ರಾಷ್ಟ್ರಭಕ್ತರು, ಭಯೋತ್ಪಾದಕರಿಗೂ ವ್ಯತ್ಯಾಸ ತಿಳಿಯದ ಅಸ್ವಸ್ಥತೆ ಕಾಂಗ್ರೆಸ್‌ ನಾಯಕರಿಗೆ ಬಂದಿದೆ ಒಂದು ಕುಟುಂಬದ ಗುಲಾಮಗಿರಿಯಿಂದ ಅಥವಾ ಸತತ ಸೋಲಿನಿಂದ ಈ ಮಾನಸಿಕ ಅಸ್ವಸ್ಥತೆ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ

ನವದೆಹಲಿ (ಆ.22): ರಾಷ್ಟ್ರಭಕ್ತರು, ಭಯೋತ್ಪಾದಕರಿಗೂ ವ್ಯತ್ಯಾಸ ತಿಳಿಯದ ಅಸ್ವಸ್ಥತೆ ಕಾಂಗ್ರೆಸ್‌ ನಾಯಕರಿಗೆ ಬಂದಿದೆ ಎಂದು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಒಂದು ಕುಟುಂಬದ ಗುಲಾಮಗಿರಿಯಿಂದ ಅಥವಾ ಸತತ ಸೋಲಿನಿಂದ ಈ ಮಾನಸಿಕ ಅಸ್ವಸ್ಥತೆ ಬಂದಿರಬಹುದು ಎಂದಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಮೇಲೆ ಅಕ್ರಮ ಆಸ್ತಿ ಆರೋಪ ಮಾಡುತ್ತಿದ್ದಾರೆ. ಸಾಬೀತು ಮಾಡಿದರೆ ನನ್ನ ಆಸ್ತಿಯನ್ನು ದಾನ ಮಾಡುತ್ತೇನೆ. ನಾನು ಅಕ್ರಮ ಆಸ್ತಿ ಮಾಡಿ ಜೈಲಿಗೆ ಹೋಗಿ ಜಾಮೀನು ತೆಗೆದುಕೊಂಡು ಬಂದಿಲ್ಲ ಎಂದು ಕಾಂಗ್ರೆಸ್‌ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಸಿಗರ ವಿರುದ್ಧ ಮಾನಹಾನಿ ದಾವೆ : ಸಿ.ಟಿ. ರವಿ

ಸ್ವಾತಂತ್ರ್ಯ ಹೋರಾಟ ಕಾಂಗ್ರೆಸ್‌ನ ಗುತ್ತಿಗೆ ಅಂದುಕೊಂಡಿದ್ದಾರೆ. ಕಾಂಗ್ರೆಸ್ಸೇತರ ನಾಯಕರು ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ್ದಾರೆ. ಬಿಜೆಪಿ ಕೊಡುಗೆ ಏನೆಂದು ಕೇಳುತ್ತಾರೆ. ಹಾಗಿದ್ದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ ಪಾತ್ರವೇನು ಎಂದು ಪ್ರಶ್ನಿಸಿದ ಅವರು, ಹಾಗೇ ನೋಡಿದರೆ ಕಾಂಗ್ರೆಸ್‌ ಸ್ಥಾಪಕ ಎ.ಒ.ಹ್ಯೂಮ್‌ ಭಾರತಿಯನೇ ಅಲ್ಲ ಎಂದರು.