ಬೆಂಗ​ಳೂರು[ಡಿ.01]: ಸಚಿವ ಸಂಪುಟ ವಿಸ್ತ​ರಣೆ ಕುರಿತು ಮೊದಲೇ ಗೊಂದ​ಲ​ದಲ್ಲಿದ್ದ ಕಾಂಗ್ರೆಸ್‌ ನಾಯ​ಕತ್ವವನ್ನು ಬಿಜೆ​ಪಿಯ ಸೆಳೆ​ತಕ್ಕೆ ಸಿಲು​ಕಿ​ರುವ ಪಕ್ಷದ ಶಾಸ​ಕರ ಅತೃಪ್ತಿ ಸ್ಫೋಟದ ಸಾಧ್ಯ​ತೆ ಅಕ್ಷ​ರಶಃ ಇಕ್ಕ​ಟ್ಟಿಗೆ ಸಿಲು​ಕಿ​ಸಿದೆ. ಹೀಗಾಗಿ ಸಂಪುಟ ವಿಸ್ತ​ರಣೆ ಎಂಬ ಎರಡು ಅಲ​ಗಿನ ಕತ್ತಿ​ಯನ್ನು ಯಾವಾಗ ಪ್ರಯೋಗ ಮಾಡ​ಬೇಕು ಎಂಬ ಗೊಂದಲ ಕಾಡ​ತೊ​ಡ​ಗಿ​ದೆ.

"

ಬೆಳ​ಗಾವಿ ಅಧಿ​ವೇ​ಶ​ನಕ್ಕೂ ಮುನ್ನ ಸಂಪುಟ ವಿಸ್ತ​ರಣೆ ಮಾಡ​ಬೇಕು ಎಂಬ ಒತ್ತಡ ತೀವ್ರ​ವಿದೆ. ಈ ಒತ್ತ​ಡಕ್ಕೆ ತಲೆ​ಬಾ​ಗಿ​ದರೆ ಅಧಿ​ವೇಶ​ನದ ವೇಳೆ ಸಚಿವ ಸ್ಥಾನ ವಂಚಿ​ತರ ಆಕ್ರೋಶ ಹಾಗೂ ಭಿನ್ನ​ಮ​ತೀಯ ಚಟು​ವ​ಟಿ​ಕೆ​ಯ​ನ್ನು ಎದು​ರಿ​ಸ​ಬೇ​ಕಾ​ಗು​ತ್ತದೆ. ಅಲ್ಲದೆ, ಶಾಸ​ಕರು ಲಭ್ಯ​ರಾ​ಗುವ ಕಾರಣ ಅವರ ಆಪ​ರೇ​ಷನ್‌ ನಡೆ​ಸಲು ಬಿಜೆ​ಪಿಗೆ ವೇದಿ​ಕೆ​ಯ​ನ್ನು ಕಲ್ಪಿಸಿಕೊಟ್ಟಂತಾ​ಗು​ತ್ತದೆ ಎಂಬ ಭೀತಿ​ಯಿದೆ. ಇನ್ನು ಸಂಪುಟ ವಿಸ್ತ​ರ​ಣೆ​ಯನ್ನು ಮುಂದೂ​ಡಿ​ದರೆ ಅತೃ​ಪ್ತ ಶಾಸ​ಕರ ಸಂಖ್ಯೆ ಹೆಚ್ಚ​ಳ​ವಾಗಿ ಬಿಜೆಪಿ ಬಯ​ಸು​ತ್ತಿ​ರುವ ಸಂಖ್ಯೆ​ಯನ್ನು ಮುಟ್ಟುವ ಆತಂಕವೂ ನಾಯ​ಕ​ರಿಗೆ ಇದೆ.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‌ ಅತೃಪ್ತಿ ಸ್ಫೋಟ?: ಮುಂಬೈಗೆ ಹೊರಟ 10 ಶಾಸಕರು!

