ಅಭಿವೃದ್ಧಿ ಮಾಡಲು ಸರ್ಕಾರ ಹಣ ಕೊಡ್ತಿಲ್ಲ: ಕಾಂಗ್ರೆಸ್ ವಿರುದ್ದ ಶಾಸಕ ವೇದವ್ಯಾಸ ಕಾಮತ್ ಕಿಡಿ!

ಕರಾವಳಿಯ ಬಿಜೆಪಿ ಶಾಸಕರಿಗೆ ಆರು ತಿಂಗಳಲ್ಲಿ ಸರ್ಕಾರ ಅನುದಾನ ನೀಡಿಲ್ಲ.‌ ಕ್ಷೇತ್ರದ ಅಭಿವೃದ್ದಿಗೆ ಒಂದು ರೂಪಾಯಿಯು ಅನುದಾನ ಕೊಟ್ಟಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ. 

Congress goovernment not giving grant for development work BJP MLA Vedavyas kamat outraged rav

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ನ.3): ಕರಾವಳಿಯ ಬಿಜೆಪಿ ಶಾಸಕರಿಗೆ ಆರು ತಿಂಗಳಲ್ಲಿ ಸರ್ಕಾರ ಅನುದಾನ ನೀಡಿಲ್ಲ.‌ ಕ್ಷೇತ್ರದ ಅಭಿವೃದ್ದಿಗೆ ಒಂದು ರೂಪಾಯಿಯು ಅನುದಾನ ಕೊಟ್ಟಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ. 

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ದ ಆರೋಪಿಸಿದ ಶಾಸಕ ಕಾಮತ್, ಚುನಾವಣೆ ಹಿನ್ನೆಲೆಯಲ್ಲಿ ಗ್ಯಾರಂಟಿಗಳನ್ನು ನೀಡ್ತಿದ್ದಾರೆ.‌ ನೀವು ಒಂದು ರೂಪಾಯಿ ಕೊಡೋದು ಬೇಡ. ಆದ್ರೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಆದೇಶ ಆದ ಕಾಮಗಾರಿಯ ಹಣ ಕೊಡಿ.‌ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅರ್ಧಕ್ಕೆ ನಿಂತಿದೆ. ನಿಮಗೆ ಹೊಸ ಯೋಜನೆ ಕೊಡುವ ಯೋಗ್ಯತೆಯಿಲ್ಲ. ಆದ್ರೆ ನಮ್ಮ ಮುಖ್ಯಮಂತ್ರಿ ಇದ್ದ ಸಂದರ್ಭದ ಯೋಜನೆಯ ಹಣ ಕೊಡಿ. ಗುತ್ತಿಗೆದಾರರು ಹಣ ಬರೋದಿಲ್ಲ ಅಂತಾ ಹೇಳ್ತಿದ್ದಾರೆ. ಈಗಾಗಲೇ ಕೋಟಿಗಟ್ಟಲೇ ಹಣ ಹಾಕಿ ಕಾಮಗಾರಿ ಮಾಡಿದ್ದೇವೆ. ಹಣ ಬಾರದೆ ಕಾಮಗಾರಿ ಮುಂದುವರಿಸೋದು ಹೇಗೆ ಅಂತಿದ್ದಾರೆ. ಮಳೆ ಹಾನಿಯ 15 ಕೋಟಿ ಹಣ ಅರ್ಧಕ್ಕೆ ನಿಂತಿದೆ. ಕರಾವಳಿಯ ಬಿಜೆಪಿ ಶಾಸಕರು ತೊಂದರೆಗೆ ಒಳಗಾಗಿದ್ದಾರೆ.‌ ಅಭಿವೃದ್ಧಿ ಮಾಡಲು ಸರ್ಕಾರ ಹಣ ಕೊಡ್ತಿಲ್ಲ. ನಾವೇ ತಂದಂತಹ ಯೋಜನೆಯ ಹಣ ಬರೋದು ನಿಂತಿದೆ. ಕಾಮಗಾರಿ ಅರ್ಧಕ್ಕೆ ನಿಂತು ಜನರಿಗೆ ಸಮಸ್ಯೆ ಆಗ್ತಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬೇಡಿ.‌ ಜನರು ನಿತ್ಯ ಬೆಳಗ್ಗೆ ಮನೆಯ ಬಳಿ ಬಂದು ನಿಲ್ಲುತ್ತಾರೆ. ಹೊಸ ಯೋಜನೆ ನೀಡಲು ಸಾಧ್ಯ ಇಲ್ಲ‌ ಅಂದ್ರು ಪರ್ವಾಗಿಲ್ಲ. ಆದ್ರೆ ಆದೇಶ ಆದ ಕಾಮಗಾರಿಗಳ ಹಣ ನೀಡಿ. ಅನುದಾನ ನೀಡುವಂತೆ ಮುಂದಿನ ವಾರ ಮತ್ತೊಮ್ಮೆ ಹೋಗಿ ಮನವಿ‌ ಮಾಡ್ತೇನೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

