*  ನೀರು, ಹಾಲು, ವಿದ್ಯುತ್‌ ದರ ಏರಿಕೆ ಕೈಬಿಡಿ*  ದರ ಏರಿಕೆಗೆ ಮುನ್ನ ಆದಾಯ ಹೆಚ್ಚಿಸಿ*  ಅವಸರದ ನಿರ್ಧಾರ ಇಲ್ಲ: ಬೊಮ್ಮಾಯಿ 

ಬೆಂಗಳೂರು(ಜ.23):  ವಿದ್ಯುತ್‌(Electricity), ಹಾಲು(Milk), ಕುಡಿಯುವ ನೀರಿನ(Drinking water) ದರ ಏರಿಕೆ ಕುರಿತ ರಾಜ್ಯ ಸರ್ಕಾರದ(Government of Karnataka) ಪ್ರಸ್ತಾಪ ಮತ್ತು ಹೋಟೆಲ್‌, ಸಿನೆಮಾ ಮಂದಿರಗಳಲ್ಲಿ ಶೇ.50ರ ಮಿತಿಗೆ ರಾಜ್ಯ ಕಾಂಗ್ರೆಸ್‌(Congress) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪ ಖಂಡನಾರ್ಹ. ಹೀಗಾಗಿ ಸರ್ಕಾರ ಕೂಡಲೇ ಈ ಪ್ರಸ್ತಾಪ ಕೈಬಿಡಬೇಕು. ಜೊತೆಗೆ, ವ್ಯಾಪಾರಿಗಳ ಜೀವನ ನಿರ್ವಹಣೆಗೆ ಸಮಸ್ಯೆಯಾಗಿರುವ ಶೇ.50ರ ಮಿತಿ ರದ್ದುಪಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈಗಾಗಲೇ ಕೊರೋನಾದಿಂದ(Coronavirus) ಜನರ ನೀವನ ನಿರ್ವಹಣೆ ಕಷ್ಟವಾಗಿದೆ. ಸಣ್ಣ ಪುಟ್ಟ ಆದಾಯ ಇರುವವರಿಗೆ ಜೀವನ ನಡೆಸುವುದು ತೀವ್ರ ಕಷ್ಟವಾಗಿದೆ. ಈ ಹಂತದಲ್ಲಿ ವಿದ್ಯುತ್‌ ದರ ಏರಿಕೆ ಅನಿವಾರ್ಯ ಎಂದು ಇಂಧನ ಸಚಿವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್‌ ದರ, ಕುಡಿಯುವ ನೀರಿನ ದರ ಏರಿಕೆ ಮಾಡಬಾರದು ಎಂದು ಒತ್ತಾಯಿಸಿದರು.

ಎಸ್‌ ಟಿ ಸೋಮಶೇಖರ್ ಬಾವುಟ ಹಾರಿಸುವ ಮಂತ್ರಿ: ಶಾಸಕ ಎಚ್ ಪಿ ಮಂಜುನಾಥ್!

ಆದಾಯ ಖಾತರಿ ನೀಡಲಿ:

ದರ ಏರಿಕೆಗಳಿಗೆ ಮುಂದಾಗುವ ಮೊದಲು ಜನ ಸಾಮಾನ್ಯರ ಆದಾಯ ಖಾತರಿ ಮತ್ತು ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ. ಜನರಿಗೆ ಆದಾಯ ಬಂದ ಮೇಲೆ ವಿದ್ಯುತ್‌ ದರ ಏರಿಕೆ ಮಾಡಲಿ. ಈಗ ಲಾಕ್‌ಡೌನ್‌, ಸೀಲ್‌ಡೌನ್‌ ನಿರ್ಬಂಧ ತೆಗೆದಿದ್ದಾರೆ. ಸೋಂಕು ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿದ್ದರು. ಸೋಂಕು ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ. ರಾಜಕೀಯ(Politics) ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ. ಹಾಲಿನ ದರ, ವಿದ್ಯುತ್‌ ದರ ಹೆಚ್ಚಿಸುತ್ತಿದ್ದಾರೆ. ರೈತರಿಗಾಗಿ ಹಾಲಿನ ದರ ಹೆಚ್ಚಿಸುತ್ತಿರುವುದಾಗಿ ಸಮರ್ಥನೆ ನೀಡುತ್ತಿದ್ದಾರೆ. ರೈತರಿಗೆ ತೊಂದರೆ ಆದಾಗ ಅವನ ರಕ್ಷಣೆಗೆ ಸರ್ಕಾರ ಏಕೆ ನಿಲ್ಲಲಿಲ್ಲ? ಬೆಳೆಗಳ ಬೆಂಬಲ ಬೆಲೆ ದರ ಏಕೆ ಹೆಚ್ಚಿಸಲಿಲ್ಲ? ಏರಿಕೆಯಾಗಿರುವ ಕಬ್ಬಿಣ, ಸೀಮೆಂಟ್‌ ದರ ಕಡಿಮೆ ಮಾಡಲು ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ನಿರ್ಬಂಧ ತೆಗೆಯಲಿ-ಡಿಕೆಶಿ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸರ್ಕಾರ ಪ್ರಸ್ತುತ ವಾರಾಂತ್ಯದ ಕರ್ಫ್ಯೂ(Weekend Curfew) ಹಿಂಪಡೆದಿದೆ. ಇದರ ಜೊತೆಗೆ ರಾತ್ರಿ ಕರ್ಫ್ಯೂವನ್ನೂ(Night Curfew) ಹಿಂಪಡೆಯಬೇಕು. ಹೋಟೆಲ್‌, ಸಿನಿಮಾ ಮಂದಿರ ಮತ್ತಿತರ ಕಡೆ ವಿಧಿಸಿರುವ ಶೇ.50ರಷ್ಟು ಸೀಟುಗಳ ಮಿತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ನಾನು ಹಿಂದೆಯೇ ಹೇಳಿದ್ದೆ. ಅನಗತ್ಯವಾಗಿ ಸೋಂಕು ಹೆಚ್ಚಾಗದಿದ್ದರೂ ಸುಳ್ಳು ಲೆಕ್ಕ ತೋರಿಸಿ ನಮ್ಮ ಪಾದಯಾತ್ರೆ ತಡೆಯಲು ರಾತ್ರಿ ಕರ್ಫ್ಯೂ. ವಾರಾಂತ್ಯದ ಕರ್ಫ್ಯೂ, ಶೇ.50ರಷ್ಟು ಮಿತಿ ಸೇರಿದಂತೆ ಹಲವು ನಿರ್ಬಂಧಗಳನ್ನು ಜಾರಿಗೆ ತಂದರು.

ಸರ್ಕಾರದ ಪ್ರಕಾರ ವಿಮಾನಗಳಲ್ಲಿ, ಬಸ್ಸು, ರೈಲು, ಮೆಟ್ರೋಗಳಲ್ಲಿ ಶೇ.100ರಷ್ಟು ಜನ ಕೂರಬಹುದು. ಆದರೆ ಹೋಟೆಲ್‌, ಚಿತ್ರಮಂದಿರ ಮತ್ತಿತರ ಕಡೆ ಮಾತ್ರ ಶೇ.50ರಷ್ಟು ನಿಯಮ ಪಾಲನೆ ಮಾಡಬೇಕು. ಸರ್ಕಾರ ಏಕೆ ಈ ರೀತಿ ಜನ ವಿರೋಧಿಯಾಗಿ ಯೋಚಿಸುತ್ತಿದೆ. ತೆಲಂಗಾಣ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಇಲ್ಲದ ನಿಯಮ ನಮಗೆ ಏಕೆ ಎಂದು ತರಾಟೆಗೆ ತೆಗೆದುಕೊಂಡರು.

PSI Recruitment ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕೈ ಶಾಸಕರು

ಹೋಟೆಲ್‌, ಥಿಯೇಟರ್‌ಗಳಲ್ಲಿನ 50% ಮಿತಿ ತೆಗೆಯಿರಿ: ಸರ್ಕಾರಕ್ಕೆ ಕಾಂಗ್ರೆಸ್‌ ಆಗ್ರಹ

ರೈತರಿಗಾಗಿ ಹಾಲಿನ ದರ ಹೆಚ್ಚಿಸುತ್ತಿರುವುದಾಗಿ ಸಮರ್ಥನೆ ನೀಡುತ್ತಿದ್ದಾರೆ. ರೈತರಿಗೆ ತೊಂದರೆ ಆದಾಗ ಅವನ ರಕ್ಷಣೆಗೆ ಸರ್ಕಾರ ಏಕೆ ನಿಲ್ಲಲಿಲ್ಲ? ಬೆಳೆಗಳ ಬೆಂಬಲ ಬೆಲೆ ದರ ಏಕೆ ಹೆಚ್ಚಿಸಲಿಲ್ಲ? ಅಂತ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅಂತ ಪ್ರಶ್ನಿಸಿದ್ದಾರೆ. 

ಅವಸರದ ನಿರ್ಧಾರ ಇಲ್ಲ: ಬೊಮ್ಮಾಯಿ

ನೀರು, ಹಾಲು ಮತ್ತು ವಿದ್ಯುತ್‌ ದರ ಏರಿಕೆ ಕುರಿತು ಸಲ್ಲಿಕೆಯಾಗಿರುವ ಪ್ರಸ್ತಾವನೆಗಳ ಬಗ್ಗೆ ಯಾವುದೇ ತರಹದ ಅವಸರದ ತೀರ್ಮಾನಗಳನ್ನು ಕೈಗೊಳ್ಳುವುದಿಲ್ಲ. ಎಲ್ಲಾ ಆಯಾಮಗಳಲ್ಲಿ ದರ ಏರಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ9(Basavaraj Bommai) ತಿಳಿಸಿದ್ದಾರೆ.