ಈ ಹಿನ್ನೆ​ಲೆ​ಯಲ್ಲಿ ಡಿ.5ರಂದು ಸಿದ್ದ​ರಾ​ಮಯ್ಯ ಅವರ ಅಧ್ಯ​ಕ್ಷ​ತೆ​ಯಲ್ಲಿ ನಡೆ​ಯ​ಲಿ​ರುವ ಸಮ​ನ್ವಯ ಸಮಿತಿ ಸಭೆ ಅತ್ಯಂತ ಪ್ರಮು​ಖ​ವಾಗಿ ಮಾರ್ಪ​ಟ್ಟಿದೆ. ಈ ಸಭೆ​ಯಲ್ಲಿ ಸಂಪುಟ ವಿಸ್ತ​ರಣೆ ಕುರಿತು ಮಹ​ತ್ವದ ನಿರ್ಧಾ​ರ​ವಾ​ಗುವ ಸಾಧ್ಯ​ತೆ​ಯಿದೆ. ಇನ್ನು ಕಾಂಗ್ರೆಸ್‌ ಶಾಸ​ಕರು ಸಿಡಿ​ದೆ​ದ್ದರೆ ಅದು ಸರ್ಕಾ​ರದ ಮೇಲೆ ಪರಿ​ಣಾಮ ಬೀರುವ ಕಾರಣ ಜೆಡಿ​ಎಸ್‌ ನಾಯ​ಕರು ಕೂಡ ಕಾಂಗ್ರೆಸ್‌ ಶಾಸ​ಕರ ಅಸ​ಮಾ​ಧಾನ ಶಮನಗೊಳಿ​ಸುವ ಅಗ​ತ್ಯ​ವಿ​ದೆ. ಹೀಗಾ​ಗಿಯೇ ಡಿ.8ರಂದು ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆ​ಗೆ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವ​ರನ್ನು ಆಹ್ವಾ​ನಿ​ಸ​ಲಾ​ಗಿದೆ. ಈ ಎರಡು ಸಭೆ​ಗ​ಳಲ್ಲಿ ಕಾಂಗ್ರೆಸ್‌ ಶಾಸ​ಕ​ರನ್ನು ಸಮಾ​ಧಾ​ನ​ಗೊ​ಳಿ​ಸುವ ಪ್ರಯತ್ನ ನಡೆ​ಯ​ಲಿದೆ.

ಮೂಲ​ಗಳ ಪ್ರಕಾರ ಕಾಂಗ್ರೆಸ್‌ ನಾಯ​ಕತ್ವ ಈ ಬಾರಿ ನಿಗಮ ಮಂಡಳಿ ಹಾಗೂ ವಿಧಾ​ನ​ಪ​ರಿ​ಷತ್‌ ಸಭಾ​ಪತಿ, ಉಪ ಸಭಾ​ಪತಿ, ಮುಖ್ಯ ಸಚೇ​ತಕದಂತಹ ಹುದ್ದೆ​ಗಳ ನೇಮ​ಕದ ಮೂಲಕ ಕಾಂಗ್ರೆಸ್‌ ಶಾಸ​ಕ​ರಿಗೆ ಒಂದಷ್ಟುಅಧಿ​ಕಾ​ರ ​ಕೊಟ್ಟು ಸಂಪುಟ ವಿಸ್ತ​ರ​ಣೆ​ಯನ್ನು ಬೆಳ​ಗಾವಿ ಅಧಿ​ವೇ​ಶ​ನದ ನಂತರ ಇಟ್ಟು​ಕೊ​ಳ್ಳುವ ಉದ್ದೇಶ ಹೊಂದಿತ್ತು. ಆದರೆ, ಕಾಂಗ್ರೆಸ್‌ ಶಾಸ​ಕರ ಒತ್ತಡ ಹಾಗೂ ಅತೃಪ್ತಿ ಯಾವ ಮಟ್ಟಕ್ಕೆ ಇದೆ ಎಂದರೆ ಅವರ ಬೇಡಿ​ಕೆ​ಗ​ಳನ್ನು ತಕ್ಕ​ಮ​ಟ್ಟಿಗೆ ಈಡೇ​ರಿ​ಸ​ದಿ​ದ್ದರೆ ಸರ್ಕಾ​ರಕ್ಕೆ ಧಕ್ಕೆ ಬರ​ಬ​ಹುದು ಎಂಬ ಭೀತಿ ಕಾಂಗ್ರೆಸ್‌ ನಾಯ​ಕ​ತ್ವಕ್ಕೆ ಇದೆ.

