ಬೆಂಗಳೂರು[ಜ.02]: ಈಗಾಗಲೇ ರಾಜ್ಯದಾದ್ಯಂತ ಚಳಿ ಗಣನೀಯವಾಗಿ ಹೆಚ್ಚಾಗಿದ್ದು ಜನರು ತತ್ತರಿಸಿ ಹೋಗಿದ್ದಾರೆ. ಆದರೀಗ ಇನ್ನೂ ಒಂದು ವಾರ ಈ ಮೈ ಕೊರೆಯುವ ಚಳಿ ಮುಂದುವರೆಯಲಿದೆ ಎಂದು ಸ್ಕೈಮೇಟ್ ಮಾಹಿತಿ ನೀಡಿದೆ

ರಾಜ್ಯದ ಧಾರವಾಡ ಜಿಲ್ಲೆಯಲ್ಲಿ ಗರ್ಗ್ ನಲ್ಲಿ ಅತ್ಯಂತ ಕಡಿಮೆ ಅಂದರೆ 4.5 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ 9-11 ಡಿಗ್ರಿ ತಾಪಮಾನ ಇದೆ. ಇದು ಕಳೆದ ಎರಡು ವರ್ಷಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಉಷ್ಣಾಂಶ ಎನ್ನಲಾಗಿದೆ. ಉತ್ತರ ಭಾಗದಿಂದ ಬೀಸುತ್ತಿರುವ ಗಾಳಿಯಿಂದಾಗಿ ರಾಜ್ಯದಲ್ಲಿ ಚಳಿ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದ್ದು,  ಈಜನವರಿ 10 ರವರೆಗೂ ಚಳಿಯ ತೀವ್ರತೆ ಇದೇ ರೀತಿ ಮುಂದುವರೆಯಲಿದೆ ಎನ್ನಲಾಗಿದೆ.

ಈಗಾಗಲೇ ಚಳಿಯ ತೀವ್ರತೆಯಿಂದ ಜನರಲ್ಲಿ ನಡುಕ ಆರಂಭವಾಗಿದ್ದು, ಜಾಕೆಟ್, ಸ್ವೆಟರ್‌ಗಳ ಮೊರೆ ಹೋಗಿದ್ದಾರೆ.