ನವದೆಹಲಿ[ಜ.17]: ಕಾಂಗ್ರೆಸ್‌ ಐಟಿ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ(ದಿವ್ಯ ಸ್ಪಂದನಾ) ಪ್ರಧಾನಿ ಮೋದಿ ಮಾಡಿದ್ದ ನೋಟ್ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೋ ವೊಂದನ್ನು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

 ಆಂಗ್ಲ ಭಾಷೆಯ ಹಾರರ್ ಸಿದಿ ಶೈನಿಂಗ್‌ ನ ತುಣುಕೊಂದನ್ನು ಎಡಿಟ್ ಮಾಡಿ, ಅದನ್ನು ನೋಟ್ ಬ್ಯಾನ್ ಗೆ ಹೋಲಿಕೆ ಮಾಡಿದ್ದಾರೆ. ಸಿನಿಮಾದಲ್ಲಿ ಭಯ ಬೀಳುವ ಮಗುವೊಂದು ಓಡಿ ಹೋಗುತ್ತಿರಬೇಕಾದರೆ, ದೆವ್ವವನ್ನು ಎದುರಾಗುವ ದೃಶ್ಯವಾಗಿದೆ. ಆದರೆ ಶೇರ್ ಮಾಡಿದ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು, ದೆವ್ವದ ಬದಲಾಗಿ ಪ್ರಧಾನಿ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡುತ್ತಿರುವುದನ್ನು ಸೇರಿಸಲಾಗಿದೆ. ಸದ್ಯ ಇದು ಸಾಮಾಜಿಕ ತಾಣದಲ್ಲಿ ಭಾರಿ ಸುದ್ದಿ ಮಾಡಿದೆ.