ಇದನ್ನೂ ಓದಿ: ಭುಗಿಲೆದ್ದ ಅತೃಪ್ತಿ: ರಮೇಶ್ ಜಾರಕಿಹೊಳಿ ಮನೆಗೆ ಬಿಜೆಪಿ ಶಾಸಕರ ದಂಡು

ಇನ್ನು ಸಂಪುಟ ವಿಸ್ತ​ರಣೆ ವಿಚಾ​ರ​ದಲ್ಲೂ ಕಾಂಗ್ರೆಸ್‌ ನಾಯ​ಕ​ತ್ವ​ದಲ್ಲೇ ಎರಡು ರೀತಿಯ ಅಭಿ​ಪ್ರಾ​ಯ​ವಿದೆ. ಶಾಸ​ಕರ ಸತತ ಒತ್ತ​ಡಕ್ಕೆ ಸಿಲು​ಕಿ​ರುವ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರು, ಸಂಪುಟ ವಿಸ್ತ​ರಣೆ ಮಾಡ​ಬೇಕು ಎಂಬುದರ ಪರ​ವಿ​ದ್ದಾರೆ. ಶಾಸ​ಕರ ಅತೃಪ್ತಿ ಬಗ್ಗೆ ಈಗಾ​ಗಲೇ ಹೈಕಮಾಂಡ್‌ ಗಮ​ನಕ್ಕೆ ತಂದಿದ್ದಾರೆ. ಅಲ್ಲದೆ, ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಸಹ ಇತ್ತೀ​ಚೆಗೆ ದೆಹ​ಲಿಗೆ ತೆರಳಿ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌ ಹಾಗೂ ಹೈಕ​ಮಾಂಡ್‌ನ ಪ್ರಮುಖ ನಾಯ​ಕ​ರನ್ನು ಭೇಟಿ ಮಾಡಿ ಸಂಪುಟ ವಿಸ್ತ​ರ​ಣೆಯ ಅನಿ​ವಾ​ರ್ಯ​ತೆ​ಯನ್ನು ಮನ​ದಟ್ಟು ಮಾಡಿ​ಕೊ​ಟ್ಟಿ​ದ್ದಾರೆ ಎನ್ನ​ಲಾ​ಗಿ​ದೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಶಾಕ್ ಕೊಟ್ಟ ಕಾಂಗ್ರೆಸ್ ಶಾಸಕನ ರಾಜೀನಾಮೆ ಮಾತು

ಆದರೆ, ಜೆಡಿ​ಎಸ್‌ ಪಾಳ​ಯ​ದೊಂದಿಗೆ ಉತ್ತಮ ಸಂಬಂಧ ಹೊಂದಿ​ರುವ ಕಾಂಗ್ರೆ​ಸ್‌ನ ಮತ್ತೊಂದು ಗುಂಪು ವಿಸ್ತ​ರ​ಣೆಯ ಪರ​ವಿಲ್ಲ. ಇದಕ್ಕೆ ಮುಖ್ಯ ಕಾರಣ ವಿಸ್ತ​ರಣೆ ನಡೆ​ದರೆ ಸಚಿವ ಸ್ಥಾನ ದೊರೆ​ಯದೇ ಅತೃ​ಪ್ತ​ರಾ​ಗುವ ಶಾಸ​ಕರ ದೊಡ್ಡ ಗುಂಪನ್ನು ಓಲೈ​ಸು​ವುದು ಬಿಜೆ​ಪಿಗೆ ಅತ್ಯಂತ ಸುಲ​ಭ​ವಾ​ಗು​ತ್ತದೆ. ತನ್ಮೂ​ಲಕ ಈ ಬೆಳ​ವ​ಣಿಗೆ ಸಮ್ಮಿಶ್ರ ಸರ್ಕಾ​ರದ ಅಸ್ತಿ​ತ್ವ​ವನ್ನೇ ಅಲು​ಗಾ​ಡಿ​ಸ​ಲಿದೆ ಎಂಬ ಭೀತಿ.

