Asianet Suvarna News Asianet Suvarna News

ರಾಜ್ಯ ಕಾಂಗ್ರೆಸ್‌ ಅತೃಪ್ತಿ ಸ್ಫೋಟ?: ಮುಂಬೈಗೆ ಹೊರಟ 10 ಶಾಸಕರು!

ರಾಜ್ಯ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುವ ರಾಜ​ಕೀಯ ಕ್ಷಿಪ್ರ​ಕ್ರಾಂತಿಯ ಬೆಳ​ವ​ಣಿ​ಗೆ​ ತ್ವರಿ​ತ​ವಾ​ಗಿ ನಡೆ​ದಿದ್ದು, ಕಾಂಗ್ರೆಸ್‌ ಪಾಳೆಯ​ವನ್ನು ಮತ್ತೊಮ್ಮೆ ತಲ್ಲ​ಣ​ಗೊ​ಳಿ​ಸಿದೆ. ಸಂಪುಟ ವಿಸ್ತರಣೆ ಪದೇ ಪದೇ ಮುಂದೂಡುತ್ತಿರುವುದರಿಂದ ಬೇಸರಗೊಂಡ ಕಾಂಗ್ರೆಸ್‌ನ 10 ಮಂದಿ ಶಾಸಕರು ಮತ್ತೆ ಮುಂಬೈ ಹಾದಿ ಹಿಡಿಯಲು ಸಜ್ಜಾಗಿದ್ದಾರೆ.

10 MLS s of congress leaders are on the way to mumbai coalition govt may in danger
Author
Bangalore, First Published Nov 30, 2018, 7:55 AM IST

ಬೆಂಗ​ಳೂರು[ನ.30]: ರಾಜ್ಯದ ಮೈತ್ರಿ ಸರ್ಕಾ​ರದ ಅಸ್ತಿ​ತ್ವಕ್ಕೆ ಧಕ್ಕೆ ತರು​ವಂತಹ ಮತ್ತೊಂದು ರಾಜ​ಕೀಯ ಕ್ಷಿಪ್ರ​ಕ್ರಾಂತಿಯ ಬೆಳ​ವ​ಣಿ​ಗೆ​ ತ್ವರಿ​ತ​ವಾ​ಗಿ ನಡೆ​ದಿದ್ದು, ಕಾಂಗ್ರೆಸ್‌ ಪಾಳೆಯ​ವನ್ನು ಮತ್ತೊಮ್ಮೆ ತಲ್ಲ​ಣ​ಗೊ​ಳಿ​ಸಿದೆ. ಸಚಿವ ಸಂಪುಟ ವಿಸ್ತ​ರಣೆ ವಿಳಂಬ ಹಾಗೂ ಸರ್ಕಾ​ರ​ದಲ್ಲಿ ಜೆಡಿ​ಎಸ್‌ ಅಧಿ​ಪ​ತ್ಯಕ್ಕೆ ಬೇಸತ್ತ ಕಾಂಗ್ರೆಸ್‌ ಶಾಸಕರೂ ಸೇರಿದಂತೆ ಸುಮಾರು 10 ಶಾಸ​ಕರು ಸಚಿವ ರಮೇಶ್‌ ಜಾರ​ಕಿ​ಹೊಳಿ ನೇತೃ​ತ್ವ​ದಲ್ಲಿ ಮತ್ತೆ ಮುಂಬೈಗೆ ಹಾರಲು ಸಜ್ಜಾ​ಗಿ​ದ್ದಾ​ರೆ ಎಂದು ಉನ್ನತ ಮೂಲ​ಗಳು ತಿಳಿ​ಸಿ​ವೆ.

ಎಲ್ಲಾ ಯೋಜ​ನೆ​ಯಂತೆ ನಡೆ​ದರೆ, ಶುಕ್ರ​ವಾರ ಸಂಜೆ ಮೂರ​ರಿಂದ ಆರು ಗಂಟೆಯ ವೇಳೆಗೆ ರಮೇಶ್‌ ಜಾರ​ಕಿ​ಹೊಳಿ ನೇತೃ​ತ್ವದಲ್ಲಿ 10 ಮಂದಿ ಶಾಸ​ಕರು ಮುಂಬೈ​ಗೆ ಹಾರ​ಲಿ​ದ್ದಾರೆ. ಮುಂಬೈಗೆ ಬರ​ಲಿ​ರುವ ಈ ಶಾಸ​ಕ​ರಿಗೆ ಆತಿಥ್ಯ ನೀಡಲು ಬೆಂಗ​ಳೂರು ನಗ​ರದ ಬಿಜೆ​ಪಿಯ ಪ್ರಭಾವಿ ಶಾಸ​ಕ​ರೊ​ಬ್ಬರ ನೇತೃ​ತ್ವದ ತಂಡ ಈಗಾ​ಗಲೇ ಮುಂಬೈ ತಲುಪಿದೆ. 10 ಮಂದಿ ಶಾಸ​ಕರ ಗುಂಪು ಮುಂಬೈ ತಲುಪಿ, ನಿಯೋ​ಜಿತ ಸ್ಥಳ ಸೇರಿದ ನಂತರ ಬಿಜೆಪಿ ಹೈಕ​ಮಾಂಡ್‌ ಇಡೀ ಕಾರ್ಯಾ​ಚ​ರ​ಣೆ​ಯನ್ನು ತನ್ನ ಕೈಗೆ ತೆಗೆ​ದು​ಕೊ​ಳ್ಳ​ಲಿದೆ ಎಂಬ ವರ್ತ​ಮಾನ ಬಂದಿದ್ದು, ಇದು ಕಾಂಗ್ರೆಸ್‌ ಪಾಳೆಯ​ವನ್ನೂ ತಲುಪಿದೆ.

