ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಾಮುಂಡಿಬೆಟ್ಟದಲ್ಲಿ 114 ಕೋಟಿ ರು. ವೆಚ್ಚದಲ್ಲಿ ರೋಪ್‌ ವೇ ನಿರ್ಮಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಘೋಷಿಸಿದರು.

ಮೈಸೂರು (ಮಾ.11): ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಾಮುಂಡಿಬೆಟ್ಟದಲ್ಲಿ 114 ಕೋಟಿ ರು. ವೆಚ್ಚದಲ್ಲಿ ರೋಪ್‌ ವೇ ನಿರ್ಮಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಘೋಷಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೈಗೊಂಡಿರುವ 4000 ಸಾವಿರ ಕೋಟಿ ರು. ವೆಚ್ಚದ 268 ಕಿ.ಮೀ. ಉದ್ದದ 22 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ 5 ಸಾವಿರ ಕೋಟಿ ರು. ವೆಚ್ಚದಲ್ಲಿ ಸೋಲಾರ್‌ ರೋಪ್‌ ವೇ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, ಕಲ್ಕತ್‌ ಗಿರಿ ಬೆಟ್ಟ, ಅಂಜನಾದ್ರಿಬೆಟ್ಟ ಹಾಗೂ ದೇವರಾಯನ ದುರ್ಗದಬೆಟ್ಟದಲ್ಲಿ ರೋಪ್‌ ವೇ ನಿರ್ಮಿಸಲಾಗುತ್ತಿದೆ ಎಂದರು. ಇದರ ಜೊತೆಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ರೋಪ್‌ ವೇ ನಿರ್ಮಿಸಲು ₹114 ಕೋಟಿ ಮಂಜೂರು ಮಾಡುವುದಾಗಿ ಸಚಿವರು ಪ್ರಕಟಿಸಿದರು. ಬೆಂಗಳೂರು- ಮೈಸೂರು ಎಕ್ಷ್‌ಪ್ರೆಸ್ ಹೈವೇಯಲ್ಲಿ ಅಂಡರ್‌ ಪಾಸ್‌, ಎಂಟ್ರಿ ಎಕ್ಸಿಟ್‌ ನಿರ್ಮಾಣಕ್ಕೆ 15 ದಿನಗಳಲ್ಲಿ ಒಪ್ಪಿಗೆ ನೀಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರ್ ಭರವಸೆ ನೀಡಿದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ಸಮಸಮಾಜ ನಿರ್ಮಾಣ: ಸಿಎಂ ಸಿದ್ದರಾಮಯ್ಯ

ಸಂಸದರಾದ ಪ್ರತಾಪ್‌ ಸಿಂಹ ಮತ್ತು ಸುಮಲತಾ ಅಂಬರೀಷ್ ಅವರು ಬೆಂಗಳೂರು- ಮೈಸೂರು ದಶಪಥ ಹೈವೇ ರಸ್ತೆಯಲ್ಲಿ ಅಂಡರ್‌ ಪಾಸ್‌, ಎಂಟ್ರಿ ಎಕ್ಸಿಟ್‌ಗಳ ನಿರ್ಮಾಣಕ್ಕೆ ಮನವಿ ಮಾಡಿದ್ದು, ಈ ಸಂಬಂಧ 15 ದಿನಗಳಲ್ಲಿ ಒಪ್ಪಿಗೆ ನೀಡುವುದಾಗಿ ಅವರು ಹೇಳಿದರು.ಅಲ್ಲದೆ, ಪ್ರತಾಪ್‌ ಸಿಂಹ ಅವರು ಮೈಸೂರಿನ ಪೆರಿಫರಲ್‌ ರಸ್ತೆ ನಿರ್ಮಾಣಕ್ಕೆ ಹಾಗೂ ಎಚ್‌.ಡಿ. ರೇವಣ್ಣ ಅವರು ಹಾಸನ ರಸ್ತೆ ವಿಚಾರವಾಗಿ ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಭೂಸ್ವಾಧೀನ ಮಾಡಿಕೊಡುವ ವಿಚಾರವಾಗಿ ಪತ್ರ ನೀಡಿದರೆ, ಈ ಎರಡು ರಸ್ತೆಗಳನ್ನು ಮಂಜೂರು ಮಾಡುವುದಾಗಿ ಎಂದು ಅವರು ತಿಳಿಸಿದರು.

ಬಿಜೆಪಿ ನಾಯಕರು ಮೋದಿಯಿಂದ ಬರ ಪರಿಹಾರ ಕೊಡಿಸಲಿ: ಡಿ.ಕೆ.ಶಿವಕುಮಾರ್‌

ಕುಶಾಲನಗರ- ಮಾಣಿವರೆಗಿನ 1030 ಕಿ.ಮೀ ರಸ್ತೆ ನಿರ್ಮಾಣಕ್ಕೆ ಡಿಪಿಆರ್‌ ಮಾಡಲು ಆದೇಶ ನೀಡಿದ್ದು, ಶೀಘ್ರವೇ ಈ ಕೆಲಸ ಆರಂಭಿಸಲಾಗುವುದು. ಮೈಸೂರು- ನಂಜನಗೂಡು ನಡುವೆ ಆರು ಪಥದ ರಸ್ತೆಯ ನಿರ್ಮಿಸಲು ಮನವಿ ಮಾಡಿದ್ದು, ಇದಕ್ಕೆ ಶೀಘ್ರವೇ ಡಿಪಿಆರ್‌ ಮಾಡುವಂತೆ ಆದೇಶಿಸುತ್ತೇನೆ. ಈ ಕೆಲಸ ಕೂಡ ಶೀಘ್ರವೇ ಆರಂಭ ಆಗಲಿದೆ ಎಂಬ ಭರವಸೆ ನೀಡುತ್ತೇನೆ ಎಂದು ಹೇಳಿದರು. ಹೊಸದಾಗಿ 514 ಗ್ರೀನ್‌ ಫೀಲ್ಡ್‌ ಯೋಜನೆಗೆ ಚಿಂತನೆ ಹೊಂದಿದೆ. ಗ್ರೀನ್‌ ಫೀಲ್ಡ್‌ನ ಒಟ್ಟು ಮಾರ್ಗ 10 ಸಾವಿರ ಕಿ.ಮೀ. ಆಗಿದ್ದು, ₹5.50 ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಕರ್ನಾಟಕದ ಒಳಗೆ ₹45 ಸಾವಿರ ಕೋಟಿ ವೆಚ್ಚದಲ್ಲಿ 607 ಕಿ.ಮೀ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.