ಗ್ಯಾರಂಟಿ ಸ್ಕೀಂ ಬಗ್ಗೆ ತಲೆ ಕೆಡಿಸಿಕೊಂಡಿರೊ ಸರ್ಕಾರಕ್ಕೆ ಬೆಂಗಳೂರು ಗುತ್ತಿಗೆದಾರ ಸಂಘದಿಂದ ಮತ್ತೊಂದು ಶಾಕ್!

ಕಾಮಗಾರಿಯ ಬಾಕಿ ಬಿಲ್‌ ಪಾವತಿ ಮಾಡದಿದ್ದರೆ, ಜೂನ್‌ 5ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

Contractors association deadline to BBMP to pay outstanding bills for works at bengaluru rav

ಬೆಂಗಳೂರು (ಜೂ.1) : ಕಾಮಗಾರಿಯ ಬಾಕಿ ಬಿಲ್‌ ಪಾವತಿ ಮಾಡದಿದ್ದರೆ, ಜೂನ್‌ 5ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಫ್ರೀಂ ಸ್ಕೀಂ ಬಗ್ಗೆ ತಲೆ ಕೆಡಿಸಿಕೊಂಡಿರೊ ಸರ್ಕಾರಕ್ಕೆ ಗುತ್ತಿಗೆದಾರರ ಡೆಡ್‌ಲೈನ್‌ನಿಂದ ಮತ್ತೊಂದು ತಲೆನೋವು ಶುರುವಾಗಿದೆ. ಸರ್ಕಾರ ಉಚಿತ ಯೋಜನೆ ಘೋಷಣೆ ಮಾಡಿರುವುದರಿಂದ ಕಾಮಗಾರಿ ಬಾಕಿ ಬಿಲ್ ಕ್ಲೀಯರ್ ಆಗುತ್ತಾ ಇಲ್ವಾ ಅನ್ನೋ ಆತಂಕದಲ್ಲಿ ಗುತ್ತಿಗೆದಾರರ ಸಂಘ. ಕಾಮಗಾರಿ ಬಿಲ್ ಪಾವತಿಗೆ ಮತ್ತಷ್ಟು ವಿಳಂಬವಾಗುವ ಸಾದ್ಯತೆ ಹಿನ್ನೆಲೆ ಬೆಂಗಳೂರು ಗುತ್ತಿಗೆದಾರರ ಸಂಘದಿಂದ ಬಿಬಿಎಂಪಿಗೆ ಡೆಡ್ ಲೈನ್ ಕೊಟ್ಟಿದೆ. ಒಂದು ವೇಳೆ ಪಾವತಿಸದಿದ್ರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ಕಾಮಗಾರಿ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಅತ್ತೆ, ಸೊಸೆ ಇಬ್ಬರಿಗೂ ಗೃಹಲಕ್ಷ್ಮಿ ಯೋಜನೆ ಕೊಡುವಂತೆ ಒತ್ತಾಯ!

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತರೊಂದಿಗೆ ಸಭೆ ನಡೆಸಿ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ ಗುತ್ತಿಗೆದಾರರು, ಜೂನ್‌ 5ರೊಳಗಾಗಿ ಬಾಕಿ ಬಿಲ್‌ ಪಾವತಿಸದಿದ್ದರೆ, ರಾಜಕಾಲುವೆಯ ಹೂಳು ತೆಗೆಯುವುದು ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಜಿ.ಎಂ.ರವೀಂದ್ರ, 2021ರ ಮೇ ವೇಳೆಗೆ ಬಿಬಿಎಂಪಿ ಅನುದಾನದಲ್ಲಿ ಕೈಗೊಂಡು ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್‌ ಪಾವತಿ ಮಾಡಿಲ್ಲ. ಬಿಲ್‌ಗಾಗಿ 24 ತಿಂಗಳು ಕಾಯಬೇಕಾದ ಸ್ಥಿತಿ ಇದೆ. ಇದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೂಡಲೇ ಕನಿಷ್ಠ ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಂಡ ಕಾಮಗಾರಿಯ (2021 ಮೇನಿಂದ 2021ರ ಸೆಪ್ಟಂಬರ್‌) ಬಾಕಿ ಬಿಲ್ಲನ್ನು ಒಟ್ಟಿಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಸರ್ಕಾರಿ ಅನುದಾನ ಬಿಲ್‌ ಪಾವತಿಗೆ ತಡೆ:

ಕಳೆದ ಎರಡು ವರ್ಷದ ಸುಮಾರು ಎರಡು ಸಾವಿರ ಕೋಟಿ ಬಿಲ್ ತಡೆಯಾಗಿದೆ. ಸದ್ಯ ಪಾಲಿಕೆ 2400 ಕೋಟಿಗೂ ಅಧಿಕ ಬಿಲ್ ಪಾವತಿ ಕ್ಲೀಯರ್ ಮಾಡಬೇಕಿದೆ.  ರಾಜ್ಯ ಸರ್ಕಾರದ ವಿವಿಧ ಯೋಜನೆಯ ಅನುದಾನದಲ್ಲಿ ಕೈಗೊಳ್ಳಲಾದ ಕಾಮಗಾರಿಯ ಬಿಲ್ಲನ್ನು ತಡೆ ಹಿಡಿಯಲಾಗಿದೆ. ಕಳೆದ ಮೇ 6ರಂದು ಸರ್ಕಾರದಿಂದ ಬಿಬಿಎಂಪಿಗೆ ₹675 ಕೋಟಿ ಬಿಡುಗಡೆ ಆಗಿದೆ. ಆದರೆ, ಈ ಹಣವನ್ನು ಗುತ್ತಿಗೆದಾರರಿಗೆ ನೀಡದೇ ತಡೆ ಹಿಡಿಯಲಾಗಿದೆ ಇದೀಗ ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆ ಘೋಷಿಸಿರುವುದರಿಂದ ಬಾಕಿ ಹಣ ಪವಾತಿಗೆ ವಿಳಂಬವಾಗುವ ಆತಂಕದಲ್ಲಿರುವ ಗುತ್ತಿಗೆದಾರರು.

ಸರ್ಕಾರ ಹಂತದಲ್ಲಿ ಚರ್ಚೆ: ತುಷಾರ್‌

ಗುತ್ತಿಗೆದಾರರು ಬಾಕಿ ಬಿಲ್‌ ಪಾವತಿಗೆ ಮನವಿ ಸಲ್ಲಿಸಿದ್ದಾರೆ. ಬಿಲ್‌ ಪಾವತಿ ಕುರಿತು ಸರ್ಕಾರದ ಹಂತದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಸರ್ಕಾರ ಅನುಮತಿ ನೀಡಿದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. ಇನ್ನು ಕಾಮಗಾರಿ ನಿಲ್ಲಿಸುವ ಬಗ್ಗೆ ಗುತ್ತಿಗೆದಾರರು ಮನವಿ ಪತ್ರದಲ್ಲಿ ತಿಳಿಸಿಲ್ಲ. ಗುತ್ತಿಗೆದಾರರೊಂದಿಗೆ ಚರ್ಚೆ ನಡೆಸಿ ಕಾಮಗಾರಿ ಮುಂದುವರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸ್ಪಷ್ಟಪಡಿಸಿದ್ದಾರೆ.

Latest Videos
Follow Us:
Download App:
  • android
  • ios