ಇದ​ರಿಂದ ಗಾಬ​ರಿ​ಗೊಂಡಿ​ರುವ ಕಾಂಗ್ರೆಸ್‌ ನಾಯ​ಕ​ತ್ವವು ಶಾಸ​ಕ​ರು ಈ ಕ್ಷಿಪ್ರ ಕ್ರಾಂತಿಗೆ ಒಳ​ಗಾ​ಗ​ದಂತೆ ತಡೆ​ಯಲು ಹರಸಾಹಸ ನಡೆ​ಸ​ತೊ​ಡ​ಗಿ​ದೆ. ಅತ್ಯಂತ ಹಿರಿಯ ನಾಯ​ಕ​ರೊ​ಬ್ಬರು ನೀಡಿ​ರುವ ಮಾಹಿತಿ ಪ್ರಕಾರ ಸಚಿವ ರಮೇಶ್‌ ಜಾರ​ಕಿ​ಹೊಳಿ, ಶಾಸ​ಕ​ರಾದ ಶಿವ​ರಾಂ ಹೆಬ್ಬಾರ್‌, ಬಿ.ಕೆ.ಸಂಗ​ಮೇಶ್‌, ಯಶ​ವಂತ​ರಾ​ಯಗೌಡ ಪಾಟೀಲ್‌, ಬಿ.ಸಿ. ಪಾಟೀಲ್‌, ಆನಂದ್‌​ಸಿಂಗ್‌, ಡಾ. ಕೆ.ಸುಧಾ​ಕರ್‌, ಎಂ.ಟಿ.ಬಿ.ನಾಗ​ರಾಜ್‌, ನಾಗೇಶ್‌ (ಪಕ್ಷೇತರ) ಮತ್ತು ಗೌರಿಶಂಕರ್‌ (ಜೆಡಿಎಸ್‌) ಅವರು ಮುಂಬೈಗೆ ಹಾರಲಿರುವ ಶಾಸ​ಕ​ರು.

ಈ ಶಾಸ​ಕರ ಪೈಕಿ ಮಾಜಿ ಸಚಿವ ಚನ್ನಿಗಪ್ಪ ಪುತ್ರ ಗೌರಿಶಂಕರ್‌ ಅವ​ರೊ​ಬ್ಬ​ರನ್ನು ಹೊರ​ತು​ಪ​ಡಿಸಿ ಉಳಿ​ದ​ವ​ರೆ​ಲ್ಲರೂ ಬೆಂಗ​ಳೂ​ರಿ​ನಿಂದ ಮುಂಬೈಗೆ ತೆರ​ಳ​ಲಿ​ದ್ದರೆ, ಗೌರಿಶಂಕರ್‌ ಪ್ರಸ್ತುತ ಸಿಂಗಾ​ಪು​ರ​ದ​ಲ್ಲಿ​ದ್ದು ಅಲ್ಲಿಂದ ನೇರ​ವಾಗಿ ಮುಂಬೈಗೆ ಆಗ​ಮಿಸಿ ಈ ತಂಡ​ವನ್ನು ಸೇರಿ​ಕೊ​ಳ್ಳ​ಲಿ​ದ್ದಾ​ರೆ.

