ಅಂತರ್ಜಾತಿ ವಿವಾಹದಿಂದ ಅಸಮಾನತೆ, ಜಾತಿ ವ್ಯವಸ್ಥೆ ತೊಡೆದು ಹಾಕಲು ಸಾಧ್ಯ: ಸಿಎಂ

ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ತೊಡೆದು ಹಾಕಲು ಜನಸಂಖ್ಯೆ ನಿಯಂತ್ರಣ ಮಾಡಿದಾಗ ದೇಶದ ಉತ್ಪಾದನೆಯನ್ನು ಸಮಾನವಾಗಿ ಹಂಚಿಕೆ ಸಾಧ್ಯವಾಗಲಿದೆ. ಜತೆಗೆ ಅಂತರ ಜಾತೀಯ ವಿವಾಹದ ಮೂಲಕ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

CM Siddaramaiahs speech at kamala hampana sahitya vedike  work launch event rav

ಬೆಂಗಳೂರು (ಸೆ.9) :  ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ತೊಡೆದು ಹಾಕಲು ಜನಸಂಖ್ಯೆ ನಿಯಂತ್ರಣ ಮಾಡಿದಾಗ ದೇಶದ ಉತ್ಪಾದನೆಯನ್ನು ಸಮಾನವಾಗಿ ಹಂಚಿಕೆ ಸಾಧ್ಯವಾಗಲಿದೆ. ಜತೆಗೆ ಅಂತರ ಜಾತೀಯ ವಿವಾಹದ ಮೂಲಕ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕಮಲಾ ಹಂಪನಾ ಸಾಹಿತ್ಯ ವೇದಿಕೆ’ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೀನಾ ದೇಶ ಜನಸಂಖ್ಯೆಯಲ್ಲಿ ನಮಗಿಂತ ಮುಂದಿದೆ. ಅದರಿಂದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುವುದರ ಜತೆಗೆ, ಸಮಾಜದಲ್ಲಿ ಎಲ್ಲ ರೀತಿಯ ಅಸಮಾನತೆ ಹೆಚ್ಚುತ್ತಿದೆ ಎಂದು ಅರಿತ ಚೈನಾ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಅದೇ ಮಾದರಿಯನ್ನು ಭಾರತದಲ್ಲೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಸಿದ್ದರಾಮಯ್ಯ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

ಬಸವಾದಿ ಶರಣರು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಅಂತರ ಜಾತಿ ವಿವಾಹಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅದನ್ನು ಈಗ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಅಂತರ ಜಾತೀಯ ವಿವಾಹದಿಂದಾಗಿ ಸಮಾಜದಲ್ಲಿನ ಜಾತಿ ವ್ಯವಸ್ಥೆಯ ನಿವಾರಣೆಯಾಗುವುದರ ಜತೆಗೆ, ಅಸಮಾನತೆ ತೊಡೆದು ಹಾಕಬಹುದು ಎಂದು ಹೇಳಿದರು.

ದೇಶದ ಉತ್ಪಾದನೆಯು ಕೆಲವರ ಬಳಿ ಮಾತ್ರ ಶೇಖರಣೆಯಾಗುತ್ತಿದೆ. ಬಹುಸಂಖ್ಯಾತರು ಈಗಲೂ ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಸಮರ್ಪಕವಾಗಿ ಜಾರಿಯಾಗದಂತೆ ಮಾಡಿದೆ. ನಾವೆಲ್ಲ ಪ್ರಾಣಿಗಳನ್ನು ಪ್ರೀತಿಸುತ್ತೇವೆ, ಮನುಷ್ಯರನ್ನು ದ್ವೇಷಿಸುತ್ತೇವೆ. ಶಾಂತಿಯುತ ಸಮಾಜ, ಸಮಾನತೆಯನ್ನು ಜಾರಿ ಮಾಡಲು ಮನುಷ್ಯ ಮನುಷ್ಯನನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದು ತಿಳಿಸಿದರು.

 

ಕಾಂಗ್ರೆಸ್ಸಲ್ಲಿ ಲಿಂಗಾಯತರು 2ನೇ ದರ್ಜೆಯವರು: ಗೋವಿಂದ ಕಾರಜೋಳ

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಹಂಪನಾ ಮತ್ತು ಕಮಲಾ ಹಂಪನಾ ಅವರು ವಿಶ್ರಾಂತರಾಗಿರುವ ಸಮಯದಲ್ಲಿ ಕನ್ನಡ ಸಾಹಿತ್ಯಕ್ಕೆ ಅವಿಶ್ರಾಂತರಾಗಿ ದುಡಿಯುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಕೃತಿಗಳನ್ನು ನೀಡಿದ್ದು, ಕನ್ನಡ ಮೀಮಾಂಸೆಯಲ್ಲಿ ಬಿಟ್ಟು ಹೋದ, ನಿರ್ಲಕ್ಷಿಸಲ್ಪಟ್ಟತಂತುಗಳ ಜೋಡಣೆ ಮಾಡುವ ಕೆಲಸವನ್ನು ಅವರು ಮಾಡಿದ್ದಾರೆ. ಇಂಗ್ಲಿಷ್‌, ಕನ್ನಡ, ಪ್ರಾಕೃತ ಭಾಷೆಯ ಸಾಹಿತ್ಯವನ್ನು ಹೋಲಿಕೆ ಮಾಡುವ ಕನ್ನಡ ಸಾಹಿತ್ಯ ಹೆಚ್ಚಾಗಬೇಕು. ಅವರ ಕೃತಿಗಳು ಧರ್ಮದೊಳಗಿದ್ದು, ಧರ್ಮವನ್ನು ಮೀರುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಸಾಹಿತಿಗಳಾದ ಡಾ. ಕಮಲಾ ಹಂಪನಾ ಅವರ ‘ಬೆಳಕು ಬಿತ್ತಿದವರು’, ಡಾ. ಹಂಪನಾ ಅವರ ‘ಪ್ರಾಕೃತ ಕಥಾ ಸಾಹಿತ್ಯ’, ಪ್ರೊ. ಪ್ರತಿಭಾ ಪಾಶ್ರ್ವನಾಥ್‌ ಅವರ ‘ದಿ ಜರ್ನಿ ಆಫ್‌ ಲೈಫ್‌’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಪತ್ರಕರ್ತ ಜಿ.ಎನ್‌. ಮೋಹನ್‌ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios