72,706 ಮಂದಿ ಲಸಿಕೆ ಪಡೆದಿದ್ದಾರೆ. ಈ ಪೈಕಿ ಯಾರಲ್ಲಿಯೂ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ರಾಜ್ಯದಲ್ಲಿ ಈವರೆಗೆ 72.98 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. 44 ವರ್ಷದಿಂದ 59 ವರ್ಷದೊಳಗಿನ 38 ಸಾವಿರ ಮಂದಿ, 60 ವರ್ಷ ಮೇಲ್ಪಟ್ಟ32 ಸಾವಿರ ಮಂದಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 2,400 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

Follow Us:
Download App:
  • android
  • ios