ಒಂದು ಬಾರಿ ಈ 10 ಶಾಸ​ಕ​ರನ್ನು ಮುಂಬೈಗೆ ಹಾರಿ​ಸಿ​ಕೊಂಡು ಹೋಗು​ವಲ್ಲಿ ಯಶ​ಸ್ವಿ​ಯಾ​ದ​ರೆ, ಅದರ ಬೆನ್ನ ಹಿಂದೆಯೇ ಇಬ್ಬರು ಪಕ್ಷೇ​ತ​ರರು ಕೂಡ ಈ ತಂಡ​ದಲ್ಲಿ ಸೇರ್ಪ​ಡೆ​ಯಾ​ಗು​ವರು. ಹೀಗೆ ಬಿಜೆಪಿ ನಾಯ​ಕರು 12 ಮಂದಿ ಶಾಸ​ಕ​ರನ್ನು ಒಟ್ಟುಗೂಡಿಸಿ ತೋರಿ​ಸಿ​ದರೆ, ಆಗ ಇನ್ನೂ ಬೇಲಿ ಮೇಲಿ​ರುವ ಕಾಂಗ್ರೆ​ಸ್‌ನ ಆರು ಮಂದಿ ಶಾಸ​ಕರು ಈ ಗುಂಪಿ​ನತ್ತ ಸೇರಲಿದ್ದಾರೆ. ಆ ಮೂಲಕ ಒಟ್ಟು 18 ಮಂದಿ ಶಾಸ​ಕ​ರನ್ನು ಒಗ್ಗೂ​ಡಿಸಿ ಸರ್ಕಾ​ರ​ವನ್ನು ಅಲ್ಪ​ಮ​ತಕ್ಕೆ ತಂದು ಕೆಡ​ವಿಹಾ​ಕು​ವುದು ಬಿಜೆ​ಪಿಯ ಯೋಜನೆ ಎಂಬ ಮಾಹಿತಿ ಕಾಂಗ್ರೆ​ಸ್‌ ನಾಯ​ಕ​ರಿಗೆ ಲಭ್ಯ​ವಾ​ಗಿ​ದೆ.

ಈ ಎಲ್ಲಾ ಬೆಳ​ವ​ಣಿ​ಗೆ​ಗಳನ್ನು ಭಾನು​ವಾ​ರ​ದೊ​ಳಗೆ ಪೂರ್ಣ​ಗೊ​ಳಿಸುವ ಉಮೇದು ಬಿಜೆಪಿ ನಾಯ​ಕ​ರಿಗೆ ಇದ್ದಂತಿದೆ. ಕಾಂಗ್ರೆಸ್‌ ನಾಯ​ಕ​ರಿಗೆ ಲಭ್ಯ​ವಾ​ಗಿ​ರುವ ಮಾಹಿತಿ ಪ್ರಕಾರ ಬಿಜೆ​ಪಿಯ ಹಿರಿಯ ನಾಯ​ಕ​ರೊ​ಬ್ಬರ ಪುತ್ರ ಕಳೆದ ಎರಡು ದಿನ​ಗ​ಳಿಂದ ದೆಹ​ಲಿ​ಯಲ್ಲಿ ಬೀಡು ಬಿಟ್ಟು ಈ ಯೋಜ​ನೆಯ ವಿವ​ರ​ವನ್ನು ಬಿಜೆಪಿ ಹೈಕಮಾಂಡ್‌ಗೆ ಸಾದ್ಯಂತ​ವಾಗಿ ತಿಳಿಸಿ ಒಪ್ಪಿಗೆ ಪಡೆ​ದು​ಕೊಂಡಿ​ದ್ದಾರೆ. ಹೈಕ​ಮಾಂಡ್‌ ಒಪ್ಪಿಗೆ ನೀಡಿದ ಬೆನ್ನಲ್ಲಿ ಶುಕ್ರ​ವಾ​ರ​ದಿಂದ ಶಾಸ​ಕ​ರನ್ನು ಮುಂಬೈಗೆ ಕರೆದೊ​ಯ್ಯುವ ಕಾರ್ಯಾ​ಚ​ರ​ಣೆ ಆರಂಭ​ವಾ​ಗ​ಲಿದೆ ಎಂಬ ಮಾಹಿತಿ ಬಂದಿದೆ.

ಹೀಗೆ ಬಿಜೆಪಿ ಅಣತಿ ಮೇರೆಗೆ ಆ ಪಕ್ಷ​ದತ್ತ ಮುಖ ಮಾಡ​ಲಿ​ರುವ ಈ 18 ಮಂದಿಯ ಪೈಕಿ 10 ಮಂದಿ​ಗೆ ಸಚಿವ ಸ್ಥಾನ ನೀಡುವ ಹಾಗೂ ಉಳಿದ ಎಂಟು ಮಂದಿಗೆ ಸಚಿವ ಸಂಪುಟ ದರ್ಜೆಯ ನಿಗಮ ಮಂಡಳಿ ನೀಡುವ ಭರ​ವ​ಸೆ​ಯನ್ನು ನೀಡ​ಲಾ​ಗಿದೆ ಎಂದು ತಿಳಿ​ದು​ಬಂದಿ​ದೆ.

Follow Us:
Download App:
  • android
  • ios