ಚೆನ್ನೈ(ಜ.03): ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲೂರಿನ ಖ್ಯಾತ ದೇವಾಲು ಶನೈಶ್ಚರ ದೇವಸ್ಥಾನಕ್ಕೆ ಸ್ಯಾಂಡಲ್‌ವುಡ್ ನಟ ಯಶ್ ಭೇಟಿ ಕೊಟ್ಟಿದ್ದಾರೆ. ವಿಶೇಷ ಎಂದರೆ ನಟನ ಜೊತೆ ಡಿಸಿಎಂ ಕೂಡಾ ಇದ್ದರು.

ಡಿಸಿಎಂ ಆಶ್ವತ್ಥ್‌ ನಾರಾಯಣ್ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ರಾಕಿ ಭಾಯ್. ಯಶ್ ಜೊತೆ ಕೆಜಿಎಫ್ 2 ನಿರ್ಮಾಪಕ ವಿಜಯ್ ಕಿರಂಗಂದೂರು ಕೂಡ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.

ಜ. 01 ರಿಂದ ಶಾಲಾ, ಕಾಲೇಜು ಪ್ರಾರಂಭದಲ್ಲಿ ಬದಲಾವಣೆ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ್

ಸೋಷಿಯಲ್ ಮೀಡಿಯಾದಲ್ಲಿ ಡಿಸಿಎಂ ಜೊತೆ ಯಶ್ ದೇವಾಲಯಕ್ಕೆ ಹೋಗಿರುವ ಫೋಟೋ ಹರಿದಾಡುತ್ತಿವೆ  ಆಶ್ವತ್ ನಾರಾಯಣ್ ಜೊತೆ ಯಶ್ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಸ್ ಚರ್ಚೆ ಮಾಡ್ತಿದ್ದಾರೆ ಜನ.

ಅಂತೂ ಇವರಿಬ್ಬರೂ ಪ್ಲಾನ್ ಮಾಡಿ ಜೊತೆಗೇ ಹೋದರಾ..? ಅಥವಾ ಅಲ್ಲಿ ಭೇಟಿಯಾದರಾ ಎಂಬುದು ಗೊತ್ತಿಲ್ಲ. ಡಿಸಿಎಂ ಜೊತೆ ನಟ ದೇವಾಲಯಕ್ಕೆ ಹೋಗಿರುವ ಸುದ್ದಿ ಮಾತ್ರ ಎಲ್ಲೆಡೆ ವೈರಲ್ ಆಗಿದೆ.