ಅನಗತ್ಯ ವೆಚ್ಚ ಕಡಿಮೆ ಮಾಡಲಿ. ಸ್ಪೆಷಲ್ ಸೆಕ್ರೆಟರಿ ತೆಗೆಯಿರಿ. ಅನಗತ್ಯ ಹುದ್ದೆಗಳಿಗೆ ಕಡಿವಾಣ ಹಾಕಿ. ಅಭಿವೃದ್ಧಿ ಕೆಲಸ ಈಗ ನಿಲ್ಲಿಸಿ . ಬಿಪಿಎಲ್ ಕಾರ್ಡುದಾರರಿಗೆ ನೆರವು ನೀಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಬೆಂಗಳೂರು (ಏ.29): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಈ ನಿಟ್ಟಿನಲ್ಲಿ ಅನಗತ್ಯ ವೆಚ್ಚ ಕಡಿಮೆ ಮಾಡಲಿ. ಸ್ಪೆಷಲ್ ಸೆಕ್ರೆಟರಿ ತೆಗೆಯಿರಿ. ಅನಗತ್ಯ ಹುದ್ದೆಗಳಿಗೆ ಕಡಿವಾಣ ಹಾಕಿ. ಅಭಿವೃದ್ಧಿ ಕೆಲಸ ಈಗ ನಿಲ್ಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಜನರಿಗೆ ಅಕ್ಕಿ ಕೊಡಲು 20-30 ಕೋಟಿ ಮೀಸಲಿಡಲಿ. ಬಿಪಿಎಲ್ ಕಾರ್ಡ್ ದಾರರಿಗೆ ಹಣ ಕೊಡಲಿ. ಜೇಬಿನಲ್ಲಿ ದುಡ್ಡು ಇದ್ದರೆ ಮಾತ್ರ ಮಾರುಕಟ್ಟೆ ಗೆ ಹೋಗಿ ಹಣ್ಣು ತರಕಾರಿ ತರಬಹುದು. ಹೀಗಾಗಿ ಮೊದಲು ಅವರ ಜೇಬಿಗೆ ದುಡ್ಡು ಹಾಕಲಿ ಎಂದಿದ್ದಾರೆ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಹೋಗಬೇಕು. ಅಲ್ಲಿ ಅಧಿಕಾರಿಗಳ ಜತೆ ಸಭೆ ಮಾಡಬೇಕು. ಅಚ್ಚರಿ ವಿಸಿಟ್ ಮಾಡಬೇಕು. ಬೆಂಗಳೂರು ಬಿಟ್ಟು ಹೊರ ಹೋಗಲಿ. ಬೆಂಗಳೂರಿನಲ್ಲಿ ನೆಲೆಸಲು ಅವರಿಗೆ ಜವಾಬ್ದಾರಿ ನೀಡಿರುವುದಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ರಾಜ್ಯದ 10 ಜಿಲ್ಲೆಗಳು ಮೋಸ್ಟ್ ಡೇಂಜರಸ್ : ಇಲ್ಲಿ ಎಲ್ಲವೂ ಸಂಪೂರ್ಣ ಲಾಕ್ ಆಗುತ್ತಾ..? ..
.
ಶಾಸಕರು ಫೋನ್ ಮಾಡಿದರೆ ಆರೋಗ್ಯ ಸಚಿವ ಸುಧಾಕರ್ ಫೋನ್ ತೆಗೆಯಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಇದೆಂತಾ ನಡೆ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಕಾಂಗ್ರೆಸ್ ಗೆಲುವು : ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ಸಾಂ ಮತ್ತು ಕೇರಳದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದ ಸಿದ್ದರಾಮಯ್ಯ ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿಯೂ ಕಾಂಗ್ರೆಸ್ ಒಕ್ಕೂಟಕ್ಕೆ ಗೆಲುವು ಸಿಗೋದು ಖಚಿತ ಎಂದಿದ್ದಾರೆ.
ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
