Asianet Suvarna News Asianet Suvarna News

Congress guarantee: ಆನ್‌ಲೈನ್ ನೋಂದಣಿ ಅರ್ಜಿಯಲ್ಲಿ ದ.ಕ ಫಸ್ಟ್, ವೈರಲ್ ಪೋಸ್ಟ್ ಸತ್ಯಾಸತ್ಯತೆ ಏನು?

ಕಾಂಗ್ರೆಸ್ ಗ್ಯಾರಂಟಿಗಾಗಿ ಅರ್ಜಿ ಸಲ್ಲಿಕೆಯಲ್ಲಿ ಇಡೀ ರಾಜ್ಯಕ್ಕೆ ಮಂಗಳೂರು ಪ್ರಥಮ ಎಂಬ ಪೋಸ್ಟ್ ಒಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಕರಾವಳಿಯಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ವೈರಲ್ ಪೋಸ್ಟ್ ಸತ್ಯಾಸತ್ಯತೆ ಏನು?  ವಿವರ ಇಲ್ಲಿದೆ.

Congress guarantee scheme: Dakshina Kannada First in Online Registrations is it true? rav
Author
First Published Jun 30, 2023, 12:31 PM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು ಜೂ.30: ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಬಳಿಕ ಇದೀಗ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿದೆ. ಈ ಮಧ್ಯೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಚಾಲ್ತಿಯಲ್ಲಿದ್ದು, ಉಳಿದ ಯೋಜನೆಗಳ ಅರ್ಜಿ ಸಲ್ಲಿಕೆ ಆರಂಭವಾಗಿಲ್ಲ‌. ಈ ನಡುವೆ ಕಾಂಗ್ರೆಸ್ ಗ್ಯಾರಂಟಿಗಾಗಿ ಅರ್ಜಿ ಸಲ್ಲಿಕೆಯಲ್ಲಿ ಇಡೀ ರಾಜ್ಯಕ್ಕೆ ಮಂಗಳೂರು ಪ್ರಥಮ ಎಂಬ ಪೋಸ್ಟ್ ಒಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಕರಾವಳಿಯಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.

ಇಡೀ ರಾಜ್ಯದಲ್ಲಿ ಕಾಂಗ್ರೆಸ್(Karnataka congress) ಭರ್ಜರಿಯಾಗಿ ಗೆದ್ದಿದ್ದರೂ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ಆದರೆ ಇದೀಗ ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಜನರು ಮುಗಿ ಬಿದ್ದಿದ್ದಾರೆ ಎಂಬ ಪೋಸ್ಟ್ ಗಳನ್ನು ವೈರಲ್ ಮಾಡಲಾಗ್ತಿದೆ. ಇದರಲ್ಲಿ ಕಾಂಗ್ರೆಸ್ ಗ್ಯಾರಂಟಿ(Congress guaranteee)ಗಾಗಿ ಅರ್ಜಿ ಸಲ್ಲಿಕೆಯಲ್ಲಿ ಮಂಗಳೂರು ಪ್ರಥಮ, ಉಡುಪಿ ದ್ವಿತೀಯ ಹಾಗೂ ತುಮಕೂರು ತೃತೀಯ ಎಂದು ಪೋಸ್ಟರ್ ಹರಿ ಬಿಡಲಾಗಿದೆ. ಆದರೆ ಇದಕ್ಕೆ ಯಾವುದೇ ದಾಖಲೆ ಇಲ್ಲವಾದರೂ ಕರಾವಳಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಾಮಾಜಿಕ ತಾಣಗಳಲ್ಲಿ ಗುದ್ದಾಟಕ್ಕೆ ಕಾರಣವಾಗಿದೆ.

 

ದಕ್ಷಿಣ ಕನ್ನಡ: ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಗಿಲನ್‌ ಅಧಿಕಾರ ಸ್ವೀಕಾರ

ಅಸಲಿಗೆ ಈ ಪೋಸ್ಟ್ ಹಿಂದಿನ ಸತ್ಯಾಸತ್ಯತೆ ಏನು?

ಇನ್ನು ಈ ಪೋಸ್ಟ್ ವೈರಲ್(Viral post) ಬೆನ್ನಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಂಗ್ರಹಿಸಿದಾಗ ನಿಖರ ಅಂಕಿಅಂಶ ಲಭ್ಯವಾಗಿದೆ. ಈ ಮಾಹಿತಿ ಪ್ರಕಾರ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ(Gruhajyoti scheme)ಗೆ ಜೂನ್ 28ರ ಸಂಜೆ 4 ಗಂಟೆಯವರೆಗೆ 76,09,701 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ. ರಾಜ್ಯದ ಒಟ್ಟು 6 ವಿದ್ಯುತ್ ಕಂಪನಿಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 39,92,335 ಅರ್ಜಿ ಸಲ್ಲಿಕೆಗಾಗಿದ್ದು, ಸಿಇಎಸ್ಸಿ ವ್ಯಾಪ್ತಿಯಲ್ಲಿ 15,33,461 ಅರ್ಜಿ ಸಲ್ಲಿಕೆಯಾಗಿದೆ‌. 

ಜೆಸ್ಕಾಂ ವಿಭಾಗದಲ್ಲಿ 11,03,872 ಅರ್ಜಿ ಸಲ್ಲಿಕೆಯಾಗಿದೆ‌. ಹೆಸ್ಕಾಂ ವಿಭಾಗದಲ್ಲಿ 20,96,014 ಅರ್ಜಿ, ಎಚ್ಆರ್ ಇಸಿಎಸ್ ವಿಭಾಗದಲ್ಲಿ 46,501 ಅರ್ಜಿಗಳು ಹಾಗೂ ಮೆಸ್ಕಾಂ ವಿಭಾಗದಲ್ಲಿ 11,88,364 ಅರ್ಜಿಗಳು ಸಲ್ಲಿಕೆಯಾಗಿದೆ‌. 

ಇನ್ನು ಈ ಪೋಸ್ಟರ್ ವೈರಲ್ ಬೆನ್ನಲ್ಲೇ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ(Ashok rai MLA) ಹೇಳಿಕೆ ನೀಡಿದ್ದಾರೆ.  ಬಿಜೆಪಿ ಪಕ್ಷಕ್ಕೆ ಹೆಚ್ಚು ಮತ ಹಾಕಿದವರು ಇಲ್ಲಿಯವರು. ಹೀಗಿರುವಾಗ ಬಿಜೆಪಿಗೆ ಮತ ಹಾಕಿದ್ರೂ ಕಾಂಗ್ರೆಸ್ ನ‌ ಗ್ಯಾರಂಟಿಗಳನ್ನ ಕರಾವಳಿಗರು ಒಪ್ಪಿದ್ದಾರೆ. ಕಾಂಗ್ರೆಸ್ ನ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಬಿಜೆಪಿಯವರು ಗೊಂದಲ ಮೂಡಿಸಿದ್ರು. ಆದ್ರೆ ಇದೀಗ ದ.ಕ. ಮತ್ತು ಉಡುಪಿ‌ ಜಿಲ್ಲೆಯ ಜನರು ಕಾಂಗ್ರೆಸ್ ನ‌ ಗ್ಯಾರಂಟಿಯನ್ನ ಒಪ್ಪಿದ್ದಾರೆ. ಜೊತೆಗೆ ಬಿಜೆಪಿಯನ್ನ ಬಿಟ್ಟು ಕಾಂಗ್ರೆಸ್ ನ ಗ್ಯಾರಂಟಿಗಳ ಬಗ್ಗೆ ಒಲವು ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕರಾವಳಿಯ ಜನರು ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಆಶೀರ್ವಾದ ಮಾಡುತ್ತಾರೆ‌. ಭ್ರಷ್ಟಾಚಾರ ರಹಿತವಾದ ಕಾಂಗ್ರೆಸ್ ಸರ್ಕಾರವನ್ನ ಜನ ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಮೂರು ಗ್ಯಾರಂಟಿಗಳು ಚಾಲನೆಗೆ ಬರ್ತಾವೆ.

ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿ ದೋಖಾ: ಅರ್ಜಿ ಸಲ್ಲಿಕೆ ನೆಪದಲ್ಲಿ ಹಣ ವಸೂಲಿಗಿಳಿದ ಖಾಸಗಿ ಏಜೆನ್ಸಿ

ಈ ಗ್ಯಾರಂಟಿಗಳು ಬಂದ್ಮೇಲೆ 25 ವರ್ಷಗಳ ಕಾಲ ಕಾಂಗ್ರೆಸ್ ನ ಆಡಳಿತ ರಾಜ್ಯದಲ್ಲಿ ಇರ್ತಾವೆ. ದ.ಕ. ಜಿಲ್ಲೆಯಲ್ಲಿರುವ ಆರು ಶಾಸಕರು ಜನರ ದಾರಿ ತಪ್ಪಿಸಿ ಕಾಂಗ್ರೆಸ್ ಗೆ ಮತ ಹಾಕದಾಗೆ ಮಾಡಿದ್ರು. ಹಾಗೆಯೇ ಜನರು ಕೂಡ ಅವರಿಗೆ ಆಶೀರ್ವಾದ ಮಾಡಿದ್ರು. ಆದ್ರೆ ಈಗ ಎಲ್ಲಾ ಜನರು ಕಾಂಗ್ರೆಸ್ ಪಕ್ಷವನ್ನ ಒಪ್ಪಿಕೊಂಡಿದ್ದಾರೆ‌. ಕಾಂಗ್ರೆಸ್ ಗ್ಯಾರಂಟಿಗಳೇ ಇದಕ್ಕೆ ಸಾಕ್ಷಿ. ಕರಾವಳಿಗರೇ ಅತೀ ಹೆಚ್ಚು ಗ್ಯಾರಂಟಿಗಳ ನೋಂದಾವಣಿಯಲ್ಲಿ ಮುಂದೆ ಇರುವಂತದ್ದು. ಹಾಗಾಗಿ ಕಾಂಗ್ರೆಸ್ ನ ಆಡಳಿತದ ಬಗ್ಗೆ ಇಡೀ ದೇಶ ನೋಡುವಂತೆ ಕರ್ನಾಟಕ ಮಾಡಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನ ನೋಡಿ ಬಿಜೆಪಿಯವರು ಕೂಡ ಇದೀಗ ಗ್ಯಾರಂಟಿಗಳನ್ನ ಆರಂಭಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗ್ಯಾರಂಟಿ ಆಫರ್ ಗಳನ್ನ ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳನ್ನ ಕೊಡ್ತಾವೆ ಅಂತ ಬಿಜೆಪಿಯವ್ರು ಹೇಳಿದ್ರು‌. ಆದ್ರೆ ಕಾಂಗ್ರೆಸ್ ಸುಳ್ಳು ಹೇಳಿಲ್ಲ, ಅದನ್ನ ಕಾರ್ಯರೂಪಕ್ಕೆ ತರುವ ಮೂಲಕ ಮಾಡಿ ತೋರಿಸಿದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios