ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ದೇಗುಲ ಮತ್ತು ಶಾಲೆಗಳ ಬಳಿಯ 700 ಬಾರ್‌ಗಳನ್ನು ಮುಚ್ಚುವ ನಿರ್ಧಾರವನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ಟೀಕಿಸಿದ್ದಾರೆ. ಇದು ಆಡಳಿತದ ಅನುಭವವಿಲ್ಲದ ಆತುರದ ನಿರ್ಧಾರವಾಗಿದ್ದು, ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಧುಗಿರಿ (ತುಮಕೂರು): ತಮಿಳುನಾಡಿನಲ್ಲಿ ಮುಖ್ಯಮಂತ್ರಿ ವಿಜಯ್‌ ಅವರು ದೇಗುಲ ಮತ್ತು ಶಾಲೆಗಳ ಬಳಿಯ 700 ಬಾರ್‌ಗಳನ್ನು ಏಕಾಏಕಿ ಬಂದ್‌ ಮಾಡುವುದಾಗಿ ಕೈಗೊಂಡಿರುವ ನಿರ್ಧಾರ ಸರಿಯಲ್ಲ ಎಂದು ಮಾಜಿ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಜಯ್‌ಗೆ ಆಡಳಿತ ನಡೆಸಿದ ಅನುಭವ ಇಲ್ಲ:

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿಜಯ್‌ ಅವರಿಗೆ ಆಡಳಿತದ ಅನುಭವವಿಲ್ಲ. ಸರ್ಕಾರಕ್ಕೆ ಆದಾಯವನ್ನು ತರುವ ಬಾರ್‌ಗಳನ್ನು ಬಂದ್‌ ಮಾಡುವುದು ಆತುರದ ನಿರ್ಧಾರ. 700 ಬಾರ್‌ಗಳನ್ನು ಮುಚ್ಚುವ ಬದಲಾಗಿ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು, ದೇಗುಲಗಳ ಬಳಿ ಅವುಗಳನ್ನು ತೆರೆಯದಂತೆ ಕ್ರಮ ವಹಿಸಬಹುದಾಗಿತ್ತು’ ಎಂದು ಸಲಹೆ ನೀಡಿದರು.

ಬಾರ್ ಬಂದ್ ಮಾಡಿದರೆ ಸಮಸ್ಯೆ ಎದುರಿಸಬೇಕು

ಭಾವಾವೇಶದಿಂದ ಭರವಸೆಗಳನ್ನು ನೀಡುವುದರಿಂದ ಮುಂಬರುವ ಸಮಸ್ಯೆ-ಸವಾಲು ಹೇಗೆ ಎದುರಿಸುವರೋ ನೋಡಬೇಕು. ವಿಜಯ್‌ರ ಹಾದಿ ಮುಳ್ಳಿನಿಂದ ಕೂಡಿದ್ದು, ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು.

YouTube video player