Asianet Suvarna News Asianet Suvarna News

ವಿವಾದ ಎಬ್ಬಿಸಿದ ರಾಜ್ಯೋತ್ಸವ ಅವಾರ್ಡ್, ತಮ್ಮ ಒಡೆತನದ ಸಂಸ್ಥೆಗೆ ಪ್ರಶಸ್ತಿ?

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ/ ಮೊದಲ ಸಾರಿ ಕೇಳಿ ಬಂದ ಅಪಸ್ವರ/ ತಮ್ಮದೇ ಸಂಸ್ಥೆಗೆ ಪ್ರಶಸ್ತಿ ನೀಡಿಕೊಂಡಿದ್ದಾರೆ ಎಂಬ ಆರೋಪ/ 

Controversy Cropped up for Rajyotsava award to Prabhat Art International Belongs to Nirupama Rajendras
Author
Bengaluru, First Published Oct 28, 2019, 7:14 PM IST

ಬೆಂಗಳೂರು(ಅ. 28)   ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಗಣ್ಯರಿಗೆ ಈ ಸಾಲಿನ ಅಂದರೆ 64ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಕಲೆ (ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ), ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ನಾನಾ ಕ್ಷೇತ್ರದ ಸಾಧಕರಿಗೆ ಗೌರವ ಸಂದಿದೆ. ಆದರೆ ಇದೆಲ್ಲದರ ನಡುವೆ ಅಪಸ್ವರವೊಂದು ಎದ್ದಿದೆ.

ರಾಜ್ಯೋತ್ಸವ ಪ್ರಶಸ್ತಿ ಸಮಿತಿಯಲ್ಲಿ ಡಾ. ನಿರುಪಮಾ ರಾಜೇಂದ್ರ ಇದ್ದರು. ಅವರು ಒಡೆತನದಲ್ಲಿ ಇತ್ತು ಎನ್ನಲಾದ ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್ ಸಂಸ್ಥೆಗೂ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದು ಪ್ರಶ್ನೆ ಏಳುವಂತೆ ಮಾಡಿದೆ.

64 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ಇಲ್ಲಿದೆ ಪೂರ್ಣ ಪಟ್ಟಿ

ನೃತ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ  ನಿರುಪಮಾ ಅವರನ್ನು ರಾಜ್ಯ ಸರ್ಕಾರ ನೃತ್ಯ ಕಲಾ ಅಕಾಡೆಮಿ ಸದಸ್ಯೆಯನ್ನಾಗಿ ನೇಮಕ ಮಾಡಿ ಕೆಲ ದಿನಗಳ ಹಿಂದೆ ಆದೇಶ ನೀಡಿತ್ತು

ಒಟ್ಟಿನಲ್ಲಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ 1600ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಹಿರಿಯ ನಟಿ ತಾರಾ, ನಿರ್ದೇಶಕ ನಾಗಾಭರಣ ಸೇರಿದಂತೆ ಅನೇಕರನ್ನು ಒಳಗೊಂಡಿದ್ದ ನ17 ಜನರ ಸಮಿತಿ ಅಂತಿಮವಾಗಿ 64 ಸಾಧಕರಿಗೆ ಪ್ರಶಸ್ತಿ ಪಟ್ಟಿ ಪ್ರಕಟ ಮಾಡಿತ್ತು.

Follow Us:
Download App:
  • android
  • ios