ಬೆಂಗಳೂರು, (ಮೇ.13): ಲಾಕ್‌ಡೌನ್‌ ಬಳಿಕ ದೇಗುಲಗಳನ್ನು ತೆರೆಯುವಂತೆ ಭಕ್ತರು ಮತ್ತು ಅರ್ಚಕರು ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿ ಮುಜರಾಯಿ ಇಲಾಖೆ ಅಗತ್ಯ ಮುಂಜಾಗ್ರತಾ ಕಾರ್ಯವಿಧಾನಗಳನ್ನು ಸಿದ್ಧಪಡಿಸುತ್ತಿದೆ. 

ಲಾಕ್‌ಡೌನ್‌ ಬಳಿಕ ದೇವಾಲಯಗಳಲ್ಲಿ ಸ್ಯಾನಿಟೈಸರ್‌ ನೀಡುವುದು ಹಾಗೂ ಸಾಮಾಜಿಕ ಅಂತರ ಕಡ್ಡಾಯ ಎನ್ನಲಾಗಿದೆ. ತೀರ್ಥ ಮತ್ತು ಪ್ರಸಾದ ವಿತರಣೆಗೆ ಅವಕಾಶ ಇರುವುದಿಲ್ಲ ಎಂಬುದನ್ನು ಮೂಲಗಳು ತಿಳಿಸಿವೆ.

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ, ತೆರೆಯಲಿದೆ ದೇವಾಲಯದ ಬಾಗಿಲು!

34 ಸಾವಿರಕ್ಕೂ ಹೆಚ್ಚು ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಈ ಎಲ್ಲಾ ದೇವಸ್ಥಾನಗಳಲ್ಲಿ ಅರ್ಚಕರು, ಭಕ್ತರ ಸಂಖ್ಯೆಗೆ ಮಿತಿ ಹಾಕಲು ಸಹ ಚರ್ಚೆಗಳು ನಡೆದಿವೆ. 

ಇನ್ನು ಭಕ್ತರು ದೇಗುಲಗಳಿಗೆ ಹಣ್ಣು, ಹೂ, ತೆಂಗಿನ ಕಾಯಿ ತರದಂತೆ ನಿರ್ಬಂಧ ವಿಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ವಾರಾಂತ್ಯದ ಹೊತ್ತಿಗೆ ದೇವಸ್ಥಾನಗಳಿಗೆ ಈ ಎಲ್ಲಾ ಹೊಸ ರೂಲ್ಸ್ ಫೈನಲ್ ಆಗುವ ಸಾಧ್ಯತೆಗಳಿವೆ.

ಲಾಕ್‌ಡೌನ್‌ ಸಮಯದಲ್ಲೂ ಕೆಲವು ದೇವಾಲಯಗಳಲ್ಲಿ ದೈನಂದಿನ ಪೂಜೆ ಪುನಸ್ಕಾರಗಳು ನಡೆದಿವೆ. ಕೋವಿಡ್‌ ಹರಡುವ ಭೀತಿಯಿಂದಾಗಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.