ಬೆಂಗಳೂರು (ಅ.02): ರಾಜ್ಯದಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚುವ ಪರೀಕ್ಷೆಯಲ್ಲಿ ಏರಿಕೆಯೊಂದಿಗೆ ಸೋಂಕಿತರ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಗುರುವಾರ 96,588 ಜನರ ಪರೀಕ್ಷೆ ಮಾಡಿದ್ದು 10,070 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 130 ಮಂದಿ ಮೃತಪಟ್ಟಿದ್ದಾರೆ. 7,144 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸೆಪ್ಟೆಂಬರ್‌ 29 ರಂದು 10,453 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಈವರೆಗಿನ ದಾಖಲೆಯಾಗಿದೆ. ಈವರೆಗೆ ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ 4,92,412 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಕೊರೋನಾ ಪರೀಕ್ಷೆಗಳ ಸಂಖ್ಯೆ 49,97,671 ತಲುಪಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6.11 ಲಕ್ಷ ಮುಟ್ಟಿದೆ. ರಾಜ್ಯದಲ್ಲಿ 1.10 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು ಇವರಲ್ಲಿ 811 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಚ್ಚೆತ್ತುಕೊಳ್ಳದ ಜನತೆ: ಮಾರ್ಷಲ್‌ಗಳ ಜತೆ ಮಾಸ್ಕ್‌ ಧರಿಸದವರ ಜಗಳ..! .

ಬೆಂಗಳೂರು ನಗರ ಜಿಲ್ಲೆಯಲ್ಲಿ 41 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು 25, ದಕ್ಷಿಣ ಕನ್ನಡ 11, ತುಮಕೂರು 8, ಕೋಲಾರ ಮತ್ತು ಕೊಪ್ಪಳ ತಲಾ 5, ಶಿವಮೊಗ್ಗ ಮತ್ತು ಕೊಡಗು ತಲಾ 4, ಹಾಸನ ಮತ್ತು ಉಡುಪಿ ತಲಾ 3, ಯಾದಗಿರಿ, ಮಂಡ್ಯ, ಬೀದರ್‌ ಮತ್ತು ಬಳ್ಳಾರಿಯಲ್ಲಿ ತಲಾ 2, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾವೇರಿ, ರಾಯಚೂರು, ರಾಮನಗರ, ವಿಜಯಪುರದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 4,853 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಉಳಿದಂತೆ ದಕ್ಷಿಣ ಕನ್ನಡ 493, ಬಳ್ಳಾರಿ 486, ಹಾಸನ 383, ಬಾಗಲಕೋಟೆ 336, ಉಡುಪಿ 275, ತುಮಕೂರು 274, ಮಂಡ್ಯ 266, ವಿಜಯಪುರ 257, ಕಲಬುರಗಿ 219, ಚಿಕ್ಕಮಗಳೂರು 184, ಬೆಂಗಳೂರು ಗ್ರಾಮಾಂತರ 169, ಯಾದಗಿರಿ 159, ಹಾವೇರಿ 155, ಧಾರವಾಡ 153, ದಾವಣಗೆರೆ 148, ಗದಗ 146, ಶಿವಮೊಗ್ಗ 138, ಚಾಮರಾಜನಗರ 116, ಬೆಳಗಾವಿ 115, ಕೊಪ್ಪಳ 103, ಮೈಸೂರು 101, ಉತ್ತರ ಕನ್ನಡ 87, ಚಿತ್ರದುರ್ಗ 82, ರಾಯಚೂರು 79, ರಾಮನಗರ 74, ಬೀದರ್‌ 64, ಕೊಡಗು 58, ಕೊಪ್ಪಳ 53 ಹಾಗೂ ಚಿಕ್ಕಬಳ್ಳಾಪುರದಲ್ಲಿ 44 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.