ಈ ಹೆಸರು ದೇಶ ಜನರ ಭಾವನೆಗೆ ಬಿಟ್ಟಿರುವ ವಿಚಾರ ಈ ನಿಟ್ಟಿನಲ್ಲಿ ಯಾವುದೇ ಬದಲಾವಣೆ ಅಸಾಧ್ಯ, ಇದಕ್ಕೆ ಅವಕಾಶವನ್ನೂ ನೀಡಲ್ಲ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು [ಡಿ.19]: ನಾವಿನ್ನೂ ಬದುಕೇ ಇದ್ದೇವೆ, ಇನ್ನೂ ಸತ್ತಿಲ್ಲ. ಇಂದಿರಾ ಕ್ಯಾಂಟೀನ್‌ ಹೆಸರನ್ನು ಬದಲಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇಂದಿರಾ ಗಾಂಧಿ ಎಂಬುದು ದೇಶದ ಜನರ ಭಾವನಾತ್ಮಕ ವಿಷಯ. ಅದನ್ನು ಮುಟ್ಟಲು ಹೋಗಬೇಡಿ. ಯಾವುದೇ ಕಾರಣಕ್ಕೂ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಉಚಿತ ಅಕ್ಕಿ ಸ್ಕೀಂ ಇಂದಿರಾದ್ದು: ಸಿದ್ದುಗೆ ಪರಮೇಶ್ವರ್‌ ಟಾಂಗ್‌!...

ನಾವೂ ಸಹ ರಾಜ್ಯದಲ್ಲಿ ಸರ್ಕಾರ ನಡೆಸಿದ್ದೇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ವಾಜಪೇಯಿ ಹೆಸರಿನಲ್ಲಿ ಅಟಲ್‌ ಸಾರಿಗೆ, ಅಟಲ್‌ ಜನಸ್ನೇಹಿ ಕೇಂದ್ರ ಸೇರಿದಂತೆ ಹಲವಾರು ಯೋಜನೆ ಜಾರಿಗೆ ತಂದಿತ್ತು. ಆದರೆ, ನಮ್ಮ ಅವಧಿಯಲ್ಲಿ ಅದನ್ನು ಬದಲಾವಣೆ ಮಾಡಲು ಹೋಗಿರಲಿಲ್ಲ. ಏಕೆಂದರೆ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರು ದೇಶಕ್ಕೆ ಬೇಕಿದೆ ಎಂದರು. 

ಮೊರಾರ್ಜಿ ದೇಸಾಯಿ, ಜೆ.ಪಿ. ನಾರಾಯಣ್‌ ಅವರ ಹೆಸರಿನಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ಯಾವುದನ್ನಾದರೂ ನಾವು ಬದಲಾವಣೆ ಮಾಡಲು ಹೋಗಿದ್ದೇವೆಯೇ ಎಂದು ಪ್ರಶ್ನಿಸಿದರು.