ಅಲ್ಲದೆ, ಈಗ ಸಂಪುಟ ವಿಸ್ತ​ರ​ಣೆಗೆ ಸಮ​ಯದ ಕೊರ​ತೆಯೂ ಇದೆ. ಬೆಳ​ಗಾವಿ ಅಧಿ​ವೇ​ಶನ ಡಿ.10ರಿಂದ ಆರಂಭ​ವಾ​ಗ​ಲಿದೆ. ಸಮ​ನ್ವಯ ಸಮಿತಿ ಸಭೆ ಡಿ.5ಕ್ಕೆ ಹಾಗೂ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವರೂ ಆಹ್ವಾ​ನಿ​ತ​ರಾ​ಗಿ​ರುವ ಶಾಸ​ಕಾಂಗ ಪಕ್ಷದ ಸಭೆ ಡಿ.8ರಂದು ನಡೆ​ಯ​ಲಿದೆ. ಈ ಎರಡು ಸಭೆ​ಗಳ ನಂತ​ರವೇ ಒಂದು ಸ್ಪಷ್ಟನಿರ್ಧಾರ ಮೂಡಲು ಸಾಧ್ಯ. ಒಂದು ವೇಳೆ ಸಂಪುಟ ವಿಸ್ತ​ರಣೆ ಮಾಡ​ಬೇಕು ಎಂದೇ ನಿರ್ಧಾ​ರ​ವಾ​ದರೆ, ಅದಕ್ಕೆ ದೊರೆ​ಯುವುದು ಎರಡು ದಿನ ಮಾತ್ರ. ಈ ಎರಡು ದಿನ​ದಲ್ಲಿ ಹೈಕಮಾಂಡ್‌ ಜತೆಯೂ ಚರ್ಚೆ ಮಾಡ​ಬೇ​ಕಾ​ಗು​ತ್ತದೆ.

ಇದನ್ನೂ ಓದಿ: ‘ಸಚಿವ ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನ’

ಸಿದ್ದ​ರಾ​ಮಯ್ಯ ಅವರ ಆಪ್ತ ಮೂಲಗಳ ಪ್ರಕಾರ ರಾಜ್ಯ ನಾಯ​ಕ​ತ್ವ​ದಲ್ಲೂ ಒಮ್ಮತ ಮೂಡಿ ಹೈಕ​ಮಾಂಡ್‌ ಕೂಡ ಸಹ​ಮತ ನೀಡಿ​ದರೆ ಡಿ.9ರಂದು ತಪ್ಪಿ​ದರೆ ಡಿ.10ರಂದೇ ವಿಸ್ತ​ರಣೆ ಮಾಡ​ಬ​ಹುದು. ಏಕೆಂದರೆ, ಡಿ.10ರಂದು ಬೆಳ​ಗಾವಿ ಅಧಿ​ವೇ​ಶನ ಆರಂಭ​ವಾ​ದರೂ ಅಂದು ಸಂತಾಪ ಸೂಚ​ನೆಗೆ ಮೀಸ​ಲಾ​ಗ​ಲಿದ್ದು, ಬೇಗ ಮುಗಿ​ಯ​ಲಿದೆ. ಮಧ್ಯಾ​ಹ್ನದ ನಂತರ ಪ್ರಮುಖ ನಾಯ​ಕರು ಬೆಂಗ​ಳೂ​ರಿಗೆ ಹೆಲಿ​ಕಾ​ಪ್ಟರ್‌ನಲ್ಲಿ ಬಂದು ಪ್ರಮಾಣ ವಚನ ಕೈಗೊ​ಳ್ಳಲು ಸಾಧ್ಯ​ವಿದೆ ಎಂದೇ ಹೇಳು​ತ್ತ​ವೆ.