Asianet Suvarna News Asianet Suvarna News

ಹೋರಿ ನಡೆಯುವಾಗ ಬೀ* ಅಲುಗಾಡುತ್ತೆ ಅದ್ರೆ ಕೆಳಗೆ ಬೀಳಲ್ಲ; ಸರ್ಕಾರ ಬೀಳುತ್ತೆಂದ ಬಿಜೆಪಿಗರಿಗೆ ಕಾಂಗ್ರೆಸ್ ಮುಖಂಡ ತಿರುಗೇಟು!

ಕಾಂಗ್ರೆಸ್ ಸರ್ಕಾರ ತಾನಾಗೇ ಬೀಳುತ್ತೆ ಎಂಬ ಬಿಜೆಪಿಯವರ ಹೇಳಿಕೆ ಸನ್ನಿವೇಶವನ್ನು ಬೀ*ದ ಹೋರಿಗೆ ಹೋಲಿಕೆ ಮಾಡಿ ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿರುಗೇಟು ನೀಡಿದರು.

Congress government will fall issue Bagalkote district congress president outraged agains bjp rav
Author
First Published Nov 5, 2023, 2:56 PM IST

ಬಾಗಲಕೋಟೆ (ನ.5): ಕಾಂಗ್ರೆಸ್ ಸರ್ಕಾರ ತಾನಾಗೇ ಬೀಳುತ್ತೆ ಎಂಬ ಬಿಜೆಪಿಯವರ ಹೇಳಿಕೆ ಸನ್ನಿವೇಶವನ್ನು ಬೀ*ದ ಹೋರಿಗೆ ಹೋಲಿಕೆ ಮಾಡಿ ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿರುಗೇಟು ನೀಡಿದರು.

ಆಪರೇಷನ್ ಕಮಲ ಮಾಡುವ ಅಗತ್ಯವಿಲ್ಲ, ತಾನಾಗೇ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತೆ ಎನ್ನುತ್ತಿರುವ ಬಿಜೆಪಿ ನಾಯಕರು. ಆ ಕುರಿತು ಮಾದ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೀ*ದ ಹೋರಿ ನಡೆಯುವಾಗ ಅದರ ಬೀ* ಅಲುಗಾಡುತ್ತಿರುತ್ತೆ. ಹೋರಿ ಬೀ* ಅಲುಗಾಡುತ್ತೆ ಅಂದ್ರೆ ಅದು ಕೆಳಗೆ ಬೀಳಲ್ಲ. ಅದು ಹತ್ತು ಕಿ.ಮೀ ಹೋದರು ಹಾಗೆಯೇ ಅಲುಗಾಡುತ್ತಿರುತ್ತದೆ. ಅಲುಗಾಡುವ ಹೋರಿ ಬೀ* ತಿನ್ನಬೇಕು ಅಂತಾ 10 ನಾಯಿ ಬೆನ್ನು ಹತ್ತುತ್ತವೆ. ಅಲುಗಾಡುತ್ತೆ ಅಂದ್ರೆ ಬಿದ್ದೆ ಬೀಳುತ್ತೆ ನಾವು ತಿನಲೇಬೇಕು ಅಂತಾ ನಾಯಿಗಳು ಅನ್ಕೊಂತಾವೆ. ಬೀ* ಕೆಳಗೆ ಬೀಳಲ್ಲ, ಇವರು ಬೆನ್ನು ಹತ್ತುವುದನ್ನು ಬಿಡಲ್ಲ. ಬಿಜೆಪಿಗರ ಸದ್ಯದ ಪರಿಸ್ಥಿತಿ ಹಿಂಗಾಗಿದೆ ಎಂದು ವ್ಯಂಗ್ಯ ಮಾಡುವ ಮೂಲಕ ಟಾಂಗ್ ಕೊಟ್ಟ ನಂಜಯ್ಯನಮಠ.

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಪತನ: ಸಂಸದ ಬಿ.ವೈ.ರಾಘವೇಂದ್ರ

ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಈಗಾಗಲೇ ಸಿಎಂ ಸ್ಥಾನ ವಿಚಾರವಾಗಿ ಮೂರು ಬಣಗಳಾಗಿ ಆಂತರಿಕ ಕಚ್ಚಾಟ ಶುರುವಾಗಿದೆ. ಕೆಲವು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಬಿದ್ದೊಗುತ್ತೆ. ಈ ಸರ್ಕಾರ ಬಿಳಿಸಲು ಯಾವುದೇ ಬಿಜೆಪಿ ಆಪರೇಷನ್ ಬೇಕಿಲ್ಲ. ತಾನಾಗೆ ಬೀಳುತ್ತದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಅವರ ಹೇಳಿಕೆಯನ್ನು ಬೀ*ದ ಹೋರಿಗೆ ಹೋಲಿಕೆ ಮಾಡಿದ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ.

Follow Us:
Download App:
  • android
  • ios