 

ಮೀನುಗಾರರ ಯಾವ ಭರವಸೆ ರಾಹುಲ್‌ ಗಾಂಧಿ ಈಡೇರಿಸಿದ್ದಾರೆ? ವೇದವ್ಯಾಸ್ ಕಾಮತ್‌

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆಯಡಿಯಲ್ಲಿ 125 ಕೋಟಿ ಅನುದಾನವನ್ನು ತರಲಾಗಿತ್ತು. ಮಳೆ ಹಾನಿಯಿಂದ ಕ್ಷೇತ್ರದ ಅಲ್ಲಲ್ಲಿ ರಸ್ತೆ, ಡ್ರೈನೇಜ್ ನಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಮೂಲಭೂತ ಸೌಕರ್ಯ ಮರು ಕಲ್ಪಿಸಲು 20 ಕೋಟಿ ವಿಶೇಷ ಅನುದಾನವನ್ನು ತರಲಾಗಿತ್ತು. ಪ್ರಸ್ತುತ ಈ ಎಲ್ಲ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇಂದಿನ ಸರಕಾರ ಅನುದಾನಗಳನ್ನು ತಡೆಹಿಡಿದ ಪರಿಣಾಮ ಕ್ಷೇತ್ರದ ರಸ್ತೆಗಳ, ಚರಂಡಿಗಳ ಕಾಮಗಾರಿಗಳು ಅರ್ಧಕ್ಕೆ ನಿಂತು ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದಲ್ಲದೇ ನಮ್ಮ ಸರ್ಕಾರದ ಅವಧಿಯಲ್ಲಿ ಅಮೃತ ಯೋಜನೆ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರ ವತಿಯಿಂದ ಹಲವು ಅನುದಾನಗಳನ್ನು ತರಲಾಗಿತ್ತು. ಕುಡ್ಸೆಂಪ್ ಮೂಲಕ 200 ಕೋಟಿಗೂ ಹೆಚ್ಚು ಅನುದಾನ ತರಲಾಗಿದ್ದರೂ ಪ್ರಸ್ತುತ ಡ್ರೈನೇಜ್ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. 

ವೇದವ್ಯಾಸರು ಮಹಿಳೆಯರಿಗೆ ಬಿಗ್ ಸ್ಕ್ರೀನಲ್ಲಿ ಮಹಾಭಾರತ ತೋರಿಸಿದ್ರಾ!

ಈ ಬಗ್ಗೆ ಇಲಾಖೆಗೆ ಹಾಗೂ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಇನ್ನೂ ಸಹ ಯಾವುದೇ ಪ್ರಗತಿ ಕಂಡಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ 792 ಕೋಟಿ ರೂಪಾಯಿಯ ಕುಡಿಯುವ ನೀರಿನ ಜಲಸಿರಿ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದರು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳಾದರೂ ಕಾಮಗಾರಿಗೆ ಅಗತ್ಯವಿರುವ ಅನುದಾನಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆಯೇ ದೊರಕುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಯಾವುದೇ ಹೊಸ ಕಾಮಗಾರಿಗೆ ಅನುದಾನ ಸಿಗುತ್ತಿಲ್ಲ. ಈ ಹಿಂದಿನ ಕಾಮಗಾರಿಗಳಿಗೆ ಈಗಾಗಲೇ ನಿಯೋಜನೆಗೊಂಡ ಅನುದಾನವನ್ನೂ ಸಹ ಬಿಡುಗಡೆ ಮಾಡುತ್ತಿಲ್ಲ. ಹೀಗಾದರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ.? ಎಂದು ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios