ಬೆಂಗಳೂರು (ಸೆ.16):  ರಾಜಕೀಯ ರಹಿತವಾಗಿ ತನಿಖೆ ಕೈಗೊಂಡು ಡ್ರಗ್ಸ್‌ ದಂಧೆಯನ್ನು ನಿಯಂತ್ರಿಸದಿದ್ದರೆ ‘ಕರ್ನಾಟಕ ಮತ್ತೊಂದು ಉಡ್ತಾ ಪಂಜಾಬ್‌’ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಮುದಾಯಕ್ಕೆ ಮಾರಕವಾಗಿರುವ ಡ್ರಗ್ಸ್‌ ದಂಧೆಯನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ. ಇದಕ್ಕಾಗಿ ಕಾನೂನು ಬಲಪಡಿಸುವುದು, ತನಿಖಾ ಹಾಗೂ ಬೇಹುಗಾರಿಕಾ ಸಂಸ್ಥೆಗಳಲ್ಲಿನ ನ್ಯೂನತೆ ತಿಳಿದು ಬಲಪಡಿಸಬೇಕು ಎಂದರು.

ಇದೊಂದು ಅತ್ಯಂತ ನೋವಿನ ಸಂಗತಿ : ನಟ ಅನಿರುದ್ಧ ...

ರಾಜ್ಯದಲ್ಲಿ ಸೆ.21ರಿಂದ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಈಗಾಗಲೇ ಸಂಸತ್‌ ಅಧಿವೇಶನ ಆರಂಭವಾಗಿದೆ. ಪ್ರತ್ಯಕ್ಷವಾಗಿ ಡ್ರಗ್ಸ್‌ ಹಾವಳಿ ತಡೆಯುವುದಕ್ಕಾಗಿ ಲೋಕಸಭೆಯಲ್ಲಿಯೂ ಚರ್ಚಿಸಿ ಅಗತ್ಯ ಕಾನೂನು ಜಾರಿಗೊಳಿಸಬೇಕು ಎಂದರು.

ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದೆ. ಹಲವು ನಟ ನಟಿಯರು ರಾಜಕೀಯ ಮುಖಂಡರು ಡ್ರಗ್ ಮಾಫಿಯಾದಲ್ಲಿ ಸಿಲುಕಿದ್ದಾರೆ. ಹಲವರು ಜೈಲೂ ಸೇರಿದ್ದು, ಈ ನಿಟ್ಟಿನಲ್ಲಿ ಎಚ್ಚರಿಕೆ ನೀಡಲಾಗಿದೆ.