Asianet Suvarna News Asianet Suvarna News

ಬಿಬಿಎಂಪಿ ವ್ಯಾಪ್ತಿಯ ಪಬ್, ಬಾರ್ ಪರಿಶೀಲನೆ; ನಿಯಮ ಪಾಲಿಸದ 5 ಉದ್ದಿಮೆಗಳಿಗೆ ಬೀಗ

ನಗರದಲ್ಲಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆಯನ್ನು ಮುಂದುವರೆಸಿರುವ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಪಾಲಿಕೆ ವ್ಯಾಪ್ತಿ ವಲಯವಾರು ಪಬ್, ಬಾರ್ & ರೆಸ್ಟೋರೆಂಟ್ ಗಳಿಗೆ ಸಂಬಂಧಿಸಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ‌ ನೇತೃತ್ವದಲ್ಲಿ ನಿನ್ನೆ ಸಹ ತಪಾಸಣೆ  ನಡೆಸಲಾಗಿದೆ.

Continuation of pub bar review of BBMP coverage at bengaluru rav
Author
First Published Oct 27, 2023, 10:59 AM IST

 

ಬೆಂಗಳೂರು (ಅ.27): ನಗರದಲ್ಲಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆಯನ್ನು ಮುಂದುವರೆಸಿರುವ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಪಾಲಿಕೆ ವ್ಯಾಪ್ತಿ ವಲಯವಾರು ಪಬ್, ಬಾರ್ & ರೆಸ್ಟೋರೆಂಟ್ ಗಳಿಗೆ ಸಂಬಂಧಿಸಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ‌ ನೇತೃತ್ವದಲ್ಲಿ ನಿನ್ನೆ ಸಹ ತಪಾಸಣೆ  ನಡೆಸಲಾಗಿದೆ.

ನ್ಯೂನ್ಯತೆಗಳು ಕಂಡುಬಂದ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಬಂದ್ ಮಾಡಲಾಗಿದೆ. ನಿನ್ನೆ ಪಾಲಿಕೆ ವ್ಯಾಪ್ತಿಯಲ್ಲಿ 167 ಉದ್ದಿಮೆಗಳ ಪರಿಶೀಲನೆ ನಡೆಸಲಾಗಿದೆ. ಈ ಪೈಕಿ 76 ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, 5 ಉದ್ದಿಮೆಗಳು ಮುಚ್ಚಲಾಗಿರುತ್ತದೆ.

ಹೊಸ ವರ್ಷಕ್ಕೆ ಮತ್ತಷ್ಟು ಕಿಕ್, ದೆಹಲಿಯಲ್ಲಿ 24 ಗಂಟೆ ಬಾರ್, ಪಬ್, ರೆಸ್ಟೋರೆಂಟ್ ಒಪನ್!

ಇತ್ತೀಚೆಗೆ ಕೆಫೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಹಿನ್ನೆಲೆಯಲ್ಲಿ ಎಂಟು ವಲಯದ ಆರೋಗ್ಯಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಅಗ್ನಿ ಅವಘಡದ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು.

Follow Us:
Download App:
  • android
  • ios