Asianet Suvarna News Asianet Suvarna News

Bitcoin : ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹ

*   ಆರೋಪಪಟ್ಟಿ, ಆರೋಪಿಗಳ ಹೆಸರು ಬಹಿರಂಗಕ್ಕೆ ಸಿದ್ದು, ಡಿಕೆಶಿ ಒತ್ತಾಯ
*   ಅಸೆಂಬ್ಲಿಯಲ್ಲಿ ಪ್ರಸ್ತಾಪ: ಸಿದ್ದರಾಮಯ್ಯ
*   ಆರೋಪಿಸಿದವರೇ ದಾಖಲೆ ನೀಡಲಿ: CM ಬೊಮ್ಮಾಯಿ

Congress Demands Judicial Probe about Bit Coin Scam in Karnataka grg
Author
Bengaluru, First Published Nov 4, 2021, 7:05 AM IST
  • Facebook
  • Twitter
  • Whatsapp

ಬೆಂಗಳೂರು(ನ.04):  ರಾಜ್ಯ ಸರ್ಕಾರ(Government of Karnataka) ಬಿಟ್‌ ಕಾಯಿನ್‌ನಂತಹ ಅಂತರಾಷ್ಟ್ರೀಯ(Ineternational) ಮಟ್ಟದ ದೊಡ್ಡ ಹಗರಣವನ್ನು(Scam) ಮುಚ್ಚಿ ಹಾಕಲು ಹೊರಟಿದೆ. ಆರೋಪಟ್ಟಿ ಹಾಗೂ ಆರೋಪಿಗಳ ಹೆಸರನ್ನು ಸರ್ಕಾರ ಬಹಿರಂಗಪಡಿಸಬೇಕು. ಜತೆಗೆ ಪಾರದರ್ಶಕ ತನಿಖೆಗೆ ಸುಪ್ರೀಂ ಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್‌(Congress) ಒತ್ತಾಯ ಮಾಡಿದೆ.

ಈ ಬಗ್ಗೆ ಬುಧವಾರ ಪ್ರತ್ಯೇಕ ಸುದ್ದಿಗೋಷ್ಠಿಗಳಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಸರ್ಕಾರ ಮೊದಲು ಈವರೆಗೆ ನಡೆಸಿರುವ ತನಿಖೆಯಿಂದ(Investigation) ಹೊರ ಬಂದಿರುವ ಅಂಶಗಳನ್ನು ಬಹಿರಂಗಪಡಿಸಲಿ. ಜತೆಗೆ ತಾವು ಜಾರಿ ನಿರ್ದೇಶನಾಲಯ(Enforcement Directorate) ತನಿಖೆಗೆ ಮನವಿ ಮಾಡಿರುವ ಪತ್ರವನ್ನು ಮುಖ್ಯಮಂತ್ರಿಗಳು(Chief Minister) ಬಹಿರಂಗಪಡಿಸಲಿ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಸ್ವತಃ ಪ್ರಧಾನಮಂತ್ರಿಗಳೇ(Prime Minister) ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಪಾರದರ್ಶಕ ತನಿಖೆಗಾಗಿ ಸುಪ್ರೀಂ ಕೋರ್ಟ್‌(Supreme Court) ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ(Judicial Investigation) ನಡೆಸಲಿ ಎಂದು ಒತ್ತಾಯಿಸಿದರು. ಇದೇ ವೇಳೆ ಈ ಬಿಟ್‌ ಕಾಯಿನ್‌ ವಿಚಾರವನ್ನು ಮುಂದಿನ ಅಧಿವೇಶನದಲ್ಲೂ ಪ್ರಸ್ತಾಪ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಡ್ರಗ್‌ ಮಾಫಿಯಾ: 9 ಕೋಟಿ ಬಿಟ್‌ ಕಾಯಿನ್‌ ಸಂಪಾದಿಸಿದ್ದ ಹ್ಯಾಕರ್‌ ಶ್ರೀಕಿ

ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಬಿಟ್‌ ಕಾಯಿನ್‌(Bit Coin) ವಿಚಾರವಾಗಿ ಸರ್ಕಾರ ಗೊಂದಲದ ಹೇಳಿಕೆ ನೀಡುತ್ತಿದೆ. ರಾಜ್ಯ ಸರ್ಕಾರ ಈ ಪ್ರಕರಣ ಕುರಿತು ಆರೋಪಪಟ್ಟಿ ಸಲ್ಲಿಸಿರುವುದಾಗಿ ಹೇಳಿದೆ. ಆರೋಪ ಪಟ್ಟಿಸಲ್ಲಿಸಿದ್ದರೆ, ಈ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯಕ್ಕೆ (ED) ನೀಡುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರ ಮೊದಲು ಬಿಟ್‌ ಕಾಯಿನ್‌ ಪ್ರಕರಣದ ಬಗ್ಗೆ ಕಲೆ ಹಾಕಿರುವ ವಿವರಗಳನ್ನು ಬಹಿರಂಗಪಡಿಸಲಿ. ಜನರಿಗೆ ವಿಷಯ ಗೊತ್ತಾಗಬೇಕು. ಇಲ್ಲದಿದ್ದರೆ ಅಧಿವೇಶನದಲ್ಲೂ(Session) ಈ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂದು ಎಚ್ಚರಿಸಿದರು.

ಶ್ರೀಕಿಯನ್ನು ಬಂಧಿಸಿದ್ದು ಯಾರು? ರಾಜ್ಯ ಸರ್ಕಾರ ಈವರೆಗೆ ಕಲೆ ಹಾಕಿರುವ ಮಾಹಿತಿ ಏನು ಎಂಬುದು ಬಹಿರಂಗಪಡಿಸಲಿ. ಸತ್ಯವನ್ನು ಏಕೆ ಮುಚ್ಚಿಡುತ್ತಿದ್ದಾರೆ? ಇಡಿ ತನಿಖೆಗೆ ವಹಿಸಲು ಯಾವ ಆಧಾರದ ಮೇಲೆ ಪತ್ರ ಬರೆದಿದ್ದಾರೆ ಇವೆಲ್ಲವೂ ಜನರಿಗೆ ಗೊತ್ತಾಗಬೇಕಲ್ಲವೇ ಎಂದು ಪ್ರಶ್ನಿಸಿದರು.

ಇನ್ನು ರಾಜ್ಯ ಸರ್ಕಾರ 15 ದಿನಗಳಲ್ಲಿ ಈ ಪ್ರಕರಣದ ತನಿಖೆ ಮಾಡುವಂತೆ ತನಿಖಾ ಸಂಸ್ಥೆಗೆ ಪತ್ರ ಬರೆದಿರುವುದಾಗಿ ಹೇಳಿದೆ. ಮುಖ್ಯಮಂತ್ರಿಗಳು ದಾಖಲೆ ಬಿಡುಗಡೆ ಮಾಡಲಿ. ಜತೆಗೆ ಈವರೆಗೆ ಯಾವ ತನಿಖಾ ಸಂಸ್ಥೆ ತನಿಖೆ ಮಾಡಿತ್ತು, ತನಿಖೆ ಯಾವ ಹಂತದಲ್ಲಿ ಇತ್ತು, ಯಾರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಹಾಗೂ ಎಷ್ಟುಜನರನ್ನು ಬಂಧಿಸಲಾಗಿತ್ತು ಎಂಬ ಬಗ್ಗೆ ದಾಖಲೆ ನೀಡಲಿ. ಸರ್ಕಾರದ ನಡೆ ನೋಡುತ್ತಿದ್ದರೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದು, ಪಾರದರ್ಶಕ ತನಿಖೆಗೆ ಸುಪ್ರೀಂ ಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲಿ ಎಂದು ಒತ್ತಾಯ ಮಾಡಿದರು.

ಹುಬ್ಬಳ್ಳಿ: ಬಿಟ್ ‌ಕಾಯಿನ್‌‌ ನೀಡೋದಾಗಿ 45 ಲಕ್ಷ ವಂಚನೆ

2018ರಲ್ಲಿ ಈ ಪ್ರಕರಣ ದಾಖಲಾಗಿದ್ದು ಆಗ ಶಿವಕುಮಾರ್‌ ಅವರು ಸಚಿವರಾಗಿದ್ದರು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ನನ್ನ ಹೆಸರನ್ನೂ ಸೇರಿಸಿ ತನಿಖೆಗೆ ಆದೇಶಿಸಲಿ. ನಾನು ತಪ್ಪು ಮಾಡಿದ್ದರೆ ನನ್ನ ತನಿಖೆಯೂ ಆಗಬೇಕಲ್ಲವೇ? ಎಂದು ಹೇಳಿದರು.

ಅಸೆಂಬ್ಲಿಯಲ್ಲಿ ಪ್ರಸ್ತಾಪ: ಸಿದ್ದರಾಮಯ್ಯ

ತಮ್ಮ ನಿವಾಸದ ಬಳಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಹಾಗೂ ಬಿಜೆಪಿಯವರು ಬಿಟ್‌ಕಾಯಿನ್‌ ಪ್ರಕರಣದಿಂದ ಗಮನ ಬೇರೆಡೆ ಸೆಳೆಯಲು ನನ್ನ ವಿರುದ್ಧ ದಲಿತ(Dalit) ವಿರೋಧಿ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮೊದಲು ಬಿಟ್‌ ಕಾಯಿನ್‌ ಪ್ರಕರಣದ ಬಗ್ಗೆ ಕಲೆ ಹಾಕಿರುವ ವಿವರಗಳನ್ನು ಬಹಿರಂಗಪಡಿಸಲಿ. ಜನರಿಗೆ ವಿಷಯ ಗೊತ್ತಾಗಬೇಕು. ಇಲ್ಲದಿದ್ದರೆ ಅಧಿವೇಶನದಲ್ಲೂ ಈ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂದು ಎಚ್ಚರಿಸಿದರು.

ಆರೋಪಿಸಿದವರೇ ದಾಖಲೆ ನೀಡಲಿ: ಬೊಮ್ಮಾಯಿ

ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದವರು ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ಬುಧವಾರ ಹುಬ್ಬಳ್ಳಿಯಲ್ಲಿ(Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್‌ ಕಾಯಿನ್‌ ಪ್ರಕರಣದ ತನಿಖೆ ನಾವೇ ಗಂಭೀರವಾಗಿ ತೆಗೆದುಕೊಂಡಿದ್ದೆವು. ನಾವೇ ಅವರನ್ನು ಬಂಧಿಸಿ, ಕೇಸ್‌ ದಾಖಲಿಸಿದ್ದೇವೆ. ವಿಚಾರಣೆ ನಡೆಸಿ ಚಾರ್ಜ್‌ಶೀಟ್‌(Chargesheet) ಸಲ್ಲಿಸಿದ್ದೇವೆ ಎಂದರು. ವಿಚಾರಣೆ ವೇಳೆ ಇಡಿಗೆ ಶಿಫಾರಸು ಮಾಡಬೇಕು ಅಂದಿದ್ದಕ್ಕೆ ‘ಇಡಿ’ಗೆ ಶಿಫಾರಸು ಮಾಡಿದ್ದೇವೆ. ಇದರಲ್ಲಿ ಅಂತಾರಾಷ್ಟ್ರೀಯ ವಹಿವಾಟು ನಡೆದಿರುವುದರಿಂದ ಸಿಬಿಐ ಇಂಟರ್‌ಪೋಲ್‌ಗೆ ವಹಿಸಬೇಕಾಗಿ ಬಂದಿದೆ. ಸಿಬಿಐ(CBI) ತನಿಖೆಗೆ ವಹಿಸಿದ್ದೇವೆ ಎಂದು ತಿಳಿಸಿದರು.
 

Follow Us:
Download App:
  • android
  • ios