Asianet Suvarna News Asianet Suvarna News

ಕಾಂಗ್ರೆಸ್‌ಗೆ ಹೊಸ ಉತ್ಸಾಹ : ಸಿಕ್ಕಿದೆ ಲಾಭದ ಸಂದೇಶ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೂಡಿ ಮತವಿಭಜನೆ ತಡೆದು ಬಿಜೆಪಿಯನ್ನು ಬಗ್ಗುಬಡಿಯಬಹುದು ಎಂಬ ಆಶಾಭಾವನೆ ಕಾಂಗ್ರೆಸ್ ನಲ್ಲಿ ಇದೀಗ  ಉಂಟಾಗಿದೆ.
 

Congress JDS May Friendly Fought In Lok Sabha Election
Author
Bengaluru, First Published Nov 8, 2018, 8:11 AM IST

ಬೆಂಗ​ಳೂರು :  ಉಪ ಚುನಾ​ವಣೆ ನಡೆದ ಐದು ಕ್ಷೇತ್ರ​ಗಳ ಪೈಕಿ ನಾಲ್ಕು ಕ್ಷೇತ್ರ​ಗ​ಳಲ್ಲಿ ಮೈತ್ರಿ ಕೂಟವಾದ ಜೆಡಿ​ಎಸ್‌ ಹಾಗೂ ಕಾಂಗ್ರೆಸ್‌ ನಿರೀ​ಕ್ಷಿತ ಗೆಲುವು ಸಾಧಿ​ಸಿ​ರು​ವುದು ಮುಂದಿನ ಲೋಕ​ಸಭಾ ಚುನಾ​ವ​ಣೆ​ವ​ರೆಗೂ ಈ ಸಮ್ಮಿಶ್ರ ಸರ್ಕಾರ ಸುರ​ಕ್ಷಿತ ಎಂಬ ಸಂದೇಶ ರವಾ​ನೆ​ಯಾದ ಸಮಾ​ಧಾ​ನ​ವನ್ನು ಉಪ ಚುನಾ​ವಣಾ ಫಲಿ​ತಾಂಶ ಕಾಂಗ್ರೆಸ್‌ ನಾಯ​ಕ​ತ್ವಕ್ಕೆ ನೀಡಿ​ದೆ. ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೂಡಿ ಮತವಿಭಜನೆ ತಡೆದು ಬಿಜೆಪಿಯನ್ನು ಬಗ್ಗುಬಡಿಯಬಹುದು ಎಂಬ ಆಶಾಭಾವನೆ ಉಂಟಾಗಿದೆ.

ಇದರ ತಕ್ಷ​ಣದ ಲಾಭವೆಂದರೆ, ಬಿಜೆಪಿ ಆಪ​ರೇ​ಷನ್‌ ಕಮ​ಲದ ಸೆಳ​ತಕ್ಕೆ ಒಳ​ಗಾ​ಗುವ ಕಾಂಗ್ರೆಸ್‌ ಶಾಸ​ಕರ ಸಂಖ್ಯೆ ಕಡಿ​ಮೆ​ಯಾ​ಗು​ತ್ತದೆ. ಸಂಪುಟ ವಿಸ್ತ​ರಣೆ ಮಾಡಿ ತಮಗೆ ಸಚಿವ ಸ್ಥಾನ ನೀಡ​ದಿ​ದ್ದರೆ ಪಕ್ಷ ತ್ಯಾಗ ಮಾಡುವ ಬೆದ​ರಿಕೆಯೊಡ್ಡುವ ಶಾಸ​ಕ​ರಲ್ಲಿ ಅಳುಕು ಉಂಟಾ​ಗು​ತ್ತದೆ. ನಿಗಮ ಮಂಡಳಿ ನೇಮ​ಕದ ವೇಳೆ ಶಾಸ​ಕರು ಹೆಚ್ಚು ಸದ್ದು ಗದ್ದ​ಲ​ವಿ​ಲ್ಲದೆ ಪಾಲಿಗೆ ಬಂದಿ​ದ್ದನ್ನು ಸ್ವೀಕ​ರಿ​ಸುವ ಮನ​ಸ್ಥಿತಿಗೆ ಬರಬಹುದು.

ಇದರ ಜತೆಗೆ, ಮೈತ್ರಿ ಕೂಟವು ಜತೆ​ಯಲ್ಲಿ ಲೋಕ​ಸಭಾ ಚುನಾ​ವಣೆ ಎದು​ರಿ​ಸಬೇಕು ಎಂಬ ವಾದಕ್ಕೆ ಮತ್ತಷ್ಟುಪುಷ್ಟಿದೊರೆ​ಯು​ತ್ತದೆ. ಬಿಜೆ​ಪಿ​ಯನ್ನು ಸೋಲಿ​ಸ​ಬೇಕು ಎಂಬ ಏಕೈಕ ಉದ್ದೇ​ಶ​ವನ್ನು ಮುಂದಿ​ಟ್ಟು​ಕೊಂಡು ಶಿವ​ಮೊಗ್ಗ, ಬಳ್ಳಾರಿಯಲ್ಲಿ ಉಭಯ ಪಕ್ಷ​ಗಳ ನಾಯ​ಕರು ಒಗ್ಗೂಡಿ ಹೋರಾಟ ನಡೆ​ಸಿದ್ದು ಫಲ ನೀಡಿದೆ. ಶಿವ​ಮೊ​ಗ್ಗ​ದಲ್ಲಿ ಗೆಲುವು ದೊರೆ​ಯ​ದಿ​ದ್ದರೂ ಸೋಲಿನ ಅಂತರ ಅತ್ಯಂತ ಕಡಿ​ಮೆ​ಯಾ​ಗಿದೆ. ಇನ್ನು ಬಳ್ಳಾ​ರಿ​ಯಲ್ಲಿ ಭಾರಿ ಅಂತ​ರದ ಜಯ ದೊರ​ಕಿದೆ.

ಮಂಡ್ಯ​ದಲ್ಲಿ ಬಿಜೆ​ಪಿಗೆ ಹೆಚ್ಚಿನ ಮತ ದೊರ​ಕಿ​ರು​ವು​ದರ ಹಿಂದೆ ಕಾಂಗ್ರೆಸ್‌ ಸ್ಥಳೀಯ ನಾಯ​ಕ​ತ್ವವು ಕಾರಣ ಎಂದು ಹೇಳ​ಲಾ​ಗು​ತ್ತಿ​ದ್ದರೂ ಜೆಡಿ​ಎ​ಸ್‌-ಕಾಂಗ್ರೆಸ್‌ ಒಗ್ಗೂಡಿ ಲೋಕ​ಸಭಾ ಚುನಾ​ವಣೆ ಎದು​ರಿ​ಸಿ​ದರೆ ಬಿಜೆ​ಪಿಯ ಆಶೋ​ತ್ತ​ರ​ಗ​ಳಿಗೆ ಬೆಂಕಿ ಹಚ್ಚ​ಬ​ಹುದು ಎಂಬ ಸ್ಪಷ್ಟಸಂದೇಶ ಈ ಚುನಾ​ವಣೆ ನೀಡಿ​ದೆ.

ಕಾಂಗ್ರೆಸ್‌ ತಾನು ಸ್ಪರ್ಧಿ​ಸಿದ ಬಳ್ಳಾರಿ ಲೋಕ​ಸಭೆ ಹಾಗೂ ಜಮ​ಖಂಡಿ ವಿಧಾ​ನ​ಸಭಾ ಕ್ಷೇತ್ರ​ಗ​ಳಲ್ಲಿ ಭಾರಿ ಅಂತ​ರ​ದಲ್ಲಿ ಗೆಲುವು ಸಾಧಿ​ಸಿ​ರು​ವುದು ಲೋಕ​ಸಭಾ ಚುನಾ​ವಣೆ ದೃಷ್ಟಿ​ಯಿಂದ ಪಕ್ಷಕ್ಕೆ ಆನೆ ಬಲ ದೊರ​ಕಿ​ದಂತಾ​ಗಿದೆ.

ಬಳ್ಳಾ​ರಿ​ಯೆಂಬ ಒಂದು ಕಾಲದ ತನ್ನ ಭದ್ರ​ಕೋ​ಟೆ​ಯನ್ನು ಬಿಜೆ​ಪಿ​ಯಿಂದ ಕಿತ್ತು​ಕೊಂಡು ಸಮಾ​ಧಾನ ಕಾಂಗ್ರೆ​ಸ್‌ಗೆ ದೊರ​ಕಿದೆ. ಈ ಕ್ಷೇತ್ರ​ದಲ್ಲಿ ಭಾರಿ ಜಯ ದೊರ​ಕಿ​ರು​ವುದು ಪ್ರಭಾವಿ ಸಚಿವ ಡಿ. ಕೆ. ಶಿವ​ಕು​ಮಾರ್‌ ಅವರ ವೈಯ​ಕ್ತಿಕ ವರ್ಚಸ್ಸು ಮತ್ತಷ್ಟುಹೆಚ್ಚಾ​ಗಲು ಕಾರ​ಣ​ವಾ​ಗಿದೆ.

ಪಕ್ಷ​ದಲ್ಲಿ ವಿರೋ​ಧ​ವಿ​ದ್ದರೂ ಉಗ್ರಪ್ಪ ಅವ​ರನ್ನು ಬಳ್ಳಾ​ರಿ​ಯಲ್ಲಿ ಕಣಕ್ಕೆ ಇಳಿ​ಸಿದ್ದು ಮಾತ್ರ​ವ​ಲ್ಲದೆ, ಅವರ ಗೆಲು​ವಿಗೆ ಕಾರ್ಯ​ತಂತ್ರ ರೂಪಿ​ಸಿದ್ದರು. ಮಾತ್ರ​ವ​ಲ್ಲದೆ, ರಾಮ​ನ​ಗ​ರ​ದಲ್ಲಿ ಬಿಜೆಪಿ ಅಭ್ಯರ್ಥಿ ಕಡೆ ಕ್ಷಣ​ದಲ್ಲಿ ಪಕ್ಷ ತ್ಯಜಿಸಿ ಕಾಂಗ್ರೆಸ್‌ ಸೇರು​ವಂತೆ ಮಾಡಿ​ದ ತಂತ್ರ​ಗಾ​ರಿ​ಕೆ ಸಹ ಮೆರೆ​ದಿ​ದ್ದರು. ಇದು ಶಿವ​ಕು​ಮಾರ್‌ ಅವ​ರಿಗೆ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾ​ರದ ಮಟ್ಟ​ದಲ್ಲಿ ಶಕ್ತಿ ತುಂಬಲಿದೆ.

ಇನ್ನು ಜಮ​ಖಂಡಿ​ಯಲ್ಲಿ ಕಾಂಗ್ರೆಸ್‌ ನಿರೀಕ್ಷೆ​ಯಂತೆಯೇ ಗೆದ್ದಿದೆ. ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರ ಸತತ ಪ್ರಚಾರ ಹಾಗೂ ಉಸ್ತು​ವಾರಿ ಹೊತ್ತಿದ್ದ ಉಪ ಮುಖ್ಯ​ಮಂತ್ರಿ ಡಾ. ಜಿ. ಪರ​ಮೇ​ಶ್ವರ್‌ ಅವರ ಶ್ರಮ ಫಲ ನೀಡಿದೆ.

Follow Us:
Download App:
  • android
  • ios