ಬೆಂಗಳೂರು(ಮಾ.15): ಜ್ಯದಲ್ಲಿ ಮತ್ತೆ ಲಾಕ್‌ಡೌನ್‌, ಕಫä್ರ್ಯ ಜಾರಿ ಆಗಬಾರದು ಎಂದರೆ ಜನತೆ ಸ್ವಯಂಪ್ರೇರಿತವಾಗಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ತನ್ಮೂಲಕ ಜನರು ಮೈಮರೆತು ಮತ್ತೆ ಕೋವಿಡ್‌ ಸೋಂಕು ಮಿತಿಮೀರಿದರೆ ನೈಟ್‌ ಕಫä್ರ್ಯ, ಲಾಕ್‌ಡಾನ್‌ ಜಾರಿ ಅನಿವಾರ್ಯವಾಗಬಹುದು ಎಂಬ ಮುನ್ಸೂಚನೆಯನ್ನೂ ಮುಖ್ಯಮಂತ್ರಿಗಳು ನೀಡಿದಂತಾಗಿದೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಕೈಮೀರಿ ಹೋಗುತ್ತಿದೆ. ಕಳೆದ ಕೆಲ ದಿನಗಳಿಂದ ಹೆಚ್ಚುತ್ತಲೇ ಇದೆ. ಸದ್ಯಕ್ಕೆ ಲಾಕ್‌ಡೌನ್‌ ಬಗ್ಗೆ ಚಿಂತನೆ ಇಲ್ಲ. ಲಾಕ್‌ಡೌನ್‌ಗೆ ಅವಕಾಶವಾಗದಂತೆ ಜನ ಸಹರಿಸಬೇಕು. ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಆಗಬಾರದು, ಕಫä್ರ್ಯ ಜಾರಿ ಮಾಡಬಾರದು ಅಂತಿದ್ದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಎಲ್ಲೆಡೆ ಮಾÓ್ಕ… ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಗ ಮಾತ್ರ ಲಾಕ್‌ಡೌನ್‌ ಇಲ್ಲದೆ ಕೋವಿಡ್‌ ನಿಯಂತ್ರಣ ಮಾಡಬಹುದು ಎಂದರು.

"

ಮಹಾರಾಷ್ಟ್ರದಲ್ಲೂ ಸೋಂಕು ಹೆಚ್ಚಾಗುತ್ತಿದೆ. ಹಾಗಾಗಿ ಗಡಿ ಪ್ರದೇಶಗಳಲ್ಲಿ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಸೋಮವಾರ ಈ ಬಗ್ಗೆ ಸಭೆ ಕರೆದಿದ್ದು, ಮಹತ್ವದ ಚರ್ಚೆ ಆಗಲಿದೆ. ಈಗಾಗಲೇ ಸಾಕಷ್ಟುನಷ್ಟಆಗಿದೆ. ಹಾಗಾಗಿ ಮತ್ತೆ ಲಾಕ್‌ಡೌನ್‌ ಬಗ್ಗೆ ಸದ್ಯ ಯಾವುದೇ ಚಿಂತನೆ ಇಲ್ಲ. ಲಾಕ್‌ಡೌನ್‌ಗೆ ಅವಕಾಶ ಆಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.