Asianet Suvarna News Asianet Suvarna News

ಈಶ್ವರಪ್ಪ ಅಶ್ಲೀಲ ಹೇಳಿಕೆ : ಕಾಂಗ್ರೆಸ್‌ ನಾಯಕರಿಂದ ಆಕ್ರೋಶ

  • ಪ್ರತಿಪಕ್ಷ ಕಾಂಗ್ರೆಸ್‌ನವರನ್ನು ಟೀಕಿಸುವ ಭರದಲ್ಲಿ ಗ್ರಾಮೀಣಾಭಿವೃದ್ಧಿ ಕೆ.ಎಸ್‌.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
  • ಹೇಳಿಕೆ ನೀಡಿದ ಬಳಿಕ ತಪ್ಪಿನ ಅರಿವಾಗಿ ಬಳಕೆ ಮಾಡಿದ ಪದವನ್ನು ಹಿಂಪಡೆದ ಸಚಿವರು
congress Leaders Slams minister eshwarappa snr
Author
Bengaluru, First Published Aug 11, 2021, 7:27 AM IST

 ಬೆಂಗಳೂರು (ಆ.11):  ಪ್ರತಿಪಕ್ಷ ಕಾಂಗ್ರೆಸ್‌ನವರನ್ನು ಟೀಕಿಸುವ ಭರದಲ್ಲಿ ಗ್ರಾಮೀಣಾಭಿವೃದ್ಧಿ ಕೆ.ಎಸ್‌.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ತಪ್ಪಿನ ಅರಿವಾಗಿ ಬಳಕೆ ಮಾಡಿದ ಪದವನ್ನು ಹಿಂಪಡೆದ ಘಟನೆ ನಡೆದಿದೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ವೇಳೆ ಸಚಿವ ಈಶ್ವರಪ್ಪ ಅವರು ಜೋಕರ್‌ ಎಂದು ತಮ್ಮ ಹೆಸರು ಬದಲಿಸಿಕೊಳ್ಳಬೇಕು ಎಂಬ ಕಾಂಗ್ರೆಸ್‌ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡುವ ಭರದಲ್ಲಿ ಅವರು, ‘ಯಾರೋ ಕುಡುಕ .... ಮಕ್ಕಳು ಹೇಳುತ್ತಾರೆ’ ಎಂದು ಅವಾಚ್ಯ ಶಬ್ದ ಬಳಕೆ ಮಾಡಿದರು. ನಂತರ ತಮ್ಮ ತಪ್ಪಿನ ಅರಿವಾಗಿ ಆ ಪದವನ್ನು ಹಿಂಪಡೆದರು. ಮಾತ್ರವಲ್ಲ, ಆ ಪದ ಹಠಾತ್‌ ಆಗಿ ಬಂದಿದೆ. ಅದನ್ನು ವಿವಾದ ಮಾಡಬೇಡಿ ಎಂದು ಕೋರಿದರು.

ಹೊಡೆದು ಒಂದಕ್ಕೆ ಎರಡು ತೆಗೆದುಬಿಡಿ, ಪ್ರತೀಕಾರದ ಕಿಚ್ಚು ಹೊತ್ತಿಸಿದ ಈಶ್ವರಪ್ಪ

ಒಂದು ಕಾಲದಲ್ಲಿ ಜನಸಂಘದಲ್ಲಿ ಶಕ್ತಿ ಇರಲಿಲ್ಲ. ರೈಲ್ವೆ ಫ್ಲಾಟ್‌ಫಾರಂ ಮೇಲೆ ಕೊಲೆ ಮಾಡಿ ಹಾಕಿದ್ದ ಕಾಲ ಇತ್ತು. ಆಗ ನಮಗೆ ಶಕ್ತಿ ಇರಲಿಲ್ಲ. ಏನೇ ಆದರೂ ಸುಮ್ಮನಿರಿ ಎಂದು ಹಿರಿಯರು ಹೇಳುತ್ತಿದ್ದರು. ಅದನ್ನು ನಾನು ಉಲ್ಲೇಖ ಮಾಡಿದ್ದೇನೆ ಅಷ್ಟೇ. ಈಗ ನಮಗೆ ಶಕ್ತಿ ಬಂದಿದೆ. ನಾವು ಯಾರ ತಂಟೆಗೆ ಹೋಗುವುದು ಬೇಡ. ನಮ್ಮ ತಂಟೆಗೆ ಬಂದರೆ ಸುಮ್ಮಿನಿರುವುದು ಬೇಡ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಇದನ್ನು ವಿವಾದ ಮಾಡುವುದು ಸರಿಯಲ್ಲ, ಇಲ್ಲಿಗೆ ನಿಲ್ಲಿಸೋಣ. ಆದರೂ ವಿವಾದ ಮಾಡುತ್ತೇವೆ ಎಂದರೆ ನನಗೇನು ಅಭ್ಯಂತರ ಇಲ್ಲ ಎಂದು ಹೇಳಿದರು.

'ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಕೆಟ್ಟ ಕನಸುಗಾರ'

ಕೇಸ್‌ ವಾಪಸ್‌ಗೆ ಬೆಂಬಲ:

ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್‌ಗೆ ನನ್ನ ಬೆಂಬಲ ಇದೆ ಎಂದು ಹೇಳಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಗೋವಿನ ವಿಚಾರದಲ್ಲಿ ಹಲವು ಪ್ರಕರಣಗಳನ್ನು ಹಾಕಿದ್ದರು. ದಕ್ಷಿಣ ಕನ್ನಡದಲ್ಲಿ ಬೆಳಗಿನ ಜಾವ ಕರುಗಳನ್ನು ಕಳ್ಳತನ ಮಾಡುತ್ತಿದ್ದರು. ಅದನ್ನು ಮಹಿಳೆಯರು ಪ್ರಶ್ನೆ ಮಾಡಿದರೆ, ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದರು. ಕಾಂಗ್ರೆಸ್‌ ಆಡಳಿತದಲ್ಲಿ ಕೋಮುವಾದಿಗಳನ್ನು ಮಟ್ಟಹಾಕುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಅವರ ಕಾಲದಲ್ಲಿ ಹಲವು ಸುಳ್ಳು ಪ್ರಕರಣಗಳನ್ನು ಹಾಕಲಾಗಿತ್ತು. ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ವೇಳೆ ಕೆಲವು ಪ್ರಕರಣಗಳನ್ನು ವಾಪಸ್‌ ಪಡೆದುಕೊಳ್ಳಲಾಗಿದೆ. ಇನ್ನೂ ಕೆಲವು ಪ್ರಕರಣಗಳಿವೆ. ಅವುಗಳನ್ನು ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ಅದಕ್ಕೆ ನನ್ನ ಬೆಂಬಲ ಇದೆ ಎಂದು ತಿಳಿಸಿದರು.

Follow Us:
Download App:
  • android
  • ios