* ಶನಿವಾರ ರಾಜ್ಯದಲ್ಲಿ ಸಾರ್ವಕಾಲಿಕ ಶೇ.35 ಪಾಸಿಟಿವಿಟಿ ದರ* ಒಂದೇ 41664 ಕೇಸ್‌, 6 ಲಕ್ಷ ದಾಟಿದ ಸಕ್ರಿಯ ಸೋಂಕಿತರು* ಬೆಂಗಳೂರಲ್ಲಿ 13402, ರಾಜ್ಯದ ಇತರ ಭಾಗಗಳಲ್ಲಿ 28,262 ಮಂದಿಗೆ ಸೋಂಕು 

ಬೆಂಗಳೂರು(ಮೇ.16): ಶನಿವಾರವೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಕೆಯಾಗಿ, ರಾಜ್ಯದ ಉಳಿದ ಕಡೆ ಏರುತ್ತಿರುವ ಟ್ರೆಂಡ್‌ ಮುಂದುವರಿದಿದೆ. ಹಾಗೆಯೇ ಸಾರ್ವಕಾಲಿಕ ದಾಖಲೆಯ ಶೇ. 35.20 ಪಾಸಿಟಿವಿಟಿ ದರ ವರದಿಯಾಗಿದೆ. ಮೇ. 11 ರಂದು ಶೇ. 33.99 ಪಾಸಿಟಿವಿಟಿ ದರ ದಾಖಲಾಗಿದ್ದು ಈವರೆಗಿನ ದಾಖಲೆಯಾಗಿದೆ.

ಶನಿವಾರ ರಾಜ್ಯದಲ್ಲಿ 41,664 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು 349 ಮಂದಿ ಮೃತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷದ ಗಡಿ ದಾಟಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ 13,402 ಮಂದಿಯಲ್ಲಿ ಹಾಗೂ ರಾಜ್ಯದ ಇತರ ಭಾಗಗಳಲ್ಲಿ 28,262 ಪ್ರಕರಣ ದಾಖಲಾಗಿದೆ. ಅದೇ ರೀತಿ ಬೆಂಗಳೂರು ನಗರದಲ್ಲಿ 94 ಮಂದಿ ಹಾಗೂ ರಾಜ್ಯದ ಅನ್ಯ ಭಾಗದಲ್ಲಿ 255 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 11 ಜಿಲ್ಲೆಗಳಲ್ಲಿ 10ಕ್ಕಿಂತ ಹೆಚ್ಚು ಸಾವು ದಾಖಲಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 6.05 ಲಕ್ಷಕ್ಕೆ ಏರಿಕೆ ಆಗಿದೆ. 34,425 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 2.77 ಕೋಟಿ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ ಒಟ್ಟು 15.44 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ರಾಜ್ಯದೆಲ್ಲೆಡೆ ಸೋಂಕಿನ ಪ್ರಮಾಣ ಏರುತ್ತಿದ್ದರೂ ಕೋವಿಡ್‌ ಪರೀಕ್ಷೆ ನಡೆಸಲು ಸರ್ಕಾರ ಉತ್ಸಾಹ ತೋರುತ್ತಿಲ್ಲ. ಶನಿವಾರ 1.18 ಲಕ್ಷ ಪರೀಕ್ಷೆ ನಡೆದಿದೆ.

"

ಕೊರೋನಾ ಸೋಂಕಿತರ ಜೀವ ರಕ್ಷಣೆಯೇ ದೊಡ್ಡ ತಲೆನೋವು

ಸಾವಿನ ವಿವರ: 

ಬಳ್ಳಾರಿ 28, ಕಲಬುರಗಿ 21, ತುಮಕೂರು 18, ಶಿವಮೊಗ್ಗ ಮತ್ತು ಮೈಸೂರು ತಲಾ 15, ಬಾಗಲಕೋಟೆ 14,ಹಾಸನ 11, ಕೊಪ್ಪಳ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ 10 ಮಂದಿ ಮೃತರಾಗಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ 2,489 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಹಾಸನ 2,443, ತುಮಕೂರು 2,302, ದಕ್ಷಿಣ ಕನ್ನಡ 1,787, ಬಳ್ಳಾರಿ 1,622, ಬೆಳಗಾವಿ 1502, ಬೆಂಗಳೂರು ಗ್ರಾಮಾಂತರ 1,265, ಉತ್ತರ ಕನ್ನಡ 1,226, ಮಂಡ್ಯ 1,188, ಉಡುಪಿ 1,146, ಚಿಕ್ಕಮಗಳೂರು 1,093 ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 1,081 ಜನರಲ್ಲಿ ಸೋಂಕು ದೃಢಪಟ್ಟಿದೆ.

ಲಸಿಕೆ ಹಾಕಿಸಿಕೊಂಡ 82 ಸಾವಿರ ಮಂದಿ

ರಾಜ್ಯದಲ್ಲಿ ಶನಿವಾರ 82,793 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಈ ಪೈಕಿ 69,587 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. 13,206 ಮಂದಿ ಮೊದಲ ಡೋಸ್‌ ಸ್ವೀಕರಿಸಿದ್ದಾರೆ. 45 ವರ್ಷ ಮೇಲ್ಪಟ್ಟ64,893 ಮಂದಿ, ಮುಂಚೂಣಿ ಕಾರ್ಯಕರ್ತರು 2,469, ಆರೋಗ್ಯ ಕಾರ್ಯಕರ್ತರು 2,225 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು 699, ಮುಂಚೂಣಿ ಕಾರ್ಯಕರ್ತರು 2,154, 18-44 ವರ್ಷದೊಳಗಿನ 4,309, 45 ವರ್ಷ ಮೇಲ್ಪಟ್ಟ 6,044 ಮಂದಿ ಮೊದಲ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona