ರಾಮನಗರ(ಜೂ.06): ಕಾಂಗ್ರೆಸ್‌ನ ಸಂಸ​ದರು, ಶಾಸ​ಕರು ಹಾಗೂ ವಿಧಾನ ಪರಿ​ಷತ್‌ ಸದ​ಸ್ಯರ ನಿಧಿ​ಯಿಂದ ಹಾಗೂ ವೈಯಕ್ತಿಕ ಹಣವನ್ನು ತೊಡಗಿಸಿಕೊಂಡು ವ್ಯಾಕ್ಸಿನ್‌ ಖರೀದಿ ಮಾಡಿ ಜನರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

ಕೋವಿಡ್‌ ಸೋಂಕು ಉಲ್ಬಣವಾಗಿರುವ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಜನರಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕೇವಲ ಬೆಡ್‌ ಮತ್ತು ಆಕ್ಸಿಜನ್‌ ವ್ಯವಸ್ಥೆ ಮಾಡಿದರೆ ಸಾಲದು, ಪ್ರತಿಯೊಬ್ಬರಿಗೂ ಕೋವಿಡ್‌ ವ್ಯಾಕ್ಸಿನ್‌ ಅಗತ್ಯವಿದೆ.

ಲಾಕ್‌ಡೌನ್‌ನಿಂದ ರೈತರಿಗೇ ಹೆಚ್ಚು ತೊಂದರೆ: ಡಿಕೆಶಿ ...

 ಕಾಂಗ್ರೆಸ್‌ ನ ಸಂಸ​ದರು, ಶಾಸ​ಕರು ಹಾಗೂ ವಿಧಾನ ಪರಿ​ಷತ್‌ ಸದ​ಸ್ಯರ ನಿಧಿ​ಯಿಂದ ಹಾಗೂ ವೈಯಕ್ತಿಕ ಹಣವನ್ನು ತೊಡಗಿಸಿಕೊಂಡು ವ್ಯಾಕ್ಸಿನ್‌ ಖರೀದಿ ಮಾಡಿ ಜನರಿಗೆ ನೀಡಲು ನಿರ್ಧರಿಸಲಾಗಿದೆ.

 ಅನುದಾನ ಬಿಡುಗಡೆಗೆ ಸರ್ಕಾರದ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗು​ವುದು ಎಂದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona